ETV Bharat / state

ಡಿಕೆಶಿ ರಿಜೆಕ್ಟೆಡ್ ಪಾರ್ಟಿಯ ರಾಜ್ಯಾಧ್ಯಕ್ಷರಾಗಿದ್ದಾರೆ: ಬಸವರಾಜ ಬೊಮ್ಮಾಯಿ ತಿರುಗೇಟು - Lok Sabha Election

author img

By ETV Bharat Karnataka Team

Published : May 5, 2024, 5:47 PM IST

ಲೋಕಸಭೆ ಚುನಾವಣೆ ಪ್ರಚಾರ ಇಂದು ಸಂಜೆಗೆ ತೆರೆ ಬೀಳಲಿದೆ. ಅಭ್ಯರ್ಥಿಗಳು ತಮ್ಮ-ತಮ್ಮ ಕ್ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್​ ವಿರುದ್ಧ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

BASAVARAJA BOMMAYI  DCM DK SHIVAKUMAR  HIT BACK  HAVERI
ಡಿಸಿಎಂ ಡಿಕೆ ಶಿವಕುಮಾರ್​ಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ (Etv Bharat)

ಹಾವೇರಿ: ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಜನರಿಂದ ತಿರಸ್ಕೃತ ವ್ಯಕ್ತಿ ಎಂಬ ಡಿಕೆಶಿ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ನಾನು ರಿಜೆಕ್ಟೆಡ್ ಅಲ್ಲ. 36000 ಮತಗಳ ಅಂತರದಿಂದ ಗೆದ್ದಿದ್ದೇನೆ. ದೇವೆಗೌಡರ ವಿರುದ್ದ ಡಿಕೆಶಿ ಲೋಕಸಭಾ ಎಲೆಕ್ಷನ್ ಸೋತಿದ್ದಾರೆ. ಡಿಕೆಶಿ ರಿಜೆಕ್ಟೆಡ್ ಪಾರ್ಟಿಯ ಒಂದು ರಾಜ್ಯದ ಅಧ್ಯಕ್ಷರಾಗಿದ್ದಾರೆ ಎಂದು ಬೊಮ್ಮಾಯಿ ಲೇವಡಿ ಮಾಡಿದರು. ಈ ಬಾರಿ 35 ದಿನಗಳಿಗಿಂತ ಹೆಚ್ಚು ಪ್ರಚಾರ ಮಾಡುವ ಅವಕಾಶ ಸಿಕ್ಕಿತು. ಹಾವೇರಿ ಲೋಕಸಭೆಯ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತಿ ಹಂತದಲ್ಲಿ ಪ್ರಚಾರ ಮಾಡಿದ್ದೇನೆ. ಈ ದೇಶದ ಜನ, ಕರ್ನಾಟಕದ ಜನ, ಈ ಕ್ಷೇತ್ರದ ಜನ ಬಹಳ ಪ್ರಭುದ್ಧ ಮತದಾರರಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಇದು ದೇಶ ಮುನ್ನೆಡಸೋ ಚುನಾವಣೆ. ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಎಲ್ಲಾ ವರ್ಗದ ಜನ ಬೆಂಬಲ ನೀಡುತ್ತಿದ್ದಾರೆ. ಮಹಿಳೆಯರು ಹೊರಗೆ ಬಂದು ಬೆಂಬಲ ವ್ಯಕ್ತಪಡಿಸಿರುವ ರೀತಿ ನಾನು ಹಿಂದೆ ಎಂದೂ ನೋಡಿಲ್ಲ. ಲೋಕಸಭೆಯ ಚುನಾವಣೆ ಮಹತ್ವ ಅರಿತು ಹಿಂದೆ ಮಾಡಿದ ಮತದಾನವನ್ನೇ ಈಗಲೂ ಜನ ಮುಂದುವರೆಸಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಪ್ರತಿ ತಾಲೂಕಿನಲ್ಲಿ ಜನ ನಮ್ಮ ಕೆಲಸ ನೆನಪಿಸಿಕೊಳ್ತಾರೆ. ಈ ಚುನಾವಣೆಯಲ್ಲಿ ನಾವು ಮಾಡಿರುವ ಕೆಲಸಗಳೇ ಮಾತಾಡ್ತಾ ಇವೆ. ಜನರ ಆಶೀರ್ವಾದ ಇದೆ. ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ. ನೆಹರೂ ಓಲೆಕಾರ್ ಜೊತೆ ಒಳ್ಳೆ ಸಂಬಂಧ ಇತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಅವರಿಗೆ ಬೇಸರ ಇತ್ತು. ಈಗ ಓಲೆಕಾರ್ ಅವರು ಕಾಂಗ್ರೆಸ್ ಸೇರಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಸಂವಿಧಾನ ಮೊಟಕುಗೊಳಿಸಿದ್ದು ಕಾಂಗ್ರೆಸ್. ಕೇಶವಾನಂದ ಭಾರತಿ ಕೇಸ್ ಹಾಕಿದ್ರು. ಬೇಸಿಕ್ ಸ್ಟ್ರಕ್ಚರ್ ಚೇಂಜ್ ಆಗಬಾರದು ಅಂತ ಆಯ್ತು. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡ್ತಾರೆ ಅಂತ ದಲಿತರಲ್ಲಿ ಕಾಂಗ್ರೆಸ್​ನವರು ಭಯ ಹುಟ್ಟಿಸುತ್ತಿದ್ದಾರೆ. ಗ್ಯಾರಂಟಿ ನಂಬಿಕೊಂಡೇ ಬದುಕೋ ಸ್ಥಿತಿಯಲ್ಲಿ ಯಾರೂ ಇಲ್ಲ ಎಂದು ಬೊಮ್ಮಾಯಿ ತಿಳಿಸಿದರು.

ಹಸಿವು ಮುಕ್ತ ಕರ್ನಾಟಕ ಅಂತ ಕಾಂಗ್ರೆಸ್​ನವರು ಘೋಷಣೆ ಮಾಡಿದರು. ಸುಮ್ಮನೆ ಘೋಷಣೆ ಮಾಡ್ತಾರೆ. ಹಸಿವಿನ ಕರ್ನಾಟಕ ಎಲ್ಲಿ ಇತ್ತು?. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ. ಗ್ರೌಂಡ್ ರಿಯಾಲಿಟಿ ಬೇರೇನೆ ಇದೆ. ಗ್ಯಾರಂಟಿಗಳ ಮೋಹ ಜನರಲ್ಲಿ ಉಳಿದಿಲ್ಲ. ಗ್ಯಾರಂಟಿ ಸಿಗುತ್ತೆ ಅಂತ ವಿಧಾನಸಭೆ ಚುನಾವಣೆ ವೇಳೆ ಜನ ಮತ ಹಾಕಿದ್ರು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕ್ತಾರೆ. ಕಾಂಗ್ರೆಸ್​ನವರೇ ಮಕ್ಮಲ್ ಟೋಪಿ, ಚೆಂಬು ಅಂತ ಶುರು ಮಾಡಿದ್ದು. ನಾವು ಹೋದಲ್ಲೆಲ್ಲಾ ನಮ್ಮ ಕೆಲಸ ಹೇಳ್ತಾ ಇದ್ದಾರೆ ಎಂದು ಹೇಳಿದರು.

ಕುರುಬರಿಗೆ ಬಿಜೆಪಿ ಟಿಕೆಟ್ ನೀಡದ ವಿಚಾರಕ್ಕೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಎಷ್ಟು ಜನ ಕುರುಬರು ಮಂತ್ರಿ ಆಗಿದ್ದಾರೆ?. ಆ ಸಮುದಾಯಗಳಿಗೆ ಏನು ಮಾಡಿದ್ದಾರೆ ಅನ್ನೋದು ಮುಖ್ಯ ಆಗುತ್ತೆ. ಕುರಿಗಾರರಿಗೆ 260 ಕೋಟಿ ರೂಪಾಯಿ ಯೋಜನೆ ಮಾಡಿದ್ದೆವು. ಆ ಯೋಜನೆ ಕಾಂಗ್ರೆಸ್ ಸರ್ಕಾರ ನಿಲ್ಲಸಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಫಲಿತಾಂಶದ ಬಳಿಕ ಜೆಡಿಎಸ್ ಮೈತ್ರಿ ಮುಂದುವರೆಸುವ ವಿಚಾರ ಕುರಿತಂತೆ ಮಾತನಾಡಿದ ಅವರು, ಎರಡು ಪಕ್ಷಗಳ ವರಿಷ್ಟರು ತೀರ್ಮಾನ ಮಾಡ್ತಾರೆ. ಅದು ಚುನಾವಣೆ ಬಳಿಕವೂ ಮುಂದುವರೆಯಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಓದಿ: ರಾಜ್ಯದಲ್ಲಿ ಬಿಜೆಪಿ ಸಿಂಗಲ್​ ಡಿಜಿಟ್​ ದಾಟುವುದಿಲ್ಲ, ಡಬಲ್​ ಡಿಜಿಟ್​ ಮುಟ್ಟುವುದಿಲ್ಲ: ಸಚಿವ ದಿನೇಶ್ ಗುಂಡೂರಾವ್ - Dinesh Gundurao

ETV Bharat Logo

Copyright © 2024 Ushodaya Enterprises Pvt. Ltd., All Rights Reserved.