ಸುತ್ತೂರು ಜಾತ್ರೆ; ಅದ್ಧೂರಿಯಾಗಿ ನೆರವೇರಿದ ರಥೋತ್ಸವ - ವಿಡಿಯೋ

By ETV Bharat Karnataka Team

Published : Feb 8, 2024, 1:25 PM IST

thumbnail

ಮೈಸೂರು : ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ‌ ಮಹೋತ್ಸವದ ಮೂರನೆಯ ದಿನವಾದ ಇಂದು ಲಕ್ಷಾಂತರ ಭಕ್ತರ‌ ಸಮ್ಮುಖದಲ್ಲಿ ಅದ್ಧೂರಿಯಾಗಿ ರಥೋತ್ಸವ ನೆರವೇರಿತು. ಶಾಂತಲಿಂಗೇಶ್ವರ ಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ, ಶ್ರವಣ ಬೆಳಗೊಳದ ಶ್ರೀ ಜೈನ್ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸುತ್ತೂರು ಮಠದ ಪೀಠಾಧಿಪತಿ ಶ್ರೀ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಸುತ್ತೂರು ದೇವಾಲಯದಿಂದ ಆರಂಭವಾದ ರಥೋತ್ಸವ ಮಠದ ಗದ್ದುಗೆ ತಲುಪಿ, ಮತ್ತೆ ದೇವಾಲಯದ ಬಳಿ ಬಂದಿತು. ಶ್ರೀ ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಬುಧವಾರ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳು ಸಹ, ರಥೋತ್ಸವದಲ್ಲಿ ಪಾಲ್ಗೊಂಡು ಹಣ್ಣು-ಜವನ ಎಸೆದರು.
ಇನ್ನು ರಥೋತ್ಸವ ದೃಶ್ಯವಳಿಯನ್ನು ಡ್ರೋನ್​ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ. 

ದಕ್ಷಿಣ ಕರ್ನಾಟಕ ಭಾಗದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಸತತ ಒಂದು ವಾರಗಳ ಕಾಲ ನಡೆಯುವ ಏಕೈಕ ಜಾತ್ರೆ ಇದಾಗಿದೆ. ಈ ಜಾತ್ರೆಗೆ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ದಿನಕ್ಕೊಂದು ವಿಶೇಷತೆಯಿಂದ ಸುತ್ತೂರು ಜಾತ್ರೆ ಜನ ಜಂಗುಳಿಯಿಂದ ತುಂಬಿರುತ್ತದೆ. ಜಾತ್ರೆಗೆ ಬರುವ ಕೋಟ್ಯಂತರ ಭಕ್ತರಿಗಾಗಿ ಮೂರು ಹೊತ್ತು ಕೂಡ ಉಚಿತ ಊಟ - ತಿಂಡಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. 

ಇದನ್ನೂ ಓದಿ : ವೈಭವದಿಂದ ಜರುಗಿದ ಕೊಪ್ಪಳದ ಗವಿಸಿದ್ಧೇಶ್ವರರ ರಥೋತ್ಸವ: ದಕ್ಷಿಣ ಭಾರತದ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.