ಕಣವಿ ವೀರಭದ್ರೇಶ್ವರ ಅಗ್ಗಿ ಉತ್ಸವದಲ್ಲಿ ಭಕ್ತಿ ಪರಾಕಾಷ್ಠೆ: ವಿಡಿಯೋ - Aggi Utsava

By ETV Bharat Karnataka Team

Published : Apr 10, 2024, 11:04 PM IST

thumbnail

ಬಾಗಲಕೋಟೆ: ನಗರದ ಕಣವಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವದ ಅಂಗವಾಗಿ ಅಗ್ಗಿ ಉತ್ಸವ ಸಂಭ್ರಮದಿಂದ ಜರುಗಿತು. ಪ್ರತಿ ವರ್ಷ ಯುಗಾದಿ ಪಾಡ್ಯದ ದಿನದಂದು ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಜರುಗುತ್ತದೆ. ಪಾಡ್ಯದ ಮರುದಿನ ಅಗ್ಗಿ ಉತ್ಸವ ನಡೆಯುತ್ತದೆ. 

ಜಾಗೃತ ದೇವಾಲಯ ಎಂದು ಹೆಸರುವಾಸಿಯಾಗಿರುವ ಕಣವಿ ವೀರಭದ್ರೇಶ್ವರ ದೇವಾಲಯ ಅಗ್ಗಿ ಉತ್ಸವದ ಹಿನ್ನಲೆ ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತದೆ. 

ಸಂಜೆ 6 ಗಂಟೆ ಸಮಯದಲ್ಲಿ ದೇವರಿಗೆ ಪೂಜೆ ಬಳಿಕ, ಪಲ್ಲಕಿ ಮೆರವಣಿಗೆ ನಡೆಯುತ್ತದೆ. ದೇವಾಲಯದ ಸುತ್ತ ಐದು ಸುತ್ತು ಬಂದ ಬಳಿಕ, ದೇವಾಲಯದ ಮುಂದೆ ಇರುವ ಅಗ್ಗಿಕುಂಡಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಪುರವಂತರು ಪಲ್ಲಕಿಸಮೇತ ಅಗ್ಗಿ ಹಾಯುತ್ತಾರೆ. 

ನಂತರ ಭಕ್ತರು ಸಾಮೂಹಿಕವಾಗಿ ಅಗ್ಗಿಗೆ ಹಾಯ್ದು ಭಕ್ತಿಯನ್ನು ಮೆರೆಯುತ್ತಾರೆ. ಭಕ್ತರು ತಮ್ಮ ಹರಕೆಯನ್ನು ಪೂರೈಸಲು ಅಗ್ಗಿಯಲ್ಲಿ ಹಾಯ್ದು ಪ್ರಾರ್ಥನೆ ಸಲ್ಲಿಸುತ್ತಾರೆ. ಅಗ್ಗಿಯಲ್ಲಿ ಹಾಯ್ದು ವೀರಭದ್ರೇಶ್ವರ ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ, ಸಕಲ ಸಂಕಷ್ಟ ದೂರಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಇದನ್ನೂ ಓದಿ : ಅದ್ಧೂರಿಯಾಗಿ ನೆರವೇರಿದ ಕಣವಿ ವೀರಭದ್ರೇಶ್ವರ ಅಗ್ಗಿ ಉತ್ಸವ- ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.