ETV Bharat / entertainment

ಕ್ಯಾಮರಾ ಮುಂದೆಯೇ ಒಳ ಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪಿಗ್ಗಿ ಹೀಗಂದ್ರು

author img

By

Published : Jul 4, 2022, 5:03 PM IST

ಅನ್ಶುಲಾ ತನ್ನ ಒಳಉಡುಪನ್ನು ಕ್ಯಾಮರಾ ಮುಂದೆಯೇ ಸಂತೋಷದಿಂದ ತೆಗೆದಿದ್ದಾರೆ. ಅಷ್ಟೇ ಅಲ್ಲಾ, ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕ್ಯಾಮಾರಾ ಮುಂದೆಯೇ ಒಳುಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
ಕ್ಯಾಮಾರಾ ಮುಂದೆಯೇ ಒಳುಉಡುಪು ತೆಗೆದ ಅರ್ಜುನ್ ಕಪೂರ್ ಸಹೋದರಿ: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಹೈದರಾಬಾದ್: ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ಗೆಳತಿ ಮಲೈಕಾ ಅರೋರಾ ಅವರೊಂದಿಗೆ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ನಟನ ಸಹೋದರಿ ಅನ್ಶುಲಾ ಕಪೂರ್ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿ ಉಂಟು ಮಾಡಿದ್ದಾರೆ.

ಅನ್ಶುಲಾ ಇನ್ನೂ ನಟಿಯಾಗಿಲ್ಲ. ಆದರೂ ಅವರು ಹೆಚ್ಚು ಫೇಮಸ್​ ಆಗಿದ್ದಾರೆ. ಅನ್ಶುಲಾ ತನ್ನ ಒಳಉಡುಪನ್ನು ಕ್ಯಾಮರಾ ಮುಂದೆಯೇ ಸಂತೋಷದಿಂದ ತೆಗೆದಿದ್ದಾರೆ. ಅಷ್ಟೇ ಅಲ್ಲಾ, ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪರಿಣಾಮ ನೆಟ್ಟಿಗರೊಟ್ಟಿಗೆ ಪ್ರಿಯಾಂಕಾ ಚೋಪ್ರಾ ಸಹ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಇವರು ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ದಪ್ಪ ಇದ್ದುದರಿಂದ ಫಿಟ್ ಆಗಲು ನಿರಂತರವಾಗಿ ದೇಹವನ್ನು ದಂಡಿಸಿಕೊಂಡು ಬರುತ್ತಿದ್ದಾರೆ. ಈಗಾಗಲೇ ಇವರು ವ್ಯಾಯಾಮದ ಹಲವಾರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಬಂದಿದ್ದಾರೆ. ಅದರಂತೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಒಳ ಉಡುಪನ್ನು (ಬ್ರಾ) ತೆಗೆಯುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಅನ್ಶುಲಾ ತಮ್ಮ ಒಳ ಉಡುಪನ್ನು ಕ್ಯಾಮರಾದ ಮುಂದೆ ತೆಗೆದಿರುವುದು ಕಂಡುಬರುತ್ತದೆ. ಈ ವಿಡಿಯೋಗೆ 'ಭಾನುವಾರ ಬ್ರಂಚ್‌ನಿಂದ ಮನೆಗೆ ಬಂದ ನಂತರ ಅತ್ಯಂತ ಸಂತೋಷದ ಕ್ಷಣ, #ನೋಬ್ರಾಕ್ಲಬ್ ' ಎಂದು ಶೀರ್ಷಿಕೆ ಬರೆದಿದ್ದಾರೆ.

ಇದೀಗ ಪ್ರಿಯಾಂಕಾ ಚೋಪ್ರಾ ಅವರು ಅನ್ಶುಲಾ ಅವರ ವಿಡಿಯೋಗೆ 'ಪ್ರತಿದಿನವೂ' ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸ್ಮೈಲಿಂಗ್​ ಇಮೋಜಿ ಹಾಕಿದ್ದಾರೆ. ಕೊರೊನಾ ಸಮಯದಲ್ಲಿ ಪ್ರತಿದಿನ ಭಾನುವಾರ ಎಂದು ಮಹಿಳಾ ಬಳಕೆದಾರರು ಬರೆದಿದ್ದಾರೆ. ಈ ಕಾಮೆಂಟ್‌ಗೆ ಅನ್ಶುಲಾ ನಗುತ್ತಾ ಉತ್ತರಿಸಿದ್ದು, ಸಂಪೂರ್ಣ ಸತ್ಯ ಎಂದಿದ್ದಾರೆ. ಬಹುತೇಕ ಎಲ್ಲಾ ಮಹಿಳಾ ಬಳಕೆದಾರರು ಅನ್ಶುಲಾ ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.