ಕರ್ನಾಟಕ

karnataka

G20 ಔತಣಕೂಟಕ್ಕೆ 170 ಗಣ್ಯರಿಗೆ ರಾಷ್ಟ್ರಪತಿ ಮುರ್ಮು ಆಹ್ವಾನ: ರಾಜಕೀಯ ನಾಯಕರಿಗಿಲ್ಲ Invite..

By ETV Bharat Karnataka Team

Published : Sep 9, 2023, 2:23 PM IST

G20 Summit: ರಾಷ್ಟ್ರ ರಾಜಧಾನಿ ದೆಹಲಿಯ ಭಾರತ ಮಂಟಪಂನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಜಿ20 ಶೃಂಗಸಭೆಯ ಔತಣಕೂಟ ಆಯೋಜಿಸಿದ್ದಾರೆ. ಆಹ್ವಾನಿತರ ಪಟ್ಟಿ ಇಲ್ಲದೆ.

170 guests on list of G20 special dinner to be hosted by President Murmu
G20 ಔತಣಕೂಟಕ್ಕೆ 170 ಗಣ್ಯರಿಗೆ ರಾಷ್ಟ್ರಪತಿ ಮುರ್ಮು ಆಹ್ವಾನ: ರಾಜಕೀಯ ನಾಯಕರಿಗಿಲ್ಲ Invite..

ನವದೆಹಲಿ:ಜಿ20 ಶೃಂಗಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು (ಸೆಪ್ಟೆಂಬರ್ 9) ಔತಣಕೂಟ ಆಯೋಜಿಸಿದ್ದಾರೆ. ಔತಣಕೂಟದ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಜಾಗತಿಕ ನಾಯಕರು ಹಾಗೂ ಪ್ರತಿನಿಧಿಗಳು ಸೇರಿದಂತೆ ಒಟ್ಟು 170 ಅತಿಥಿಗಳು ಇದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಭಾರತ ಮಂಟಪಂನಲ್ಲಿ ರಾಷ್ಟ್ರಪತಿ ಮುರ್ಮು ಔತಣಕೂಟ ಆಯೋಜಿಸಿದ್ದು, ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಅವರ ಪತ್ನಿ ಸುದೇಶ್ ಧಂಖರ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿದೇಶಿ ನಾಯಕರು ಮತ್ತು ಪ್ರತಿನಿಧಿಗಳ ಮುಖ್ಯಸ್ಥರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ ಸಂಪುಟ ಮತ್ತು ರಾಜ್ಯ ಸಚಿವರು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಇತರ ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ, ಇತರೆ ರಾಜಕೀಯ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿಲ್ಲ.

ಕೇಂದ್ರ ಸಚಿವರ ಪಟ್ಟಿ:ಔತಣಕೂಟದ ಕ್ಯಾಬಿನೆಟ್ ಸಚಿವರ ಪಟ್ಟಿಯಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ಎಸ್.ಜೈಶಂಕರ್​, ಅರ್ಜುನ್ ಮುಂಡಾ, ಸ್ಮೃತಿ ಇರಾನಿ, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್ ಮತ್ತು ಪ್ರಲ್ಹಾದ್ ಜೋಷಿ ಇದ್ದಾರೆ. ಕೇಂದ್ರ ಸಚಿವರಾದ ನಾರಾಯಣ ರಾಣೆ, ಸರ್ಬಾನಂದ ಸೋನೋವಾಲ್, ವೀರೇಂದ್ರ ಕುಮಾರ್, ಗಿರಿರಾಜ್ ಸಿಂಗ್, ಜ್ಯೋತಿರಾದಿತ್ಯ ನಾಥ್ ಸಿಂಧಿಯಾ, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪರಾಸ್, ಗಜೇಂದ್ರ ಸಿಂಗ್ ಶೇಖಾವತ್, ಕಿರಣ್ ರಿಜಿಜು, ರಾಜ್‌ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ, ಭೂಪೇಂದ್ರ ಯಾದವ್, ಮಹೇಂದ್ರನಾಥ್ ಪಾಂಡೆ, ಪುರುಷೋತ್ತಮ್ ರೂಪಾಲಾ, ಜಿ.ಕಿಶನ್ ರೆಡ್ಡಿ ಮತ್ತು ಅನುರಾಗ್ ಠಾಕೂರ್ ಅವರನ್ನು ಆಹ್ವಾನಿಸಲಾಗಿದೆ.

ಕೇಂದ್ರದ ರಾಜ್ಯ ಸಚಿವರಾದ ಇಂದ್ರಜೀತ್ ಸಿಂಗ್, ಜಿತೇಂದ್ರ ಸಿಂಗ್, ಅರ್ಜುನ್​ ರಾಮ್ ಮೇಘವಾಲ್, ಶ್ರೀಪಾದ ನಾಯಕ್, ಫಗ್ಗನ್ ಸಿಂಗ್ ಕುಲಸ್ತೆ, ಪ್ರಹ್ಲಾದ್ ಸಿಂಗ್ ಪಟೇಲ್, ಅಶ್ವಿನಿ ಕುಮಾರ್ ಚೌಬೆ, ವಿಜಯ್ ಕುಮಾರ್ ಸಿಂಗ್, ಕೃಷ್ಣಪಾಲ್ ಗುರ್ಜರ್, ರಾವ್ ಸಾಹೇಬ್ ಪಾಟೀಲ್, ರಾಮದಾಸ್ ಅಠವಳೆ, ಸಾಧ್ವಿ ನಿರಂಜನ ಜ್ಯೋತಿ, ಸಂಜೀವ್ ಕುಮಾರ್ ಬಲಿಯಾನ್, ನಿತ್ಯಾನಂದ್ ರೈ, ಪಂಕಜ್ ಚೌಧರಿ, ಅನುಪ್ರಿಯಾ ಪಟೇಲ್, ಎಸ್​ಪಿ ಸಿಂಗ್ ಬಾಘೇಲ್, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಭಾನು ಪ್ರತಾಪ್ ಸಿಂಗ್ ವರ್ಮಾ, ದರ್ಶನಾ ಜರ್ದೋಶ್, ವಿ.ಮುರಳೀಧರನ್, ಮೀನಾಕ್ಷಿ ಲೇಖಿ, ಸೋಮ್​ ಪ್ರಕಾಶ್​, ರೇಣುಕಾ ಸಿಂಗ್, ರಾಮೇಶ್ವರ್ ತೇಲಿ, ಕೈಲಾಶ್ ಚೌಧರಿ, ಅನ್ನಪೂರ್ಣ ದೇವಿ, ಎ ನಾರಾಯಣ ಸ್ವಾಮಿ, ಕೌಶಲ್ ಕಿಶೋರ್, ಅಜಯ್ ಭಟ್, ಬಿಎಲ್ ವರ್ಮಾ, ಅಜಯ್ ಕುಮಾರ್ ಮಿಶ್ರಾ, ದೇಬು ಸಿಂಗ್ ಚೌಹಾಣ್, ಭಗವಂತ್ ಖೂಬಾ, ಕಪಿಲ್ ಮೊರೇಶ್ವರ್ ಪಾಟೀಲ್, ಪ್ರತಿಮಾ ಭೌಮಿಕ್, ಸುಭಾಷ್ ಸರ್ಕಾರ್, ಭಾಗವತ್ ಕೃಷ್ಣರಾವ್ ಕರಾಡ್, ರಾಜಕುಮಾರ್ ರಂಜನ್ ಸಿಂಗ್, ಭಾರತೀಯ ಪ್ರವೀಣ್ ಪವಾರ್, ವಿಶೇಶ್ವರ್ ತುಡು, ಸುಕಾಂತ್ ಠಾಕೂರ್, ಮಹೇಂದ್ರ ಭಾಯಿ, ಜಾನ್ ಬಾರ್ಲಾ, ಡಾ.ಇಲ್ಮುರುಗನ್, ನಿಸಿತ್ ಪ್ರಮಾಣಿಕ್ ಅವರಿಗೆ ಔತಣಕೂಟದ ಆಹ್ವಾನ ನೀಡಲಾಗಿದೆ.

ಜೊತೆಗೆ ಸಿಎಜಿ ಗಿರೀಶ್ ಚಂದ್ರ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಎನ್‌ಎಸ್‌ಎ ಅಜಿತ್ ದೋವಲ್, ದೆಹಲಿ ಲೆಫ್ಟಿನೆಂಟ್​ ಗರ್ವನರ್​ ವಿಕೆ ಸಕ್ಸೇನಾ, ಅಮಿತಾಭ್ ಕಾಂತ್ ಮತ್ತು ಇತರ ಪ್ರಮುಖ ಅಧಿಕಾರಿಗಳು ಮತ್ತು ಗಣ್ಯ ಅತಿಥಿಗಳು ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್ ಮತ್ತು ಎಚ್.ಡಿ.ದೇವೇಗೌಡರಿಗೂ ಆಹ್ವಾನ ನೀಡಲಾಗಿದೆ. ಆದರೆ, ಆರೋಗ್ಯದ ಕಾರಣದಿಂದ ಜಿ20 ಔತಣಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ದೇವೇಗೌಡರು ಶುಕ್ರವಾರ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಪಟ್ಟಿ: ಔತಣಕೂಟಕ್ಕೆ ಆಹ್ವಾನಿಸಲಾದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಅಸ್ಸೋಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಬಿಹಾರ ಸಿಎಂ ನಿತೀಶ್ ಕುಮಾರ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಗೋವಾ ಸಿಎಂ ಪ್ರಮೋದ್ ಸಾವಂತ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಹರಿಯಾಣ ಸಿಎಂ ಮನೋಹರ್ ಲಾಲ್​ ಖಟ್ಟರ್, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೆಸರು ಇದೆ.

ಕೇರಳ ಸಿಎಂ ಪಿಣರಾಯಿ ವಿಜಯನ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಮಣಿಪುರ ಸಿಎಂ ಎನ್. ಬಿರೇನ್ ಸಿಂಗ್, ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ, ಮಿಜೋರಾಂ ಸಿಎಂ ಝೋರಂತಂಗಾ, ನಾಗಾಲ್ಯಾಂಡ್ ಸಿಎಂ ನೆಫಿಯು ರಿಯೊ, ಒಡಿಶಾ ಸಿಎಂ ನವೀನ್ ಪಟ್ನಾಯಕ್, ಪುದುಚೇರಿ ಸಿಎಂ ರಂಗಸ್ವಾಮಿ, ಪಂಜಾಬ್ ಸಿಎಂ ಭಗವಾನ್ ಸಿಂಗ್ ಮಾನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಸಿಕ್ಕಿಂ ಸಿಎಂ ಪಿಎಸ್ ಗೋಲಾಯ್, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ತ್ರಿಪುರಾ ಸಿಎಂ ಮಾಣಿಕ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೂ ಆಹ್ವಾನ ನೀಡಲಾಗಿದೆ. (ಎಎನ್​ಐ)

ಇದನ್ನೂ ಓದಿ:ಜಿ20 ಅತಿಥಿಗಳಿಗೆ ರಾಷ್ಟ್ರಪತಿ ಔತಣಕೂಟ; ಆಹ್ವಾನ ಬಂದಿಲ್ಲ ಎಂದ ಖರ್ಗೆ, ಅನಾರೋಗ್ಯದಿಂದಾಗಿ ಗೌಡರು ದೂರ

ABOUT THE AUTHOR

...view details