ಕರ್ನಾಟಕ

karnataka

ಕಾರ್​ ಡೆಲಿವರಿ ವಿಳಂಬಕ್ಕೆ ಬೇಸರ.. ಯುವಕ ಆತ್ಮಹತ್ಯೆಗೆ ಶರಣು

By

Published : Jul 4, 2022, 5:29 PM IST

ಮುಂಗಡವಾಗಿ ಕೇಳಿದಷ್ಟು ಹಣ ಕೊಟ್ಟರೂ ಡೆಲಿವರಿ ಆಗದ ಕಾರು-ನೊಂದ ಯುವಕ ಆತ್ಮಹತ್ಯೆಗೆ ಶರಣು- ತೆಲಂಗಾಣದಲ್ಲಿ ಪ್ರಕರಣ

ಕಾರ್​ ಡೆಲಿವರಿ ವಿಳಂಬಕ್ಕೆ ಬೇಸರಗೊಂಡು ಯುವಕ ಆತ್ಮಹತ್ಯೆ
ಕಾರ್​ ಡೆಲಿವರಿ ವಿಳಂಬಕ್ಕೆ ಬೇಸರಗೊಂಡು ಯುವಕ ಆತ್ಮಹತ್ಯೆ

ಹೈದರಾಬಾದ್​(ತೆಲಂಗಾಣ) : ಸಮಯಕ್ಕೆ ಸರಿಯಾಗಿ ಕಾರು ವಿತರಣೆಯಾಗಲಿಲ್ಲ ಎಂದು ನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಮರೆಡ್ಡಿ ಜಿಲ್ಲೆಯ ಎಲ್ಲರೆಡ್ಡಿ ತಾಲೂಕಿನಲ್ಲಿ ಭಾನುವಾರ ಈ ಪ್ರಕರಣ ನಡೆದಿದೆ.

ಸ್ಥಳೀಯರು ಮತ್ತು ಪೊಲೀಸರ ಮಾಹಿತಿ ಪ್ರಕಾರ, ಎಲ್ಲರೆಡ್ಡಿ ಮಂಡಲದ ಕಲ್ಯಾಣಿ ಗ್ರಾಮದ ನಿವಾಸಿ ತೆಲಗಾಪುರಂ ಕೃಷ್ಣ (21) ಕಾರು ಖರೀದಿಸಿ ನಂತರ ಅದನ್ನು ಬಾಡಿಗೆಗೆ ಬಿಟ್ಟು ಉದ್ಯೋಗ ಮಾಡಲು ಬಯಸಿದ್ದ. ಇದಕ್ಕಾಗಿ ಎಲ್ಲರೆಡ್ಡಿ ಪಟ್ಟಣದ ಶೋರೂಂನ್ನು ಸಂಪರ್ಕಿಸಿದ್ದ. ಆ ವೇಳೆ ಕಾರಿನ ಬೆಲೆ ರೂ.8.71 ಲಕ್ಷ ರೂಪಾಯಿ ಆಗಿದ್ದು ರೂ.2.5 ಲಕ್ಷವನ್ನು ಮುಂಗಡ ಪಾವತಿಯಾಗಿ ನೀಡುವಂತೆ ತಿಳಿಸಿದ್ದರು. ಅದರಂತೆ ಮೇ 23 ರಂದು 50 ಸಾವಿರ ರೂ. ಹಣ ಪಾವತಿಸಿದ್ದ. ಉಳಿದ ರೂ.2 ಲಕ್ಷ ಪಾವತಿಸಿ ಕಾರು ತೆಗೆದುಕೊಂಡು ಹೋಗುವಂತೆ ಶೋರೂಮ್​ ಸಿಬ್ಬಂದಿ ಸೂಚಿಸಿದ್ದರು.

ಯುವಕ 2 ಲಕ್ಷ ರೂ.ಗಳನ್ನು ಸಂಗ್ರಹಿಸಿ ಶನಿವಾರ ಶೋರೂಂಗೆ ತೆರಳಿದ್ದಾನೆ. ಆ ವೇಳೆ ಶೋರೂಂ ಮ್ಯಾನೇಜರ್​ಗೆ 2 ಲಕ್ಷ ನೀಡಿ ಕಾರ್​ ಡೆಲಿವರಿ ಮಾಡಿ ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಅವರು ಇನ್ನೂ 50 ಸಾವಿರ ಪಾವತಿ ಮಾಡಿದರೆ ಕಾರ್​​ ಕೊಡುತ್ತೇವೆ ಎಂದು ಹೇಳಿ ಕಳುಹಿಸಿದ್ದರಂತೆ.

ಶೋರೂಂ ಸಿಬ್ಬಂದಿ ಮೋಸ ಮಾಡಿದ್ದಾರೆ ಎಂದು ತಿಳಿದು ಬೇಸರಗೊಂಡು ಭಾನುವಾರ ಬೆಳಗ್ಗೆ ಮನೆಯಲ್ಲಿ ಯುವಕ ಕೃಷ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕ್ಯಾಮರಾ ಮುಂದೆಯೇ ಒಳ ಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪಿಗ್ಗಿ ಹೀಗಂದ್ರು

TAGGED:

ABOUT THE AUTHOR

...view details