ETV Bharat / state

ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳು ಯಾವ ಅಭ್ಯರ್ಥಿ, ಪಕ್ಷಕ್ಕೂ ಸಂಬಂಧಪಟ್ಟಿಲ್ಲ: ಜಿ‌.ಟಿ.ದೇವೇಗೌಡ - Hassan Pen Drive Case

author img

By ETV Bharat Karnataka Team

Published : Apr 29, 2024, 7:57 PM IST

Updated : Apr 29, 2024, 10:02 PM IST

jds-leader-g-t-devegowda-reaction-on-hassan-pen-drive-case
ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳು ಯಾವ ಅಭ್ಯರ್ಥಿ, ಪಕ್ಷಕ್ಕೂ ಸಂಬಂಧಪಟ್ಟಿಲ್ಲ: ಜಿ‌.ಟಿ.ದೇವೇಗೌಡ

ಪ್ರಜ್ವಲ್​ ರೇವಣ್ಣ ತಪ್ಪು ಮಾಡಿದ್ದರೆ ಖಂಡಿತಾ ಶಿಕ್ಷೆ ಆಗುತ್ತದೆ, ಪಕ್ಷದಿಂದಲೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್​ ಕೋರ್​ ಕಮಿಟಿ ಅಧ್ಯಕ್ಷ ಜಿ‌.ಟಿ.ದೇವೇಗೌಡ ತಿಳಿಸಿದರು.

ಜಿ‌.ಟಿ.ದೇವೇಗೌಡ

ಹುಬ್ಬಳ್ಳಿ: ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳು ಯಾವ ಅಭ್ಯರ್ಥಿಗೂ ಮತ್ತು ಪಕ್ಷಕ್ಕೂ ಸಂಬಂಧಪಟ್ಟಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಮಾತ್ರ ಸಂಬಂಧಪಟ್ಟಿದೆ ಎಂದು ಜೆಡಿಎಸ್​ ಕೋರ್​ ಕಮಿಟಿ ಅಧ್ಯಕ್ಷ ಜಿ‌.ಟಿ.ದೇವೇಗೌಡ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರಜ್ವಲ್​ ರೇವಣ್ಣ ತಪ್ಪು ಮಾಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ, ಅದರಂತೆ ಪಕ್ಷದಿಂದಲೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಾಳೆ ಹುಬ್ಬಳ್ಳಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ 14 ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಮತ್ತೊಂದೆಡೆ, ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮಾತನಾಡಿ, ಕರ್ನಾಟಕದಲ್ಲಿ ಚುನಾವಣೆ ವಾತಾವರಣ ಚೆನ್ನಾಗಿದೆ.‌ ಈಗ ಚುನಾವಣೆ ನಡೆದಿರುವ 14 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಮುಂದೆ ಮತದಾನ ನಡೆಯುವ 14 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಒಟ್ಟಾರೆ 28ಕ್ಕೆ 28 ಸೀಟ್ ನಾವು ಗೆಲ್ಲುತ್ತೇವೆ. ಅದಕ್ಕೆ ಶ್ರಮ ಹಾಕಲು ಕಾರ್ಯಕರ್ತರಿಗೆ ಹೇಳಿದ್ದೇವೆ ಎಂದರು.

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನೋ ಕಾಮೆಂಟ್​ ಎಂದರು.

ಇದನ್ನೂ ಓದಿ: ಇದಕ್ಕೆಲ್ಲ ಹೆದರಿ ಓಡಿಹೋಗುವ ವ್ಯಕ್ತಿ ನಾನಲ್ಲ, ಇದೆಲ್ಲಾ ರಾಜಕೀಯ: ಹೆಚ್.ಡಿ. ರೇವಣ್ಣ - H D Revanna

Last Updated :Apr 29, 2024, 10:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.