ETV Bharat / international

ಮಾಸ್ಕೋ ಕನ್ಸರ್ಟ್ ಹಾಲ್ ಮೇಲಿನ ದಾಳಿಯೊಂದಿಗೆ ಉಕ್ರೇನ್ ಸಂಬಂಧ: ಪುಟಿನ್ ಆರೋಪ - Vladimir Putin

author img

By PTI

Published : Mar 24, 2024, 8:37 AM IST

TERRORIST ATTACK IN RUSSIA  TERRORIST ATTACK  Russian President Vladimir Putin  Ukraine
ಮಾಸ್ಕೋ ಕನ್ಸರ್ಟ್ ಹಾಲ್ ಮೇಲೆ ದಾಳಿ

ಮಾಸ್ಕೋ ಕನ್ಸರ್ಟ್ ಹಾಲ್ ಮೇಲಿನ ದಾಳಿಯೊಂದಿಗೆ ಉಕ್ರೇನ್ ಸಂಬಂಧ ಹೊಂದಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಪಿಸಿದ್ದಾರೆ. ಆದರೆ, ಈ ಆರೋಪಗಳನ್ನು ಉಕ್ರೇನ್ ಬಲವಾಗಿ ತಳ್ಳಿ ಹಾಕಿದೆ.

ಮಾಸ್ಕೋ(ರಷ್ಯಾ): ''ಮಾಸ್ಕೋದ ಹೊರವಲಯದಲ್ಲಿರುವ ಕನ್ಸರ್ಟ್ ಹಾಲ್‌ ಮೇಲೆ ದಾಳಿ ನಡೆಸಿ 115 ಜನರನ್ನು ಹತ್ಯೆಗೈದಿರುವ ಘಟನೆಯೊಂದಿಗೆ ಉಕ್ರೇನ್‌ ಸಂಬಂಧ ಹೊಂದಿದೆ'' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಂಭೀರ ಆರೋಪ ಮಾಡಿದ್ದಾರೆ.

TERRORIST ATTACK IN RUSSIA  TERRORIST ATTACK  Russian President Vladimir Putin  Ukraine
ಮೇಣದ ಬತ್ತಿಗಳನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಕೆ

ಐಸಿಸ್​ನ ಅಫ್ಘಾನಿಸ್ತಾನ ಶಾಖೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಅಂಗಸಂಸ್ಥೆಗಳ ಚಾನೆಲ್‌ಗಳ ಮೂಲಕ ಈ ಕುರಿತು ಪೋಸ್ಟ್ ಮಾಡಿದೆ. ಐಸಿಸ್​ ಗುಂಪಿನಿಂದ ದಾಳಿ ನಡೆದಿದೆ ಎಂದು ಯುಎಸ್ ಏಜೆನ್ಸಿಗಳೂ ಖಚಿತಪಡಿಸಿವೆ ಎಂದು ಯುಎಸ್ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

TERRORIST ATTACK IN RUSSIA  TERRORIST ATTACK  Russian President Vladimir Putin  Ukraine
ಮಾಸ್ಕೋ ಕನ್ಸರ್ಟ್ ಹಾಲ್ ಮೇಲೆ ನಡೆದ ಭಯೋತ್ಪಾದಕ ದಾಳಿ

''ದಾಳಿಯಲ್ಲಿ ನೇರವಾಗಿ ಭಾಗಿಯಾಗಿರುವ ಎಲ್ಲಾ ನಾಲ್ಕು ಜನರನ್ನು ಬಂಧಿಸಲಾಗಿದೆ. ದಾಳಿಕೋರರು ತಪ್ಪಿಸಿಕೊಳ್ಳಲು ಉಕ್ರೇನ್‌ ಗಡಿ ದಾಟುವ ಪ್ರಯತ್ನ ಮಾಡಿದ್ದಾರೆ'' ಎಂದು ಪುಟಿನ್ ಹೇಳಿದ್ದಾರೆ. ಆದರೆ ತಮ್ಮ ಹೇಳಿಕೆಗೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.

''ಭಾನುವಾರ ರಾಷ್ಟ್ರವ್ಯಾಪಿ ಶೋಕಾಚರಣೆ ಮಾಡಲಾಗುತ್ತದೆ. ಇದು ರಷ್ಯಾ ಮೇಲೆ ನಡೆದ ಅತ್ಯಂತ ದೊಡ್ಡ ಮಾರಣಾಂತಿಕ ದಾಳಿಯಾಗಿದೆ. ಕ್ರಾಕೋವ್‌ನ ಕನ್ಸರ್ಟ್ ಹಾಲ್​ ಸಂಪೂರ್ಣ ನಾಶವಾಗಿದೆ'' ಎಂದು ಪುಟಿನ್ ತಿಳಿಸಿದ್ದಾರೆ.

TERRORIST ATTACK IN RUSSIA  TERRORIST ATTACK  Russian President Vladimir Putin  Ukraine
ದುಃಖ ವ್ಯಕ್ತಪಡಿಸಿದರು ಮೃತರ ಸಂಬಂಧಿಕರು

140ಕ್ಕೂ ಹೆಚ್ಚು ಜನರು ಸಾವು: ಶುಕ್ರವಾರ ರಾತ್ರಿ ಹಲವು ದಾಳಿಕೋರರು ಕ್ರಾಕೋವ್‌ನ ಕನ್ಸರ್ಟ್ ಹಾಲ್‌ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದರು. ಘಟನೆಯಲ್ಲಿ 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 145 ಜನರು ಗಾಯಗೊಂಡಿದ್ದಾರೆ. ಪ್ರಸಿದ್ಧ ರಾಕ್ ಬ್ಯಾಂಡ್ 'ಫಿಕ್ನಿಕ್' ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

TERRORIST ATTACK IN RUSSIA  TERRORIST ATTACK  Russian President Vladimir Putin  Ukraine
ಕನ್ಸರ್ಟ್ ಹಾಲ್‌ನಿಂದ ಸ್ವಲ್ಪ ದೂರದಲ್ಲಿ ಮೃತ ನೆನಪಿಸಿಕೊಂಡು ಹೂವು ಅರ್ಪಿಸಿದರು

ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ಗೆ ಶನಿವಾರ ಅನೇಕರು ಭೇಟಿ ನೀಡಿ ಸಾವನ್ನಪ್ಪಿದವರಿಗೆ ಹೂಗುಚ್ಛ, ಮೊಂಬತ್ತಿ ಹತ್ತಿಸಿ ಸಂತಾಪ ಸಲ್ಲಿಸಿದರು. ದುಃಖತಪ್ತ ಕುಟುಂಬಸ್ಥರು ಹಾಲ್‌ನಿಂದ ಸ್ವಲ್ಪ ದೂರದಲ್ಲಿ ಮೃತರನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದರು. ಮೃತ ಮಕ್ಕಳನ್ನು ಸ್ಮರಿಸಲು ಸಂಬಂಧಿಕರು ಆಟದ ಸಾಮಗ್ರಿಗಳನ್ನು ತಂದಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

TERRORIST ATTACK IN RUSSIA  TERRORIST ATTACK  Russian President Vladimir Putin  Ukraine
ಮೃತ ಮಕ್ಕಳ ನೆನಪಿಗಾಗಿ ಆಟದ ಸಾಮಗ್ರಿಗಳನ್ನು ತಂದು ಇರಿಸಿ ಸಂತಾಪ ಸೂಚಿಸಿದರು

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ ರಷ್ಯಾದ್ಯಂತ ಸ್ಮಾರಕಗಳಲ್ಲಿ ಮತ್ತು ವಿದೇಶದಲ್ಲಿರುವ ರಷ್ಯಾದ ರಾಯಭಾರ ಕಚೇರಿಗಳಲ್ಲಿ ಮೃತರ ನೆನಪಿಗಾಗಿ ಮೇಣದಬತ್ತಿಗಳನ್ನು ಹಚ್ಚಿ, ಹೂವುಗಳನ್ನು ಸಮರ್ಪಿಸಿ ಶ್ರದ್ದಾಂಜಲಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ 140ಕ್ಕೂ ಹೆಚ್ಚು ಜನ ಬಲಿ, 145 ಮಂದಿಗೆ ಗಾಯ; ನಾಲ್ವರು ಬಂದೂಕುದಾರಿಗಳ ಬಂಧನ - TERRORIST ATTACK IN RUSSIA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.