ಕರ್ನಾಟಕ

karnataka

ಕೆಸಿಆರ್​ ಪಿಎಂ ಆಗಲಿ: ಮದ್ಯದ ಬಾಟಲಿ, ಕೋಳಿ ವಿತರಿಸಿದ ಟಿಆರ್​ಎಸ್ ಮುಖಂಡ!

By

Published : Oct 4, 2022, 5:02 PM IST

trs-leader-rajanala-srihari-distributes-liquor-bottles-and-chicken
ಕೆಸಿಆರ್​ ಪಿಎಂ ಆಗಲಿ: ಮದ್ಯದ ಬಾಟಲಿ, ಕೋಳಿಗಳ ವಿತರಿಸಿದ ಟಿಆರ್​ಎಸ್ ಮುಖಂಡ

ತೆಲಂಗಾಣದ ವರಂಗಲ್​ನಲ್ಲಿ ಟಿಆರ್​ಎಸ್​ ಪಕ್ಷದ ಮುಖಂಡರು ದಸರಾ ಉಡುಗೊರೆಯಾಗಿ ಹಮಾಲಿಗಳಿಗೆ ಮದ್ಯದ ಬಾಟಲಿ ಮತ್ತು ಕೋಳಿ ವಿತರಿಸಿದ್ದಾರೆ.

ವರಂಗಲ್‌ (ತೆಲಂಗಾಣ): ರಾಷ್ಟ್ರೀಯ ರಾಜಕೀಯ ಪಕ್ಷ ಘೋಷಿಸಲು ಸಜ್ಜಾಗಿರುವ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮುಂದಿನ ಪ್ರಧಾನಿ ಆಗಬೇಕು ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಪಕ್ಷದ ನಾಯಕರು ಮದ್ಯದ ಬಾಟಲಿ ಮತ್ತು ಕೋಳಿ ವಿತರಿಸಿದ್ದು, ವಿವಾದಕ್ಕೀಡಾಗಿದೆ.

ವರಂಗಲ್​ನಲ್ಲಿ ಪಕ್ಷದ ಮುಖಂಡ ರಾಜನಾಳ ಶ್ರೀಹರಿ ಅವರು ಸುಮಾರು ಕಾರ್ಮಿಕರಿಗೆ ಮದ್ಯದ ಬಾಟಲಿ ಹಾಗೂ ಕೋಳಿಗಳನ್ನು ಸಾರ್ವಜನಿಕವಾಗಿ ವಿತರಿಸಿದ್ದಾರೆ. ಆಡಳಿತ ಪಕ್ಷದಲ್ಲಿದ್ದುಕೊಂಡು ಈ ರೀತಿ ಮದ್ಯ ಹಂಚಿರುವುದು ಟೀಕೆಗೂ ಗುರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖಂಡ ರಾಜನಾಳ ಶ್ರೀಹರಿ, ದಸರಾ ಉಡುಗೊರೆಯಾಗಿ ಹಮಾಲಿಗಳಿಗೆ ಮದ್ಯ ಹಾಗೂ ಕೋಳಿ ಹಂಚಲಾಗಿದೆ. ಅದರೆ, ಇದರಲ್ಲಿ ಕೆಲವರು ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೇ, ಸಿಎಂ ಕೆಸಿಆರ್ ರಾಷ್ಟ್ರೀಯ ಪಕ್ಷ ಘೋಷಿಸುತ್ತಿರುವುದು ಸಂತಸ ತಂದಿದೆ. ಕೆಸಿಆರ್ ನೇತೃತ್ವದಲ್ಲಿ ತೆಲಂಗಾಣ ರಾಜ್ಯ ಅಭಿವೃದ್ಧಿಯಲ್ಲಿ ಇನ್ನಷ್ಟು ಮುನ್ನಡೆಯಲಿದೆ. ಜೊತೆಗೆ ರಾಷ್ಟ್ರ ರಾಜಕಾರಣದಲ್ಲಿ ಕೆಸಿಆರ್ ವಿಶೇಷ ಛಾಪು ಮೂಡಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಾಳೆ ತೆಲಂಗಾಣ ಸಿಎಂ ಕೆಸಿಆರ್​ ರಾಷ್ಟ್ರೀಯ ಪಕ್ಷ ಘೋಷಣೆ.. ಪಾರ್ಟಿ ಹೆಸರು ಬಿಆರ್​ಎಸ್?​

ABOUT THE AUTHOR

...view details