ಕರ್ನಾಟಕ

karnataka

3 ಲಕ್ಷ ಹೂಡಿಕೆ ಮಾಡಿ 30 ಲಕ್ಷ ಲಾಭ; ಇದು ವ್ಯಾಪಾರವಲ್ಲ, ಭಕ್ತರ ಸುಲಿಗೆ!

By

Published : Feb 21, 2023, 11:36 AM IST

ಶಿವರಾತ್ರಿ ಸಮಯದಲ್ಲಿ ದೇಗುಲಕ್ಕೆ ಬಂದ ಭಕ್ತರನ್ನು ಜೂಜು ಆಟದಲ್ಲಿ ಮಗ್ನರಾಗಿ ಮಾಡಿ ಸಂಘಟನೆಗಳು ಲಕ್ಷಾಂತರ ರೂ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Etv Bharat
Etv Bharat

ಗಡಿವೆಮುಲು: 3 ಲಕ್ಷವನ್ನು ಹೂಡಿಕೆ ಮಾಡಿ ಎರಡೇ ದಿನದಲ್ಲಿ 30 ಲಕ್ಷ ಲಾಭವನ್ನು ಪಡೆದಿದ್ದಾರೆ. ಈ ಹಣವನ್ನು ಯಾವುದೇ ವ್ಯಾಪಾರ ಮಾರ್ಗದಿಂದ ಪಡೆದಿಲ್ಲ. ಬದಲಾಗಿ ಭಕ್ತರನ್ನು ಲೂಟಿ ಮಾಡಿ ಪಡೆಯಲಾಗಿದೆ. ಶಿವರಾತ್ರಿ ಸಮಯದಲ್ಲಿ ದೇವರಿಗೆ ಅಷ್ಟ ಐಶ್ಚರ್ಯ ಕರುಣಿಸು ಎಂದು ಬಂದ ಭಕ್ತರನ್ನು ಸಂಪೂರ್ಣವಾಗಿ ಲೂಟಿ ಮಾಡಲಾಗಿದೆ. ಮಕ್ಕಳು ದೊಡ್ಡವರು ಎಂಬುದನ್ನು ನೋಡದೇ ಅವರಿಂದ ಜೂಜಿಗೆ ಹಣ ಪಡೆಯಲಾಗಿದೆ.

ಏನಿದು ಘಟನೆ: ಕರ್ನೂಲ್​ ಜಿಲ್ಲೆಯ ಗಡಿವೆಮುಲು ನಲ್ಲಿರುವ ದುರ್ಗ ಭೋಗೇಶ್ವರ ಕ್ಷೇತ್ರದಲ್ಲಿ ಈ ರೀತಿಯ ಪ್ರಕರಣ ನಡೆದಿದೆ. ಇದಕ್ಕೆ ಆಡಳಿತ ಮಂಡಳಿಯೇ ಕಾರಣ ಎಂದು ಭಕ್ತರು ದೂರಿದ್ದಾರೆ. ಶಿವರಾತ್ರಿಗೆ ಬರುವ ಭಕ್ತರನ್ನು ಗುರಿಯಾಗಿಸಿಕೊಂಡು ಇಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಈ ಮೂಲಕ ದೇಗುಲದ ಪಾವಿತ್ರತೆಗೆ ಧಕ್ಕೆ ತರಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಭಕ್ತರನ್ನೇ ಸುಲಿಗೆ ಮಾಡಿದ ಸಂಘಟನೆ: ಇಲ್ಲಿನ ಶ್ರೀ ದುರ್ಗಾ ಭೋಗೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಎರಡು ದಿನ ಶಿವರಾತ್ರಿ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಭಕ್ತರು ಕೂಡ ದೇವರ ದರ್ಶನಕ್ಕೆ ಬಂದವರು ಕಡೆಗೆ ಜೂಜಿನ ಮೋಡಿಗೆ ಒಳಗಾಗಿದ್ದಾರೆ. ಕೆಲವರು ದೇಗುಲದ ಆವರಣದಲ್ಲಿ ಕೈ ರಾಜಾ ಕೈ ಎಂಬ ಆಟವನ್ನು ಆಯೋಜಿಸಿದ್ದಾರೆ. ಸಂಪೂರ್ಣವಾಗಿ ಜೂಜಿನ ಈ ಆಟ ಭಕ್ತರನ್ನು ಆಕರ್ಷಿಸಿ ಹಣ ಕಳೆದುಕೊಳ್ಳುವಂತೆ ಮಾಡಿದೆ.

ದೇಗುಲದ ಆವರಣದಲ್ಲಿ ಕಳೆದ 15 ವರ್ಷಗಳಿಂದ ಈ ರೀತಿಯ ಜೂಜು ಪ್ರಕರಣ ನಡೆಯುತ್ತಿದ್ದರೂ ಆಡಳಿತ ಮಂಡಳಿ ಇದನ್ನು ತಡೆಯುವಲ್ಲಿ ವಿಫವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿ ಸಮಯದಲ್ಲಿ ಆಡಳಿತ ಮಂಡಳಿ ಈ ಚೂಜು ಚಟುವಟಿಕೆಗೆ ಅವಕಾಶ ನೀಡುತ್ತಿದೆ. ಮುಕ್ತ ವಾತಾವರಣದಲ್ಲಿ ಸಾರ್ವಜನಿಕರು ಈ ಜೂಜು ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲಾಗುತ್ತಿದೆ. ಈ ಮೂಲಕ ಭಕ್ತರನ್ನು ಸುಲಿಗೆ ಮಾಡುವ ಯತ್ನ ನಡೆಸಲಾಗುತ್ತಿದೆ.

ಹಣದ ರುಚಿ ತೋರಿಸಿ ಮೋಸ: ಭಕ್ತರನ್ನು ಸೆಳೆಯುವ ಈ ಜೂಜು ಆಟಕ್ಕಾಗಿ 10 ಟೇಬಲ್​ಗಳನ್ನು ಹಾಕಲಾಗಿದೆ. ಕೈ ರಾಜಾ ಕೈ ಗಾಗಿ ಮೂರು ಲಕ್ಷ ರೂಪಾಯಿ ಬಂಡವಾಳ ಹೂಡಿ ಆಟವನ್ನು ಸಂಘಟಕರು ಆಯೋಜಿಸಿದ್ದರು. ಮುಕ್ತವಾಗಿ ನಡೆದ ಈ ಜೂಜಿನಲ್ಲಿ 10 ರಿಂದ ಸಾವಿರಾರು ರೂವರೆಗೆ ಆಟ ನಡೆಸಲಾಗುವುದು. ಮಕ್ಕಳು ಸೇರಿದಂತೆ ದೊಡ್ಡವರು ಇದರಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಆಟದ ಮೊದಲು ಭಕ್ತರಿಗೆ ಗೆಲುವಿನ ರುಚಿ ತೋರಿಸಿ ಅವರಿಗೆ ದುಡ್ಡು ನೀಡಲಾಗುವುದು. ಇದೇ ಹಣದ ಆಸೆಯಿಂದ ಅವರು ಆಟವನ್ನು ಮುಂದುವರೆಸಿದ್ದು, ಸಾವಿರಾರೂ ನಷ್ಟ ಅನುಭವಿಸಿದ್ದಾರೆ. ಅನೇಕ ಮಂದಿ ಹಣ ಖಾಲಿಯಾದರೂ, ಮನೆಗೆ ಮರಳಿ ಹಣ ತಂದು ಆಟವಾಡಿದ್ದಾರೆ. ಮಕ್ಕಳು, ಯುವಜನರು ಕೂಡ ಸೋತರು ಆಟ ಮುಂದುವರೆಸಿದ್ದಾರೆ. ಇವರ ಆಟ ಕಂಡು ಸಿಟ್ಟಿಗೆದ್ದ ಮಂದಿ ಕೊನೆಗೆ ಇದಕ್ಕೆ ಅವಕಾಶ ನೀಡಿದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ರೀತಿ ಕಾರ್ಯ ಚಟುವಟಿಕೆಗೆ ಮಂಡಲ್​ನಲ್ಲಿ ಅವಕಾಶ ನೀಡದಂತೆ ತಿಳಿಸಿದ್ದಾರೆ.

ದಾಖಲಾಗದ ಪ್ರಕರಣ..ಈ ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಲಿವ್​ ಇನ್​ ಸಂಗಾತಿಗೆ ಬೆಂಕಿ ಹಚ್ಚಿದ ದುರುಳ.. ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ABOUT THE AUTHOR

...view details