ETV Bharat / state

ರಾಮೇಶ್ವರಂ ಕೆಫೆ ಸ್ಫೋಟ: ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ

author img

By ETV Bharat Karnataka Team

Published : Mar 1, 2024, 11:00 PM IST

ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ
ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಸಂಬಂಧ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಬಿಜೆಪಿ ನಾಯಕರು ಭೇಟಿ ಮಾಡಿದರು.

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಸಂಬಂಧ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ನೇತೃತ್ವದ ನಿಯೋಗ ಭೇಟಿ ಮಾಡಿತು.

ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ
ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಷಿ, ಇಂದು ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಘಟನೆ ದುರ್ದೈವದ ಸಂಗತಿ. ಮೂವರು ಗಾಯಾಳುಗಳ ಪರಿಸ್ಥಿತಿ ನೋಡಿದೆವು. ಒಬ್ಬರಿಗೆ ಗಾಯ ಜಾಸ್ತಿ ಆಗಿದೆ. ಆಪರೇಷನ್ ಮಾಡಲಾಗುತ್ತಿದೆ. ಇನ್ನಿಬ್ಬರಿಗೂ ಟ್ರೀಟ್ಮೆಂಟ್ ನಡೆಯುತ್ತಿದ್ದು, ಔಟ್ ಆಫ್ ಡೇಂಜರ್ ಅಂತಾ ವೈದ್ಯರು ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಯಿಂದ ಆರೋಪಿಗಳಿಗೆ ಕುಮ್ಮಕ್ಕು ಸಿಗುತ್ತಿದೆ ಎಂದರು.

ನಾಲ್ಕು ದಿನದ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳಿದಾಗ ಅದನ್ನು ವಿರೋಧಿಸಿಲ್ಲ. ಈ ಮೂಲಕ ಪರೋಕ್ಷವಾಗಿ ಕುಮ್ಮಕ್ಕು ಕೊಡುವ ರೀತಿ ಹೇಳಿಕೆ ಕೊಟ್ಟಿದ್ದರು. ಈ ಹಿಂದೆ ಪಿಎಫ್ಐ ಮೇಲಿನ ಕೇಸ್​ಗಳನ್ನೂ ವಾಪಸ್ ತೆಗೆದುಕೊಂಡಿದ್ದರು. ತುಷ್ಟೀಕರಣ ರಾಜಕಾರಣದಿಂದಾಗಿ ಘಟನೆ ನಡೆದಿದೆ. ಎನ್​ಐಎ ತನಿಖೆಗೆ ನಾವು ಸಹಕಾರ ಕೊಡ್ತೀವಿ ಎಂದು ತಿಳಿಸಿದರು.

ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು

ವೈದ್ಯರಾದ ಪ್ರದೀಪ್ ಮಾತನಾಡಿ, ಗಾಯಾಳುವಿಗೆ ನಾಲ್ಕು ಗಂಟೆಗಳ ಶ್ರಮದಿಂದ ಸರ್ಜರಿ ಯಶಸ್ವಿಯಾಗಿದೆ. ಒಬ್ಬರಿಗೆ ಕಪಾಳದ ಬಳಿ ಕಂಪ್ಲೀಟ್ ಆಗಿ ಗ್ಲಾಸ್ ಹೋಗಿತ್ತು. ಎದೆ ಬಳಿಯೂ ಒಂದು ಸರ್ಜರಿ ಮಾಡಲಾಗಿದೆ. ಕಾಲು ಹಾಗೂ ಕೈಗೆ ಶೇ.35ರಷ್ಟು ಗಾಯಗಳಾಗಿದೆ. ಸದ್ಯಕ್ಕೆ ಎಲ್ಲ ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಳೆಯವರೆಗೂ ಐಸಿಯುನಲ್ಲಿ ನಿಗಾ ಇಡಲಾಗುವುದು. ಅವರ ಆರೋಗ್ಯ ಸ್ಥಿರವಾಗಿದ್ದರೆ ಸಾಮಾನ್ಯ ವಾರ್ಡ್​ಗೆ ಶಿಫ್ಟ್ ಮಾಡುತ್ತೇವೆ. ಇಂಟರ್ನಲ್ ಬರ್ನ್ ಆಗಿರೋದು ಕಂಡುಬಂದಿಲ್ಲ. ಪೇಷೆಂಟ್​ಗೆ ಡಯಾಬಿಟೀಸ್ ಇರುವುದರಿಂದ ಗಾಯಗಳು ಒಣಗೋದು ತಡ ಆಗುತ್ತೆ. ಮೇಜರ್ ಬರ್ನಿಂಗ್ ಆಗಿರೋದು ಕಂಡುಬಂದಿಲ್ಲ. ನಮ್ಮ ಕಡೆಯಿಂದ ಏನೆಲ್ಲಾ ಚಿಕಿತ್ಸೆ ಮಾಡ್ಬೇಕೋ ಎಲ್ಲವನ್ನೂ ಮಾಡಲಾಗ್ತಿದೆ ಎಂದರು.

ಇದನ್ನೂ ಓದಿ: ಬಾಂಬ್​ ಸ್ಫೋಟದ ಆರೋಪಿ ಬಸ್​ನಿಂದಿಳಿದು ಕೆಫೆಗೆ ಬಂದು ರವೆ ಇಡ್ಲಿ ತಿಂದಿದ್ದ: ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.