ETV Bharat / business

ಕೊರಿಯಾದ ಆಹಾರಗಳಿಗ ಹೆಚ್ಚುತ್ತಿರುವ ಬೇಡಿಕೆ; ದಾಖಲೆ ಮಟ್ಟದ ನೂಡಲ್ಸ್​ ರಫ್ತು - South Korea instant noodles

author img

By ETV Bharat Karnataka Team

Published : May 20, 2024, 12:58 PM IST

ಇತ್ತೀಚಿನ ದಿನದಲ್ಲಿ ಕೊರಿಯನ್​ ಸಿನಿಮಾ, ಡ್ರಾಮಾ ಮತ್ತು ಮ್ಯೂಸಿಕ್​ಗಳು ಜನಪ್ರಿಯ ಪಡೆದಂತೆ ಆಹಾರ ಮಾರುಕಟ್ಟೆ ಕೂಡ ಈ ವರ್ಷ ಹೊಸ ದಾಖಲೆ ಸೃಷ್ಟಿಸುತ್ತಿದೆ.

South Korea instant noodles the growing popularity of Korean culture and food
South Korea instant noodles the growing popularity of Korean culture and food (IANS)

ಸಿಯೋಲ್​: ಇತ್ತೀಚಿನ ವರ್ಷದಲ್ಲಿ ದಕ್ಷಿಣ ಕೊರಿಯಾ ಸಂಸ್ಕೃತಿ ಜಗತ್ತಿನೆಲ್ಲೆಡೆ ಯುವ ಜನತೆಯನ್ನು ಆಕರ್ಷಿಸುತ್ತಿರುವುದು ಸುಳ್ಳಲ್ಲ. ದಕ್ಷಿಣ ಕೊರಿಯಾದ ತಾರೆಯರು, ಅಲ್ಲಿನ ಆಹಾರ ಅವರ ತ್ವಚೆಯ ಆರೈಕೆ ಉತ್ಪನ್ನಗಳು ಇದೀಗ ಸಾಕಷ್ಟು ಜನಪ್ರಿಯತೆ ಗಳಿಸುತ್ತವೆ. ಅದರಲ್ಲೂ ಇನ್ಸ್​​ಟಂಟ್​​ ನೂಡಲ್ಸ್​​ಗೆ ಬೇಡಿಕೆ ಹೆಚ್ಚಿದ್ದು, ಇದೇ ಮೊದಲ ಬಾರಿಗೆ ಕಳೆದ ತಿಂಗಳು ದಕ್ಷಿಣ ಕೊರಿಯಾ ನೂಡಲ್ಸ್​ ರಫ್ತಿನಲ್ಲಿ 100 ಮಿಲಿಯನ್​ ಡಾಲರ್​​ ವಹಿವಾಟು ನಡೆಸಿದ್ದು, ಇದು ಕೊರಿಯಾದ ಸಂಸ್ಕೃತಿ ಮತ್ತು ಆಹಾರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ದತ್ತಾಂಶ ತಿಳಿಸಿದೆ.

ಕೊರಿಯಾದ ಇನ್ಸ್​​ಟಂಟ್ ನೂಡಲ್ಸ್​ ಅಥವಾ ರಾ​ಮಿಯೋನ್​ ಏಪ್ರಿಲ್​ನಲ್ಲಿ 108.6 ಮಿಲಿಯನ್​ ಡಾಲರ್​ ವಹಿವಾಟು ನಡೆಸಿದೆ. ಅಂದರೆ ಕಳೆದ ವರ್ಷಕ್ಕಿಂತ ಇದರ ವಹಿವಾಟು 46.8ರಷ್ಟು ಹೆಚ್ಚಾಗಿದೆ. 2022ರ ಮೇಯಿಂದ ಈ ಆಹಾರದ ಬೇಡಿಕೆ ಹೆಚ್ಚುತ್ತಿದೆ ಎಂದು ಕೊರಿಯಾ ಗ್ರಾಹಕ ಸೇವೆ (ಕೆಸಿಎಸ್​) ತಿಳಿಸಿದೆ.

ಮಾಸಿಕ ಅಂಕಿ ಅಂಶ ಆಧಾರದ ಮೇಲೆ ಇದೇ ಮೊದಲ ಬಾರಿಗೆ ಇದರ ಮಾರಾಟ 100 ಡಾಲರ್​ ಮಿಲಿಯನ್​ಗಿಂತಲೂ ಹೆಚ್ಚಾಗಿದೆ ಎಂದು ಯೊನ್ಹಾಪ್​ ಸುದ್ದಿ ಸಂಸ್ಥೆ ತಿಳಿಸಿದೆ.

2015ರಿಂದಲೂ ರಾಮಿಯೋನ್ ನೂಡಲ್ಸ್​​ಗೆ ಬೇಡಿಕೆ ಹೆಚ್ಚಿದೆ. ಆದರೆ, ಇತ್ತೀಚಿನ ದಿನದಲ್ಲಿ ಕೊರಿಯನ್​ ಸಿನಿಮಾ, ಡ್ರಾಮಾ ಮತ್ತು ಮ್ಯೂಸಿಕ್​ಗಳು ಜನಪ್ರಿಯ ಪಡೆದಂತೆ ಆಹಾರ ಮಾರುಕಟ್ಟೆ ಕೂಡ ಈ ವರ್ಷ ಹೊಸ ದಾಖಲೆ ಸೃಷ್ಟಿಸುತ್ತಿದೆ. ಅಧಿಕ ಹಣದುಬ್ಬರ ಹಿನ್ನಲೆ ದೇಶದಲ್ಲಿ ಕೂಡ ಕೈಗೆಟುಕುವ ದರದ, ರೆಡಿ ಟು ಈಟ್​ ಆಹಾರ ಉತ್ಪನ್ನಗಳು ದೊಡ್ಡ ಬೇಡಿಕೆ ಸೃಷ್ಟಿಸಿವೆ.

ಕಳೆದ ವರ್ಷ ರಾಮಿಯೋನ್​ 952 ಮಿಲಿಯನ್​ ವಹಿವಾಟಿನ ಮೂಲಕ ದಾಖಲೆ ನಡೆಸಿತು. ಇದು 2022ರ ವಹಿವಾಟಿಗಿಂತ 24.4ರಷ್ಟು ಹೆಚ್ಚಿತ್ತು. ಆದರೆ ಈ ವರ್ಷ ಇದು 1 ಬಿಲಿಯನ್​ ಡಾಲರ್​​ ರಫ್ತು ಮಾರಾಟ ನಡೆಸಿ ದಾಖಲೆ ಬರೆದಿದೆ.

ದಕ್ಷಿಣ ಕೊರಿಯಾದಲ್ಲಿನ ಇನ್ಸ್​​ಟಂಟ್​ ನೂಡಲ್​ ಉತ್ಪನ್ನದ ಪ್ರಮುಖ ಕಂಪನಿಯಾಗಿ ಸಮ್ಯಂಗ್ ಫುಡ್ಸ್ ಕಂಪನಿ ಹೆಸರು ಮಾಡಿದೆ. ಈ ಸಂಸ್ಥೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 385.7 ಬಿಲಿಯನ್​ ವಹಿವಾಟು ನಡೆಸಿದ್ದು, ಶೇ 57ರಷ್ಟು ಆದಾಯದಲ್ಲಿ ಏರಿಕೆ ಕಂಡಿದೆ.

ಸಾಗರೋತ್ತರದ ಮಾರುಕಟ್ಟೆಯಿಂದಾಗಿ ಆದಾಯ ಹೆಚ್ಚುತ್ತಿದೆ. ಇದು ಶೇ 85ರಷ್ಟು ಹೆಚ್ಚಾಗಿದೆ. ಅದರಲ್ಲಿ, ಮಸಾಲೆಯುಕ್ತ ಇನ್ಸ್​​ಟಂಟ್​ ನೂಡಲ್ ಆಗಿರುವ ಕಾರ್ಬೊನಾರಾ ಸುವಾಸನೆ, ಬುಲ್ಡಾಕ್ ಹೆಚ್ಚು ಬೇಡಿಕೆ ಪಡೆದಿದೆ ಎಂದು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳು ಹೆಚ್ಚು ಓದುವುದೂ ಕೂಡಾ ಸಮಸ್ಯೆಯೇ: ದಕ್ಷಿಣ ಕೊರಿಯಾದಲ್ಲಿ ಏನಾಗ್ತಿದೆ? ಪೋಷಕರು ತಿಳಿದುಕೊಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.