ETV Bharat / international

ರಷ್ಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ 140ಕ್ಕೂ ಹೆಚ್ಚು ಜನ ಬಲಿ, 145 ಮಂದಿಗೆ ಗಾಯ; ನಾಲ್ವರು ಬಂದೂಕುದಾರಿಗಳ ಬಂಧನ - TERRORIST ATTACK IN RUSSIA

author img

By PTI

Published : Mar 23, 2024, 7:10 AM IST

Updated : Mar 23, 2024, 7:06 PM IST

Terrorist attack in Russia  Islamic State group Russia says 40 dead, 145 injured in concert hall raid; Islamic State group claims responsibility
ಮಾಸ್ಕೋದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ 40 ಜನ ಸಾವು, 145 ಮಂದಿಗೆ ಗಾಯ: ದಾಳಿ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್ ಗ್ರೂಪ್

ರಷ್ಯಾದ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲ್‌ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಹೊತ್ತಿದೆ.

ಮಾಸ್ಕೋ (ರಷ್ಯಾ): ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆದಿದೆ. ಹಲವು ದಾಳಿಕೋರರು ಕ್ರಾಕೋವ್‌ನ ಕನ್ಸರ್ಟ್ ಹಾಲ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಸುಮಾರು 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 145 ಜನರು ಗಾಯಗೊಂಡಿದ್ದಾರೆ. ಭಯೋತ್ಪಾದಕ ದಾಳಿ ನಡೆದಿರುವ ಕುರಿತು ರಷ್ಯಾದ ಫೆಡರಲ್ ಭದ್ರತಾ ಸೇವಾ ಅಧಿಕಾರಿಗಳು ದೃಢಪಡಿಸಿದ್ದಾರೆ. ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ 'ಫಿಕ್ನಿಕ್' ಸಂಗೀತ ಕಚೇರಿಯಲ್ಲಿ ಈ ದಾಳಿ ನಡೆದಿದೆ.

ಇಸ್ಲಾಮಿಕ್ ಸ್ಟೇಟ್ ಗುಂಪು ಸಾಮಾಜಿಕ ಜಾಲತಾಣದಲ್ಲಿ ಅಂಗಸಂಸ್ಥೆ ಚಾನಲ್‌ಗಳಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಅವರು, ಇದೊಂದು ದೊಡ್ಡ ದುರಂತ ಎಂದು ಹೇಳಿದ್ದಾರೆ. ಮತ್ತು ಅಧಿಕಾರಿಗಳು ಭಯೋತ್ಪಾದಕ ದಾಳಿ ಕುರಿತು ತನಿಖೆ ನಡೆಸುತ್ತಿದ್ದಾರೆ.

145 ಗಾಯಾಳುಗಳ ಪಟ್ಟಿ ಬಿಡುಗಡೆ: ಮೊದಲು ಕಟ್ಟಡಕ್ಕೆ ನುಗ್ಗಿದ ದುಷ್ಕರ್ಮಿಗಳು ಒಳಗಿದ್ದವರ ಮೇಲೆ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದರು. ಸಂಗೀತಗೋಷ್ಠಿ ಮುಗಿದು ಹೊರಗೆ ಹೋಗುತ್ತಿದ್ದಾಗ ಒಮ್ಮೆ ಗುಂಡು ಹಾರಿಸಲಾಯಿತು. ಏನಾಗುತ್ತೆ ಎಂಬುದನ್ನು ತಿಳಿಯದೆ ಅಲ್ಲಿದ್ದ ಜನರು ತುಂಬಾ ಭಯದಿಂದ ಆಸನಗಳ ನಡುವೆ ಅಡಗಿ ಕುಳಿತಿದ್ದರು. ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸಭಾಂಗಣದಲ್ಲಿ ಸಿಲುಕಿದ್ದ ಹಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಆರೋಗ್ಯ ಅಧಿಕಾರಿಗಳು 145 ಗಾಯಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅವರಲ್ಲಿ ಐವರು ಮಕ್ಕಳು ಸೇರಿದಂತೆ 115 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪೊಲೀಸರ ಕೈಗೆ ಸಿಕ್ಕಿಬಿದ್ದ ಓರ್ವ ದಾಳಿಕೋರ: ಈ ದಾಳಿಗೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಂದೂಕುಧಾರಿಗಳು ಗುಂಡು ಹಾರಿಸುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಇಲ್ಲಿದ್ದ ಜನರು ಭಯಭೀತರಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ದಾಳಿ ನಡೆದ ಸಮಯದಲ್ಲಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ತುಂಬಾ ಕಪ್ಪು ಹೊಗೆ ಹರಡಿತು. ಐವರು ಬಂದೂಕುಧಾರಿಗಳು ಗುಂಡಿನ ಮಳೆಗರಿದಿದ್ದಾರೆ. ಈ ಪೈಕಿ ಓರ್ವ ದಾಳಿಕೋರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ. ಸಭಾಂಗಣಕ್ಕೆ ನುಗ್ಗಿದ ಶಸ್ತ್ರಧಾರಿಗಳು ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ಬೆಂಕಿ ಕಟ್ಟಡದಾದ್ಯಂತ ವ್ಯಾಪಿಸಿದೆ. 11 ದಾಳಿಕೋರರ ಪೈಕಿ ನಾಲ್ವರು ಬಂದೂಕುದಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಷ್ಯಾದ ವಿವಿಧ ಪ್ರದೇಶಗಳಲ್ಲಿ ಬಿಗಿ ಭದ್ರತೆ: ದಾಳಿ ಪರಿಣಾಮ ಮಾಸ್ಕೋದ ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ರಾಜಧಾನಿಯ ಸುರಂಗಮಾರ್ಗಗಳು ಇರುವ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕೋದ ಮೇಯರ್ ಎಲ್ಲಾ ಸಾಮೂಹಿಕ ಕೂಟಗಳನ್ನು ರದ್ದುಗೊಳಿಸಿದ್ದಾರೆ. ಮತ್ತು ವಾರಾಂತ್ಯದಲ್ಲಿ ಚಿತ್ರಮಂದಿರಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಬಂದ್​ ಮಾಡಲಾಗಿದೆ. ಜೊತೆಗೆ ರಷ್ಯಾದ ಇತರ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಅಮೆರಿಕದ ಶ್ವೇತಭವನ ಪ್ರತಿಕ್ರಿಯೆ: ಈ ಘಟನೆಗೆ ಅಮೆರಿಕದ ಶ್ವೇತಭವನ ಪ್ರತಿಕ್ರಿಯೆ ನೀಡಿದೆ. ಕಮಾಂಡ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ, ಘಟನೆಯ ದೃಶ್ಯಗಳು ಭಯಾನಕವಾಗಿವೆ. ಈ ಘಟನೆ ಬಗ್ಗೆ ಈಗ ಮಾತನಾಡಲಾರೆ ಎಂದು ಹೇಳಿದ್ದಾರೆ.

ಇದು ಕಳೆದ ಎರಡು ದಶಕಗಳಲ್ಲಿ ರಷ್ಯಾದಲ್ಲಿ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. 2002ರಲ್ಲಿ ಚೆಚೆನ್ ಉಗ್ರಗಾಮಿಗಳು ಮಾಸ್ಕೋ ಥಿಯೇಟರ್​ನಲ್ಲಿ ಸುಮಾರು 800 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇದರೊಂದಿಗೆ ರಷ್ಯಾದ ವಿಶೇಷ ಪಡೆಗಳು ಕ್ಷೇತ್ರಕ್ಕೆ ಪ್ರವೇಶಿಸಿ ಅವರನ್ನು ಬಿಡುಗಡೆಗೊಳಿಸಿದ್ದವು. ಈ ಸಮಯದಲ್ಲಿ 129 ಒತ್ತೆಯಾಳುಗಳು ಮತ್ತು 41 ಉಗ್ರಗಾಮಿಗಳು ಸಾವನ್ನಪ್ಪಿದ್ದರು. 2004ರಲ್ಲಿ 30 ಚೆಚೆನ್ ಉಗ್ರಗಾಮಿಗಳು ಬೆಸ್ಲಾನ್‌ನಲ್ಲಿ ಶಾಲೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಮತ್ತು ನೂರಾರು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅವರನ್ನು ಬಿಡಿಸಿಕೊಂಡು ಬರುವ ಪ್ರಕ್ರಿಯೆಯಲ್ಲಿ ಸುಮಾರು 330 ಜನರು ಸಾವನ್ನಪ್ಪಿದ್ದರು. ಅವರಲ್ಲಿ ಅರ್ಧದಷ್ಟು ಮಕ್ಕಳು ಇದ್ದರು.

ಇದನ್ನೂ ಓದಿ: ಅಲ್ ಶಿಫಾ ಆಸ್ಪತ್ರೆ ಮೇಲೆ ಮುಂದುವರಿದ ಇಸ್ರೇಲ್ ದಾಳಿ: 140 ಪ್ಯಾಲೆಸ್ಟೈನಿಯರ ಸಾವು - Gaza

Last Updated :Mar 23, 2024, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.