ಕರ್ನಾಟಕ

karnataka

ಪ್ರಸಕ್ತ ವರ್ಷ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟಿರಲಿದೆ: ಎಡಿಬಿ ಅಂದಾಜು

By

Published : Dec 14, 2022, 1:54 PM IST

2022-23 ರ ಹಣಕಾಸು ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023) ADB ಯ 7 ಶೇಕಡಾ ಬೆಳವಣಿಗೆಯ ಅಂದಾಜು ಅದರ ಸೆಪ್ಟೆಂಬರ್ ಅಂದಾಜಿನಿಂದ ಯಾವುದೇ ಬದಲಾವಣೆಯಾಗಿಲ್ಲ. 2021-22 ಕ್ಕೆ ಹೋಲಿಸಿದರೆ ಈ ಬೆಳವಣಿಗೆ ಶೇಕಡಾ 8.7 ರಷ್ಟಿತ್ತು.

ಪ್ರಸಕ್ತ ವರ್ಷ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟು: ಎಡಿಬಿ ಅಂದಾಜು
India GDP growth rate at 7 percent this year ADB estimates

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರ ಈ ಹಿಂದಿನಂತೆ ಶೇಕಡಾ 7 ರಷ್ಟೇ ಇರಲಿದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ನಿರೀಕ್ಷೆ ಮಾಡಿದೆ. ಒಟ್ಟಾರೆ ಏಷ್ಯಾ ಖಂಡವನ್ನು ಪರಿಗಣಿಸಿದಲ್ಲಿ ಇದು ಈ ಮುಂಚಿನ ನಿರೀಕ್ಷಿತ ವೇಗಕ್ಕಿಂತ ಕಡಿಮೆ ಎಂದು ಅದು ಹೇಳಿದೆ.

2022-23 ರ ಹಣಕಾಸು ವರ್ಷದಲ್ಲಿ (ಏಪ್ರಿಲ್ 2022 ರಿಂದ ಮಾರ್ಚ್ 2023) ADB ಯ 7 ಶೇಕಡಾ ಬೆಳವಣಿಗೆಯ ಅಂದಾಜು ಅದರ ಸೆಪ್ಟೆಂಬರ್ ಅಂದಾಜಿನಿಂದ ಯಾವುದೇ ಬದಲಾವಣೆಯಾಗಿಲ್ಲ. 2021-22 ಕ್ಕೆ ಹೋಲಿಸಿದರೆ ಈ ಬೆಳವಣಿಗೆ ಶೇಕಡಾ 8.7 ರಷ್ಟಿತ್ತು.

ಇನ್ನು 2013-24ನೇ ಸಾಲಿಗೆ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇಕಡಾ 7.2ರಕ್ಕೆ ಅಂದಾಜು ಮಾಡಲಾಗಿದೆ. ಇತ್ತೀಚಿನ ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆಯು 7.0 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ. ಇತ್ತೀಚಿನ ಕೆಲವು ಅಧಿಕ ಆವರ್ತನ ಸೂಚಕಗಳು ನಿರೀಕ್ಷೆಗಿಂತ ಹೆಚ್ಚು ಅನುಕೂಲಕರವಾಗಿವೆ.

ಅದರಲ್ಲೂ ಮುಖ್ಯವಾಗಿ ಗ್ರಾಹಕ ವಿಶ್ವಾಸ, ವಿದ್ಯುತ್ ಸರಬರಾಜು ಮತ್ತು ಖರೀದಿ ವ್ಯವಸ್ಥಾಪಕ ಸೂಚ್ಯಂಕಗಳು ಹೆಚ್ಚು ಅನುಕೂಲಕರವಾಗಿವೆ. ನಿರ್ದಿಷ್ಟವಾಗಿ ರಫ್ತುಗಳಲ್ಲಿ, ಹೆಚ್ಚಾಗಿ ಜವಳಿ ಮತ್ತು ಕಬ್ಬಿಣದ ಅದಿರು ಮತ್ತು ಗ್ರಾಹಕ ವಸ್ತುಗಳ ಉತ್ಪಾದನೆ ಕಡಿಮೆ ಅನುಕೂಲಕರವಾಗಿವೆ ಎಂದು ಅದು ಹೇಳಿದೆ. 2023-34 ರ ಬೆಳವಣಿಗೆಯ ಮುನ್ಸೂಚನೆಯು ಶೇಕಡಾ 7.2 ಕ್ಕೆ ಬದಲಾಗದೇ ಉಳಿಯಲಿದೆ.

ಭಾರತದಲ್ಲಿ ಹಣದುಬ್ಬರವು ಶೇ 5.8ಕ್ಕೆ ಇಳಿಯುವ ಮುನ್ನ 2022-23 ರಲ್ಲಿ ಶೇ 6.7 ಕ್ಕೆ ಏರುವ ನಿರೀಕ್ಷೆಯಿದೆ. ಭಾರತದಲ್ಲಿ, ಆರ್ಥಿಕತೆಯು 2022-23 ರ ಆರ್ಥಿಕ ವರ್ಷದ Q2 (ಜುಲೈ-ಸೆಪ್ಟೆಂಬರ್) ನಲ್ಲಿ ಶೇಕಡಾ 6.3 ರಷ್ಟು ಬೆಳವಣಿಗೆಯಾಗಿದೆ. ಜಾಗತಿಕ ಮಂದಗತಿಯ ಹೊರತಾಗಿಯೂ ರಫ್ತುಗಳು ಶೇಕಡಾ 11.5 ರಷ್ಟು ಬೆಳವಣಿಗೆಯಾಗಿದೆ.

ಪೂರೈಕೆಯ ಭಾಗದಲ್ಲಿ ನೋಡಿದರೆ, ಸೇವಾ ವಲಯದ ಬೆಳವಣಿಗೆಯು ಶೇಕಡಾ 9.3 ರಷ್ಟು ಹೆಚ್ಚಳ ಕಂಡಿದೆ. ಇದು ಜಿಡಿಪಿ ಬೆಳವಣಿಗೆಗೆ 4.6 ಶೇಕಡಾ ಪಾಯಿಂಟ್‌ಗಳನ್ನು ಕೊಡುಗೆ ನೀಡಿದೆ. ಇದಕ್ಕೆ ವ್ಯತಿರಿಕ್ತವಾಗಿ ಉದ್ಯಮವು ಶೇಕಡಾ 0.8 ರಷ್ಟು ಸಣ್ಣ ಇಳಿಕೆಯನ್ನು ಕಂಡಿದೆ.

ಇದನ್ನೂ ಓದಿ: ಭಾರತದ ಜಿಡಿಪಿ ಬೆಳವಣಿಗೆಯನ್ನು ಶೇ.6.9ಕ್ಕೇರಿಸಿದ ವಿಶ್ವಬ್ಯಾಂಕ್​

ABOUT THE AUTHOR

...view details