ETV Bharat / bharat

ಲಿವ್​ ಇನ್​ ಸಂಗಾತಿಗೆ ಬೆಂಕಿ ಹಚ್ಚಿದ ದುರುಳ.. ಚಿಕಿತ್ಸೆ ಫಲಿಸದೆ ಮಹಿಳೆ ಸಾವು

author img

By

Published : Feb 21, 2023, 9:29 AM IST

ಡ್ರಗ್ಸ್ ಸೇವಿಸುವ ವಿಚಾರವಾಗಿ ಗಲಾಟೆ- ಟರ್ಪಂಟೈನ್ ಆಯಿಲ್ ಸುರಿದು ಲಿವ್​ ಇನ್​ ಸಂಗಾತಿಗೆ ಬೆಂಕಿ ಹಚ್ಚಿದ ದುರುಳ-ಚಿಕಿತ್ಸೆ ಫಲಿಸದೆ ಮಹಿಳೆ ಸಾವು

Representative image
ಪ್ರಾತಿನಿಧಿಕ ಚಿತ್ರ

ನವದೆಹಲಿ: ಶ್ರದ್ಧಾ ವಾಕರ್​ ಹಾಗೂ ನಿಕ್ಕಿ ಯಾದವ್​ ಕೊಲೆ ಪ್ರಕರಣದ ನಂತರ ದೆಹಲಿಯಲ್ಲಿ ಮತ್ತೊಂದು ಅಂತಹದ್ದೇ ರೀತಿಯ ಆಘಾತಕಾರಿ ಘಟನೆ ವರದಿಯಾಗಿದೆ. ಡ್ರಗ್ಸ್ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೋರ್ವ ಲಿವ್​ ಇನ್​ ಸಂಗಾತಿಗೆ 'ಟರ್ಪಂಟೈನ್ ಆಯಿಲ್' ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ವಾಯವ್ಯ ದೆಹಲಿಯ ಅಮನ್‌ ವಿಹಾರ್‌ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಶ್ರದ್ಧಾ ಮರ್ಡರ್ ರೀತಿಯ ಮತ್ತೊಂದು ಘಟನೆ: ಪ್ರೇಯಸಿ ಕೊಲೆ ಮಾಡಿ ಫ್ರಿಜ್​ನಲ್ಲಿ ಶವ ಬಚ್ಚಿಟ್ಟ ಯುವಕ!

ಫೆ.11 ರಂದು, ಸುಟ್ಟ ಗಾಯಗಳೊಂದಿಗೆ ಮಹಿಳೆಯನ್ನು ಎಸ್‌ಜಿಎಂ ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಆಸ್ಪತ್ರೆಗೆ ತೆರಳಿದಾಗ ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು. ಇದರಿಂದ ಆಕೆಯಿಂದ ಯಾವುದೇ ಹೇಳಿಕೆಯನ್ನು ದಾಖಲಿಸಲು ಸಾಧ್ಯವಾಗಿರಲ್ಲ. ಬಳಿಕ ಆಕೆ ವಾಯುವ್ಯ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿ ಎಂದು ಗುರುತಿಸಲಾಗಿತ್ತು. ಆಕೆ ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಕೆ ಸೋಮವಾರ ಮೃತಪಟ್ಟಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಕೆಯ ಕುಟುಂಬ ಸದಸ್ಯರ ಹೇಳಿಕೆಯ ಆಧಾರದ ಮೇಲೆ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಸಂತ್ರಸ್ತೆ ತನ್ನ ಪತಿಯನ್ನು ತೊರೆದು ಕಳೆದ ಆರು ವರ್ಷಗಳಿಂದ ಮೋಹಿತ್ ಎಂದು ಗುರುತಿಸಲಾದ ಆರೋಪಿಯೊಂದಿಗೆ ವಾಸಿಸುತ್ತಿದ್ದಳು ಎಂದು ತನಿಖೆಯಿಂದ ತಿಳಿದು ಬಂದಿದೆ. ಆಕೆಗೆ ಇಬ್ಬರು ಮಕ್ಕಳಿದ್ದರು. ಮೊದಲ ಪತಿಯಿಂದ ಒಂದು ಮಗು ಹಾಗೂ ಮೋಹಿತ್​ನಿಂದ ಇನ್ನೊಂದು ಮಗು ಪಡೆದಿದ್ದಳು. ಫೆಬ್ರವರಿ 10 ರ ರಾತ್ರಿ ಮೋಹಿತ್ ತನ್ನ ಸ್ನೇಹಿತನೊಂದಿಗೆ ಡ್ರಗ್ಸ್ ಸೇವಿಸುತ್ತಿದ್ದನಂತೆ. ಇದನ್ನು ಕಂಡು ಮಹಿಳೆ ಮೋಹಿತ್ ಜೊತೆ ಜಗಳವಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿ ಮೋಹಿತ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​​ ಅ​​ಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ವಾಕರ್​ ಹತ್ಯೆ ಕೇಸ್​: ದೇಹ 35 ತುಂಡು ಮಾಡಿ, ಮೂಳೆ ಗ್ರೈಂಡರ್​ನಲ್ಲಿ ಪುಡಿ ಮಾಡಿದ್ದನಂತೆ ಅಫ್ತಾಬ್​

ಗುವಾಹಟಿಯಲ್ಲೂ ಶ್ರದ್ಧಾ ರೀತಿ ಹತ್ಯೆ ಕೇಸ್‌: ಅಸ್ಸೋಂನ ಗುವಾಹಟಿಯಲ್ಲಿ ಶ್ರದ್ಧಾ ಹತ್ಯೆ ನೆನಪಿಸುವ ಘಟನೆ ನಡೆದಿದೆ. ಮಹಿಳೆಯೊಬ್ಬರು ಪತಿ ಹಾಗೂ ಅತ್ತೆಯನ್ನು ಕೊಂದು ದೇಹದ ಭಾಗಗಳನ್ನು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಇರಿಸಿದ್ದಳು ಎನ್ನಲಾಗಿದೆ. ಏಳು ತಿಂಗಳ ಬಳಿಕ ಪೊಲೀಸರು ನಡೆಸಿದ ರಹಸ್ಯ ತನಿಖೆಯಿಂದ ಕ್ರೂರ ಹತ್ಯೆ ಬಯಲಾಗಿದೆ.

ಇದನ್ನೂ ಓದಿ: ಗುವಾಹಟಿಯಲ್ಲೂ ಶ್ರದ್ಧಾ ರೀತಿ ಹತ್ಯೆ ಕೇಸ್‌: ಗಂಡ, ಅತ್ತೆಯನ್ನು ಕೊಂದು ರೆಫ್ರಿಜರೇಟರ್‌ನಲ್ಲಿಟ್ಟ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.