ETV Bharat / state

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ‌ - ಕಾಂಗ್ರೆಸ್ ನಡುವೆ ನೇರ ಫೈಟ್​: ದಿಂಗಾಲೇಶ್ವರ​ ಶ್ರೀ ನಾಮಪತ್ರ ಹಿಂಪಡೆದಿದ್ದರ ಲಾಭ​​​​​​​​ ಯಾರಿಗೆ? - BJP and Congress Fight

author img

By ETV Bharat Karnataka Team

Published : May 4, 2024, 1:29 PM IST

Updated : May 4, 2024, 1:41 PM IST

BJP AND CONGRESS FIGHT
ಕ್ಷೇತ್ರದ ಅಭ್ಯರ್ಥಿಗಳು(Etv Bharat)

ಧಾರವಾಡ ಲೋಕಸಭೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿ, ಬಳಿಕ ಕಣದಿಂದ‌ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿಯಿಂದ ಕ್ಷೇತ್ರದಲ್ಲಿ ಬಿಜೆಪಿ‌ - ಕಾಂಗ್ರೆಸ್ ನೇರಾನೇರ ಫೈಟ್ ಏರ್ಪಟ್ಟಿದೆ. ಸದ್ಯ ಸ್ವಾಮೀಜಿ ನಡೆ ತೀವ್ರ ಕುತೂಹಲ ಮೂಡಿಸಿದೆ.

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸತತ ನಾಲ್ಕು ಸಲ ಗೆದ್ದು ಐದನೇ ಸಲಕ್ಕೆ ಸ್ಪರ್ಧಿಸಿರುವ ಬಿಜೆಪಿಯ ಪ್ರಹ್ಲಾದ್​ ಜೋಶಿ ಮಣಿಸಲು ಕಾಂಗ್ರೆಸ್ ಹೊಸಮುಖ ವಿನೋದ ಅಸೂಟಿ ಅವರನ್ನು ಕಣಕ್ಕಿಳಿದೆ.

Dharwad Lok Sabha constituency
ಪ್ರಹ್ಲಾದ್​ ಜೋಶಿ (Etv Bharat)

ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಕಮಲ ಅರಳಿಸಲು ಜೋಶಿ ತೀವ್ರ ಕಸರತ್ತಿನ ನಡುವೆ ಬಿಜೆಪಿ ಮಣಿಸಲು ಕೈ ಅಭ್ಯರ್ಥಿ ವಿನೋದ ಅಸೂಟಿ ಕೂಡ ಕ್ಷೇತ್ರದಾದ್ಯಂತ ಭರ್ಜರಿಯಾಗೇ ಓಡಾಡುತ್ತಿದ್ದಾರೆ. ಮತದಾನಕ್ಕೆ ಇನ್ನೇನು ಕೇವಲ ದಿನಗಳು ಮಾತ್ರ ಬಾಕಿ ಇದ್ದು, ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ತಂತ್ರ, ಪ್ರತಿತಂತ್ರಕ್ಕೆ ಮುಂದಾಗಿದ್ದಾರೆ.

Dharwad Lok Sabha constituency
ವಿನೋದ ಅಸೂಟಿ (Etv Bharat)

ಇವರನ್ನೂ ಒಳಗೊಂಡಂತೆ ಒಟ್ಟು 17 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುವುದರಿಂದ ಕ್ಷೇತ್ರ ಕುತೂಹಲ ಮೂಡಿಸಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಜೋಶಿ ಅವರ ಮೇಲಿನ ಕೋಪ ಇನ್ನೂ ಶಮನಗೊಂಡಂತೆ ಕಾಣುತ್ತಿಲ್ಲ.

BJP AND CONGRESS FIGHT
ದಿಂಗಾಲೇಶ್ವರ ಶ್ರೀ (Etv Bharat)

ಕ್ಷೇತ್ರದ ಲೋಕಸಭಾ ಚುನಾವಣಾ ಚರಿತ್ರೆಯಲ್ಲಿ ಮತದಾರರು ಜಾತಿ ಮೀರಿ ಪ್ರೀತಿ ತೋರಿದ ನಿದರ್ಶನಗಳು ಇವೆ. 1951ರಿಂದ 1991ರ ವರೆಗೆ ನಡೆದ ಚುನಾವಣೆಗಳಲ್ಲಿ ಸತತವಾಗಿ ಗೆಲುವು ದಾಖಲಿಸಿದ ಕಾಂಗ್ರೆಸ್, 1996 ರಿಂದ ಸತತ ಸೋಲುಂಡಿದೆ. 1996 ರಿಂದ ಬಿಜೆಪಿ ಗೆಲುವಿನ ಅಲೆಯಲ್ಲಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತ 8 ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇವೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ತಲಾ 4 ಕ್ಷೇತ್ರಗಳಲ್ಲಿ ಇದ್ದಾರೆ.

ಜಾತಿ ಬಲಾಬಲ: ಕ್ಷೇತ್ರದಲ್ಲಿ ಲಿಂಗಾಯತರು ಪ್ರಾಬಲ್ಯ ಹೊಂದಿದ್ದು, 2ನೇ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ಅಂದಾಜು 6.50 ಲಕ್ಷದಷ್ಟು ಲಿಂಗಾಯತರಿದ್ದರೆ, 3 ಲಕ್ಷದಷ್ಟು ಮುಸ್ಲಿಮರು, 2 ಲಕ್ಷದಷ್ಟು ಪರಿಶಿಷ್ಟ ಜಾತಿ, 1.60 ಲಕ್ಷದಷ್ಟು ಕುರುಬರು, ಒಂದು ಲಕ್ಷದಷ್ಟು ಪರಿಶಿಷ್ಟ ಪಂಗಡದವರು, 1 ಲಕ್ಷದಷ್ಟು ಎಸ್ಎಸ್‌ಕೆ (ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ), ಮರಾಠ ಸಮಾಜದವರು, 50 ಸಾವಿರಕ್ಕೂ ಅಧಿಕ ಬ್ರಾಹ್ಮಣರು, ಇತರ ಸಮಾಜದವರು 2 ರಿಂದ 2.50 ಲಕ್ಷದಷ್ಟು ಮತದಾರರಿದ್ದಾರೆ. ಲಿಂಗಾಯತ ಹಾಗೂ ಮುಸ್ಲಿಂ ಮತದಾರರು ಪ್ರಮುಖ ಸ್ಥಾನದಲ್ಲಿದ್ದರೆ, ಪರಿಶಿಷ್ಟ ಜಾತಿ ಹಾಗೂ ಕುರುಬ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ.

BJP AND CONGRESS FIGHT
ಮತದಾರರ ಮಾಹಿತಿ (Etv Bharat)

ಮತದಾರರ ಮಾಹಿತಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,893 ಮತಗಟ್ಟೆಗಳು ಇವೆ. 18,31,975 ಒಟ್ಟು ಮತದಾರರಿದ್ದರೆ, ಈ ಪೈಕಿ 9,17,926 ಪುರುಷರು, 9,13,949 ಮಹಿಳಾ ಮತ್ತು 100 ಇತರ ಮತದರರು ಇದ್ದಾರೆ. 2,040 ಒಟ್ಟು ಸೇವಾ ಮತದಾರರಿದ್ದರೆ, ಈ ಪೈಕಿ 1,969 ಪುರುಷರು, 71 ಮಹಿಳಾ ಮತದರರು ಇದ್ದಾರೆ. 47,204 ಒಟ್ಟು ಯುವ ಮತದಾರರಿದ್ದರೆ, ಈ ಪೈಕಿ 25,005 ಪುರುಷರು, 22,194 ಮಹಿಳಾ, 5 ಇತರ ಮತದರರಿದ್ದಾರೆ. 85 ವರ್ಷ ಮೇಲ್ಪಟ್ಟ 18,626 ಮತದಾರರಿದ್ದರೆ, ಈ ಪೈಕಿ 8,254 ಪುರುಷರು, 10,372 ಮಹಿಳಾ ಮತದರರಿದ್ದಾರೆ. ಒಟ್ಟು 25,787 ದಿವ್ಯಾಂಗ ಮತದಾರರಿದ್ದು, ಇದರಲ್ಲಿ 14,772 ಪುರುಷರು, 11,012 ಮಹಿಳೆ, 03 ಇತರೆ ಮತದಾರರಿದ್ದಾರೆ. ಅನಿವಾಸಿ ಭಾರತೀಯ ಮತದಾರರು ಕ್ಷೇತ್ರದಲ್ಲಿದ್ದಾರೆ.

ಕ್ಷೇತ್ರದ ನಿರೀಕ್ಷೆಗಳು: ಮಹದಾಯಿ ಯೋಜನೆಗೆ ಮುಕ್ತಿ, ರೈಲು ಮಾರ್ಗಗಳ ಅಭಿವೃದ್ಧಿ, ವರ್ತುಲ ರಸ್ತೆ ಯೋಜನೆ ಆರಂಭ, ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ, ಉದ್ಯೋಗಾವಕಾಶ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮೂಲ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಪ್ರಮುಖ ಅಭ್ಯರ್ಥಿಗಳ ಬಲಾಬಲ: ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಜೆಪಿ, ಈ ಚುನಾವಣೆಯಲ್ಲೂ‌ ಮೋದಿ ಬಲದಿಂದ ಗೆಲುವಿನ ಕೇಕೆ ಹಾಕುವ ವಿಶ್ವಾಸದಲ್ಲಿದೆ. ಇನ್ನು ಕಾಂಗ್ರೆಸ್ ಈ ಬಾರಿ ಹೇಗಾದ್ರೂ ಮಾಡಿ ಬಿಜೆಪಿ ಕೈಯಿಂದ ಧಾರವಾಡ ಕ್ಷೇತ್ರವನ್ನು ವಶಕ್ಕೆ ಪಡೆದೇ ತೀರುತ್ತೇವೆ ಎನ್ನುವ ಧಾವಂತದಲ್ಲಿದ್ದು, ಐದು ಗ್ಯಾರಂಟಿಗಳು ಕೈ ಹಿಡಿಯುವ ನಂಬಿಕೆಯಲ್ಲಿದ್ದಾರೆ. ಒಟ್ಟಿನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದ್ದು, ಜೋಶಿಗೆ ಮೋದಿ ಗ್ಯಾರಂಟಿ, ಕಾಂಗ್ರೆಸ್‌ನ ಪಂಚ ಗ್ಯಾರಂಟಿ ಹಾಗೂ ವೈಯಕ್ತಿಕ ವರ್ಚಸ್ಸಿನ ನಡುವೆ ಹಣಾಹಣಿ ಏರ್ಪಟ್ಟಿದ್ದು, ಮತದಾರ ಯಾರತ್ತ ಒಲವು ತೋರಿಸುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.‌

ಇದನ್ನೂ ಓದಿ:

ಈ ಸಲ ಜೋಶಿ ಬದಲು ಕಾಂಗ್ರೆಸ್​​ನ ವಿನೋದ್‌ ಅಸೂಟಿಗೆ ಮತ ಹಾಕಿ: ಸಿದ್ದರಾಮಯ್ಯ - CM Siddaramaiah Campaign

ಲಿಂಗಾಯತರ ಅವನತಿಗಾಗಿ ಹುಟ್ಟಿದ ಶಕ್ತಿಯೇ ಪ್ರಹ್ಲಾದ್ ಜೋಶಿ: ದಿಂಗಾಲೇಶ್ವರ ಸ್ವಾಮೀಜಿ ಆರೋಪ - Dingaleshwar Swamiji

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಸಹಜ: ಜೋಶಿ - Prahlad Joshi

Last Updated :May 4, 2024, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.