ರಸ್ತೆಗಿಳಿದ ಪ್ರಯಾಣಿಕರನ್ನು ಅಟ್ಟಾಡಿಸಿದ ಕಾಡಾನೆ: ಭಯಾನಕ ವಿಡಿಯೋ ವೈರಲ್

By ETV Bharat Karnataka Team

Published : Feb 1, 2024, 11:06 PM IST

thumbnail

ಚಾಮರಾಜನಗರ: ಕಾರು ಬಿಟ್ಟು ಕಾಡಿನಲ್ಲಿ ರಸ್ತೆಗಿಳಿದ ಇಬ್ಬರನ್ನು ಆನೆ ಅಟ್ಟಾಡಿಸಿ ದಾಳಿಗೆ ಮುಂದಾದ ಘಟನೆ ಕರ್ನಾಟಕ ಗಡಿಯಲ್ಲಿರುವ ವೈನಾಡಿನ ಮುತ್ತಂಗ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾರು ಬಿಟ್ಟು ಸೆಲ್ಫಿಗೋ, ಮೂತ್ರ ವಿಸರ್ಜನೆಗೋ ಇಳಿದಿದ್ದ ಇಬ್ಬರನ್ನು ಏಕಾಏಕಿ ಕಾಡಾನೆ ಅಟ್ಟಾಡಿಸಿದೆ. ಓಡುವ ಭರದಲ್ಲಿ ಬಿದ್ದ ಒಬ್ಬಾತನ ಮೇಲೆ ಆನೆ ತುಳಿಯುವ ಪ್ರಯತ್ನ ಮಾಡಿದ್ದು, ಅದೃಷ್ಟವಶಾತ್ ವ್ಯಕ್ತಿಗೆ ಯಾವುದೇ ಮಾರಣಾಂತಿಕ ಗಾಯಗಳಾಗಿಲ್ಲ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

ಕರ್ನಾಟಕದ ಕಾಶ್ಮೀರ ಎಂತಲೇ ಕರೆಯುವ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ (ಜನವರಿ 4-23) ಕಾಡಾನೆ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಘಟನೆ ನಡೆದಿದೆ.

ಆನೆಯೊಂದಿಗೆ ಸೆಲ್ಫಿಗೆ ಮುಗಿಬಿದ್ದ ಜನ: ಗೋಪಾಲಸ್ವಾಮಿ ಬೆಟ್ಟದ ದೇಗುಲ ಸಮೀಪ ಆಗಾಗ್ಗೆ ಕಾಡಾನೆಯೊಂದು ಎಂಟ್ರಿ ಕೊಡಲಿದ್ದು, ಅದೇ ರೀತಿ ಗುರುವಾರ ಕೂಡ ಕಾಡಾನೆ ಪ್ರತ್ಯಕ್ಷವಾಗಿದೆ. ಇತ್ತ ಕಾಡಾನೆ ಕಂಡೊಡನೆ ರೋಮಾಂಚನಗೊಂಡ ಪ್ರವಾಸಿಗರು ಹುಚ್ಚಾಟ ಮೆರೆದಿದ್ದು, ಆನೆ ಸಮೀಪಕ್ಕೆ ತೆರಳಿ ಫೋಟೋ, ವಿಡಿಯೋ ಮಾಡಿದ್ದಾರೆ. ಕಾಡಾನೆಗಳ ಮುಂದೆ ಹೋಗುವುದು ಅಪಾಯ ಎಂಬುದು ಗೊತ್ತಿದ್ದರೂ ಸಹ ವ್ಹೀಲ್ ಚೇರ್​ನಲ್ಲಿ ಬಂದು ವೃದ್ಧೆಯೊಬ್ಬರು ಆನೆಯನ್ನು ವೀಕ್ಷಿಸುತ್ತ ಕುಳಿತಿರುವುದು ಅಚ್ಚರಿ ಮೂಡಿಸಿದೆ.​

ಇದನ್ನೂ ಓದಿ: ಗೋಪಾಲಸ್ವಾಮಿ ಬೆಟ್ಟದಲ್ಲಿ ದಿಢೀರ್ ಕಾಡಾನೆ ಎಂಟ್ರಿ: ಸೆಲ್ಫಿಗೆ ಮುಗಿಬಿದ್ದ ಪ್ರವಾಸಿಗರು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.