ಚಲಿಸುತ್ತಿದ್ದ ರೈಲು ಇಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ - ವಿಡಿಯೋ

By ETV Bharat Karnataka Team

Published : Feb 23, 2024, 12:39 PM IST

thumbnail

ಧೆಂಕನಲ್​ (ಒಡಿಶಾ): ಜಿಲ್ಲೆಯ ಜೋರಾಂಡಾ ರೋಡ್​ ರೈಲು ನಿಲ್ದಾಣದ ಗೋಬಿಂದಪುರ ಬಳಿ ಚಲಿಸುತ್ತಿದ್ದ ರೈಲು ಇಂಜಿನ್​ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ನಡೆದಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂಜಿನ್​ನಲ್ಲಿದ್ದ ಲೋಕೋ ಪೈಲಟ್​ ಹೊರಡೆ ಜಿಗಿದಿದ್ದು, ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ರೈಲು ಇಂಜಿನ್​ಗೆ ಬೆಂಕಿ ಹತ್ತಿ ಉರಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್​ ಆಗುತ್ತಿದೆ.  

ಬೋಗಿಗಳಿಲ್ಲದ ಈ ರೈಲಿನ ಇಂಜಿನ್​ ಮಾತ್ರ ತಾಲ್ಚೆರ್​ನಿಂದ ಕಟಕ್​ಗೆ ತೆರಳುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್​ಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಬೆಂಕಿ ಅವಘಡದಲ್ಲಿ ರೈಲಿನ ಮೇಲಿನ ವಿದ್ಯುತ್​ ತಂತಿ ತುಂಡಾಗಿದೆ. ಇದರಿಂದಾಗಿ ಪೂರ್ವ ಕರಾವಳಿ ರೈಲ್ವೆಯಲ್ಲಿನ ಎಲ್ಲಾ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಧೆಂಕನಲ್​ ಅಗ್ನಿಶಾಮಕ ಅಧಿಕಾರಿ ಪ್ರಶಾಂತ್​ ಧಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ನೋಡಿ: ಗಂಗೊಂಡನಹಳ್ಳಿ ಶೆಡ್​ನಲ್ಲಿ ಅಗ್ನಿ ಅವಘಡ: 30ಕ್ಕೂ ಅಧಿಕ ಆಟೋಗಳು ಬೆಂಕಿಗಾಹುತಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.