ETV Bharat / sports

IPL 2024: ಲಖನೌ ಗೆಲುವಿಗೆ 209 ರನ್​ ಟಾರ್ಗೆಟ್​ ನೀಡಿದ ಡೆಲ್ಲಿ.. ಈ ಸವಾಲು ಮೆಟ್ಟಿ ನಿಲ್ಲುತ್ತಾ ಕೆಎಲ್ ಪಡೆ​​​​​ - DC VS LSG

author img

By ETV Bharat Karnataka Team

Published : May 14, 2024, 7:17 PM IST

Updated : May 14, 2024, 11:03 PM IST

ಐಪಿಎಲ್ ಟೂರ್ನಿಯ 64ನೇ ಪಂದ್ಯದಲ್ಲಿಂದು ಲಖನೌ ಸೂಪರ್​ ಜೈಂಟ್ಸ್​ ತಂಡದ ಗೆಲುವಿಗೆ ಡೆಲ್ಲಿ ಕ್ಯಾಪಿಟಲ್ಸ್​ ತಂಡ 209 ರನ್​ ಟಾರ್ಗೆಟ್​ ನೀಡಿದೆ.

ಡೆಲ್ಲಿ ವಿರುದ್ಧ ಟಾಸ್​ ಗೆದ್ದ ಲಕ್ನೋ ಬೌಲಿಂಗ್​ ಆಯ್ಕೆ
ಡೆಲ್ಲಿ ವಿರುದ್ಧ ಟಾಸ್​ ಗೆದ್ದ ಲಕ್ನೋ ಬೌಲಿಂಗ್​ ಆಯ್ಕೆ (ETV Bharat)

ನವದೆಹಲಿ: ಅಭಿಷೇಕ್ ಪೊರೆಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಲಖನೌ ಸೂಪರ್​ ಜೈಂಟ್ಸ್​ ತಂಡದ ವಿರುದ್ಧ 208 ರನ್​ ಹಾಕಿದೆ. ಕೆ.ಎಲ್​.ರಾಹುಲ್​ ಪಡೆಯ ಗೆಲುವಿಗೆ 209 ರನ್​ಗಳ ಗುರಿ ನೀಡಲಾಗಿದೆ.

ಇಲ್ಲಿನ ಅರುಣ್​ ಜೇಟ್ಲಿ ಮೈದಾನದಲ್ಲಿ ಐಪಿಎಲ್​ನ 64ನೇ ಪಂದ್ಯ ನಡೆಯುತ್ತಿದೆ. ಟಾಸ್ ​ಗೆದ್ದ ಲಖನೌ ಸೂಪರ್​ ಜೈಂಟ್ಸ್​ ನಾಯಕ ಕೆ.ಎಲ್​.ರಾಹುಲ್​ ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಇದರಿಂದ ರಿಷಭ್​ ಪಂತ್ ಬಳಗ ಮೊದಲು ಬ್ಯಾಟಿಂಗ್​ಗೆ ಇಳಿದು ನಿಗದಿತ 20 ಓವರ್​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 208 ಪೇರಿಸಿತು.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆರಂಭ ಉತ್ತಮವಾಗಿರಲಿಲ್ಲ. ಅಪಾಯಕಾರಿ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ವೇಳೆ, ಅಭಿಷೇಕ್ ಪೊರೆಲ್ ಹಾಗೂ ಶಾಯ್ ಹೋಪ್ ಉತ್ತಮ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್​ಗೆ ಈ ಜೋಡಿ 49 ಎಸೆತಗಳಲ್ಲಿ 92 ರನ್‌ಗಳನ್ನು ಕಲೆ ಹಾಕಿತು. ಶಾಯ್ ಹೋಪ್ 27 ಎಸೆತಗಳಲ್ಲಿ 38 ರನ್​ ಗಳಿಸಿ ಔಟಾದರು.

ಮತ್ತೊಂದೆಡೆ, ಪೊರೆಲ್ 33 ಬಾಲ್​ಗಳಲ್ಲಿ 58 ರನ್​ ಬಾರಿಸಿದರು. ಮಧ್ಯ ಕ್ರಮಾಂಕದಲ್ಲಿ ನಾಯಕ ರಿಷಭ್ ಪಂತ್ 33 ರನ್​ಗಳ ಕೊಡುಗೆ ನೀಡಿದರು. ಸ್ಟಬ್ಸ್ 25 ಎಸೆತಗಳಲ್ಲಿ 57 ರನ್ ಸಿಡಿಸಿ ಮತ್ತು ಅಕ್ಷರ್ ಪಟೇಲ್ 10 ಬಾಲ್​ಗಳಲ್ಲಿ 14 ರನ್​ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಡೆಲ್ಲಿ 200ರ ಗಡಿ ದಾಟಿಸಿದರು. ಲಖನೌ ಪರ ನವೀನ್-ಉಲ್-ಹಕ್ 2 ವಿಕೆಟ್​ ಪಡೆದರೆ, ರವಿ ಬಿಷ್ಣೋಯ್ ಮತ್ತು ಅರ್ಷದ್ ಖಾನ್ ತಲಾ ವಿಕೆಟ್ ಪಡೆದರು.

ತಂಡಗಳು - ಡೆಲ್ಲಿ ಕ್ಯಾಪಿಟಲ್ಸ್​: ಅಭಿಷೇಕ್ ಪೊರೆಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಶಾಯ್ ಹೋಪ್, ರಿಷಭ್​ ಪಂತ್(ನಾ/ವಿ.ಕೀ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಗುಲ್ಬದಿನ್ ನೈಬ್, ರಸಿಖ್ ದಾರ್ ಸಲಾಂ, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್

ಇಂಪ್ಯಾಕ್ಟ್​​ ಪ್ಲೇಯರ್ಸ್​: ಇಶಾಂತ್ ಶರ್ಮಾ, ಕುಮಾರ್ ಕುಶಾಗ್ರಾ, ಪ್ರವೀಣ್ ದುಬೆ, ಸ್ವಸ್ತಿಕ್ ಚಿಕಾರಾ, ಲಲಿತ್ ಯಾದವ್

ಲಕ್ನೋ ಸೂಪರ್​ ಜೈಂಟ್ಸ್​: ಕೆಎಲ್ ರಾಹುಲ್(ನಾ/ವಿ.ಕೀ), ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ಯುದ್ವೀರ್ ಸಿಂಗ್ ಚರಕ್, ಅರ್ಷದ್ ಖಾನ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್

ಇಂಪ್ಯಾಕ್ಟ್​ ಪ್ಲೇಯರ್ಸ್​: ಮಣಿಮಾರನ್ ಸಿದ್ಧಾರ್ಥ್, ದೇವದತ್ ಪಡಿಕ್ಕಲ್, ಆಯುಷ್ ಬಡೋನಿ, ಪ್ರೇರಕ್ ಮಂಕಡ್, ಕೃಷ್ಣಪ್ಪ ಗೌತಮ್

ಇದನ್ನೂ ಓದಿ: ಕೆ.ಎಲ್.ರಾಹುಲ್​ಗೆ ಔತಣ ಆಯೋಜಿಸಿದ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ - Special dinner party for KL RAHUL

Last Updated :May 14, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.