ETV Bharat / state

ಜಿ20 ಅತಿಥಿಗಳಿಗೆ ರಾಷ್ಟ್ರಪತಿ ಔತಣಕೂಟ; ಆಹ್ವಾನ ಬಂದಿಲ್ಲ ಎಂದ ಖರ್ಗೆ, ಅನಾರೋಗ್ಯದಿಂದಾಗಿ ಗೌಡರು ದೂರ

author img

By ETV Bharat Karnataka Team

Published : Sep 8, 2023, 1:52 PM IST

G20 Dinner Invite: ಜಿ20 ರಾಷ್ಟ್ರಗಳ ಶೃಂಗಸಭೆಗೆ ಅಖಾಡ ಸಿದ್ಧವಾಗಿದೆ. ಈಗಾಗಲೇ ಭಾರತಕ್ಕೆ ವಿದೇಶಿ ನಿಯೋಗಗಳ ಆಗಮನವಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶೃಂಗಸಭೆಯ ಗೌರವಾರ್ಥ ಔತಣಕೂಟವನ್ನು ಶನಿವಾರ ಆಯೋಜಿಸಿದ್ದಾರೆ.

G20 Dinner Invite  mallikarjun kharge not invited to g20 dinner  HD Deve Gowda tweet over G20 Dinner Invite  G20 ಅತಿಥಿಗಳಿಗೆ ರಾಷ್ಟ್ರಪತಿ ಔತಣಕೂಟ  ಖರ್ಗೆಗೆ ತಲುಪದ ಆಹ್ವಾನ  G20 ರಾಷ್ಟ್ರಗಳ ಶೃಂಗಸಭೆಗೆ ಎಲ್ಲವೂ ಸಿದ್ಧ  ಭಾರತಕ್ಕೆ ವಿದೇಶಿ ನಿಯೋಗಗಳ ಆಗಮನ ಆರಂಭ  ಜಿ20 ಶೃಂಗಸಭೆಯ ಗೌರವಾರ್ಥ ಔತಣಕೂಟ  ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು  ಔತಣಕೂಟಕ್ಕೆ ದೇವೇಗೌಡ ದೂರ  ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
G20 Dinner Invite mallikarjun kharge not invited to g20 dinner HD Deve Gowda tweet over G20 Dinner Invite G20 ಅತಿಥಿಗಳಿಗೆ ರಾಷ್ಟ್ರಪತಿ ಔತಣಕೂಟ ಖರ್ಗೆಗೆ ತಲುಪದ ಆಹ್ವಾನ G20 ರಾಷ್ಟ್ರಗಳ ಶೃಂಗಸಭೆಗೆ ಎಲ್ಲವೂ ಸಿದ್ಧ ಭಾರತಕ್ಕೆ ವಿದೇಶಿ ನಿಯೋಗಗಳ ಆಗಮನ ಆರಂಭ ಜಿ20 ಶೃಂಗಸಭೆಯ ಗೌರವಾರ್ಥ ಔತಣಕೂಟ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟಕ್ಕೆ ದೇವೇಗೌಡ ದೂರ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ನವದೆಹಲಿ: ಜಿ20 ಶೃಂಗಸಭೆಯ ಗೌರವಾರ್ಥ ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಭೋಜನಕೂಟದಲ್ಲಿ ವಿದೇಶಿ ಅತಿಥಿಗಳು, ಸಂಸದರು, ಕ್ಯಾಬಿನೆಟ್ ಸಚಿವರು ಮತ್ತು ಮಾಜಿ ಪ್ರಧಾನಿಗಳು ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಮನಮೋಹನ್ ಸಿಂಗ್ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇನ್ನೂ ಆಹ್ವಾನ ತಲುಪಿಲ್ಲ ಎಂದು ಅವರ ಕಚೇರಿ ಹೇಳಿದೆ.

ಔತಣಕೂಟಕ್ಕೆ ದೇವೇಗೌಡರು ದೂರ: ಜಿ20 ಶೃಂಗಸಭೆಯ ಅಂಗವಾಗಿ ನವದೆಹಲಿಯಲ್ಲಿ ಏರ್ಪಡಿಸುವ ಔತಣಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಶನಿವಾರ ರಾಷ್ಟ್ರಪತಿ ಏರ್ಪಡಿಸಿರುವ ಔತಣಕೂಟದಲ್ಲಿ ನಾನು ಭಾಗವಹಿಸುವುದಿಲ್ಲ. ಅನಾರೋಗ್ಯದ ಕಾರಣಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ರಾಷ್ಟ್ರಪತಿಗೆ ತಿಳಿಸಿರುವ ಗೌಡರು, ಈ ವಿಚಾರವನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಜಿ20 ಶೃಂಗಸಭೆಯು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

  • I will not be attending the G20 dinner organised by the Hon. President of India Draupadi Murmuji, on 09 September 2023, due to health reasons. I have already communicated this to the government. I wish the G20 summit a grand success. @PMOIndia @rashtrapatibhvn

    — H D Deve Gowda (@H_D_Devegowda) September 8, 2023 " class="align-text-top noRightClick twitterSection" data=" ">

ಮತ್ತೊಂದೆಡೆ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿಗಳ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಶುಕ್ರವಾರ ಮಧ್ಯಾಹ್ನ ಬಂಗಾಳದಿಂದ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಔತಣಕೂಟದ ಜೊತೆಗೆ ದೆಹಲಿಯಲ್ಲಿ ಮಮತಾ ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ಹೇಮಂತ್ ಸೊರೇನ್, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಔತಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಭೋಜನ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

ಜಿ20 ಶೃಂಗಸಭೆಗೆ ದೆಹಲಿ ಸಜ್ಜು..: ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯಲಿರುವ ಜಿ20 ರಾಷ್ಟ್ರಗಳ ಶೃಂಗಸಭೆಗೆ ದೆಹಲಿ ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶ್ವದೆಲ್ಲೆಡೆಯಿಂದ ವಿದೇಶಿ ಪ್ರತಿನಿಧಿಗಳ ಆಗಮನ ಈಗಾಗಲೇ ಆರಂಭವಾಗಿದೆ. ಅರ್ಜೆಂಟಿನಾದ ಅಧ್ಯಕ್ಷ ಅಲ್ಬರ್ಟೊ ಫೆರ್ನಾಂಡಿಸ್ ಇಂದು ಬೆಳಗ್ಗೆ ದೆಹಲಿ ತಲುಪಿದ್ದಾರೆ.

ಪ್ರತಿಷ್ಠಿತ ಶೃಂಗಸಭೆಯನ್ನು ಮೊದಲ ಬಾರಿಗೆ ಆಯೋಜಿಸುತ್ತಿರುವ ಭಾರತ, ದೇಶದ ಸಂಪ್ರದಾಯ ಮತ್ತು ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಲು ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಿದೆ. ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಅವರ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: I.N.D.I.A vs ಬಿಜೆಪಿ: 7 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ, ಯಾರಿಗೆ ಗೆಲುವು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.