ETV Bharat / health

ದೇಶದಲ್ಲಿ ಹೆಚ್ಚುತ್ತಿದೆ ಜೀವನಶೈಲಿ ಆಧಾರಿತ ರೋಗ: ಭಾರತ ವಿಶ್ವದ ಕ್ಯಾನ್ಸರ್ ರಾಜಧಾನಿಯಾಗುವ ಅಪಾಯ - Claw of lifestyle diseases

author img

By ETV Bharat Karnataka Team

Published : Apr 6, 2024, 11:28 AM IST

apollo-report-revels-india-is-in-danger-of-becoming-the-cancer-capital-of-the-world
apollo-report-revels-india-is-in-danger-of-becoming-the-cancer-capital-of-the-world

ಭಾರತದ ಮೇಲೆ ಕ್ಯಾನ್ಸರ್​, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಜೀವನಶೈಲಿ ಆಧಾರಿತ ರೋಗದ ಹೊರೆ ಹೆಚ್ಚುತ್ತಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ

ಹೈದರಾಬಾದ್​: ಜೀವನಶೈಲಿಯಾಧಾರಿತ ರೋಗಗಳಲ್ಲಿ ಏರಿಕೆ ಕಾಣುತ್ತಿದ್ದು, ಇದು ದೇಶದಲ್ಲಿ ಶೇ 63ರಷ್ಟು ಸಾವಿಗೆ ಕಾರಣವಾಗುತ್ತಿದೆ. ಈ ಸಂಬಂಧ "ಅಪೋಲೋ ಹೆಲ್ತ್​ ಆಫ್​ ನೇಷನ್​- 2024" ಎಂಬ ವರದಿಯನ್ನು ಅಪೋಲೋ ಗ್ರೂಪ್​ ಹಾಸ್ಪಿಟಲ್​ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ದೇಶಾದ್ಯಂತ ಇರುವ ಗ್ರೂಪ್​ ಹಾಸ್ಪಿಟಲ್​​ಗೆ​ ಭೇಟಿ ನೀಡುವ ರೋಗಿಗಳ ಡೇಟಾವನ್ನು ವಿಶ್ಲೇಷಿಸಿ ಅಭಿವೃದ್ಧಿಪಡಿಸಲಾಗಿದೆ.

ಈ ಹಿಂದಿನ ಸ್ಥಿತಿಗೆ ಹೋಲಿಕೆ ಮಾಡಿದಾಗ ಇತ್ತೀಚಿನ ವರ್ಷಗಳಲ್ಲಿ ಹಲವು ಬಗೆಯ ಕ್ಯಾನ್ಸರ್​​ಗಳಲ್ಲಿ ಏರಿಕೆ ಕಾಣುತ್ತಿದೆ ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ವರದಿ ಅನುಸಾರ, ಭಾರತವು ವಿಶ್ವದ ಕ್ಯಾನ್ಸರ್ ರಾಜಧಾನಿಯಾಗುವ ಅಪಾಯವು ಆತಂಕಕಾರಿ ಸಂಕೇತವನ್ನು ಹೊಂದಿದೆ. ಯುವಜನತೆಯಲ್ಲಿ ಕೂಡ ಪೂರ್ವ ಮಧುಮೇಹ ಮತ್ತು ಪೂರ್ವ ಅಧಿಕ ರಕ್ತದೊತ್ತಡ ಸಮಸ್ಯೆಗಳಲ್ಲೂ ಏರಿಕೆ ಕಾಣುತ್ತಿದೆ. ಈ ವರದಿಯೂ ಜೀವನಶೈಲಿ ಸಂಬಂಧಿತ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅಪೋಲೋ ಆಸ್ಪತ್ರೆಯ ಡಾ ಪ್ರೀತಾ ರೆಡ್ಡಿ ತಿಳಿಸಿದ್ದಾರೆ.

ಆರೋಗ್ಯ ಎಚ್ಚರಿಕೆ ವಹಿಸಬೇಕು: ಈ ಕುರಿತು ಮಾತನಾಡಿರುವ ಡಾ ಪ್ರೀತಿ ರೆಡ್ಡಿ, ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಆರೋಗ್ಯ ಕಾಳಜಿ ವಹಿಸುವುದು ಅಗತ್ಯವಾಗಿದೆ ಎಂದರು. ಸಿಇಒ ಡಾ.ಮಧು ಶಶಿಧರ್ ಮಾತನಾಡಿ, ದೇಶದ ಆರೋಗ್ಯ ವಲಯದಲ್ಲೂ ಈ ರೋಗಗಳು ಸವಾಲುಗಳನ್ನು ತಂದೊಡ್ಡುತ್ತಿವೆ. ಇವುಗಳನ್ನು ನಿಭಾಯಿಸಲು, ಅಪೋಲೋ ಮೊದಲ ಬಾರಿಗೆ 'ಪ್ರೊ ಹೆಲ್ತ್ ಸ್ಕೋರ್' ಎಂಬ ಡಿಜಿಟಲ್ ಆರೋಗ್ಯ ಅಪಾಯದ ಮೌಲ್ಯಮಾಪನ ಪ್ರಾರಂಭಿಸಿದೆ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದು, ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ವ್ಯಾಯಾಮದಿಂದ ಈ ರೋಗದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.

ಯುವಜನತೆಯಲ್ಲಿ ಖಿನ್ನತೆ: ಯುವಜನರಲ್ಲಿ ಖಿನ್ನತೆ ಹೆಚ್ಚುತ್ತಿದೆ. 5 ಸಾವಿರ ಮಂದಿ ಯುವಜನತೆಯನ್ನು ಪರೀಕ್ಷೆಗೆ ಒಳಪಡಿಸಿ ಈ ಸತ್ಯವನ್ನು ತಿಳಿದುಕೊಳ್ಳಲಾಗಿದೆ. 10 ರಲ್ಲಿ ಒಬ್ಬ ಸೋಂಕು ಹೊಂದಿದ್ದಾರೆ. 18-25 ವರ್ಷದೊಳಗಿನ ಐವರಲ್ಲಿ ಒಬ್ಬರಲ್ಲಿ ಖಿನ್ನತೆ ಇದೆ. 18 ರಿಂದ 20 ವರ್ಷ ಶೇ 80ರಷ್ಟು ಯುವ ಜನರು ಮತ್ತು 65 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಮನೆಯೊಳಗಿನ ಮತ್ತು ಮನೆಯೊರಗಿನ ಒತ್ತಡ ಹೆಚ್ಚಿದೆ.

ವರದಿಯ ಮುಖ್ಯಾಂಶ: ಭಾರತದಲ್ಲಿ ಸ್ತನ ಕ್ಯಾನ್ಸರ್​ನ ಸರಾಸರಿ ವಯಸ್ಸು 52 ಆಗಿದ್ದು, ಅಮೆರಿಕ ಮತ್ತು ಇತರ ಯುರೋಪಿಯನ್​ ದೇಶದಲ್ಲಿ 63 ಆಗಿದೆ. ಭಾರತದಲ್ಲಿ ಶ್ವಾಸಕೋಶ ರೋಗದ ಪತ್ತೆ ಸರಸಾರಿ ವಯಸ್ಸು 59 ಆಗಿದ್ದು, ಪಾಶ್ಚಿಮಾತ್ಯ ದೇಶದಲ್ಲಿ 70 ವರ್ಷ ಆಗಿದೆ. ಭಾರತದಲ್ಲಿ 50ವರ್ಷದೊಳಗಿನ ಶೇ 30ರಷ್ಟು ಮಂದಿ ದೊಡ್ಡ ಕರುಳಿನ ಕ್ಯಾನ್ಸರ್​ ಸಮಸ್ಯೆ ಹೊಂದಿದ್ದಾರೆ.

ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಕ್ಯಾನ್ಸರ್​ ಪರೀಕ್ಷೆಗೆ ಒಳಗಾಗುವುದು ತುಂಬಾ ಕಡಿಮೆಯಾಗಿದೆ. ಸ್ತನ ಕ್ಯಾನ್ಸರ್​ ಪರೀಕ್ಷೆಗೆ ಒಳಗಾಗುವಿಕೆ ಶೇ 1.9ರಷ್ಟಿದೆ. ಅಮೆರಿಕದಲ್ಲಿ ಇದು ಶೇ 82ರಷ್ಟಿದ್ದರೆ, ಯುಕೆಯಲ್ಲಿ ಶೇ 70 ಮತ್ತು ಚೀನಾದಲ್ಲಿ ಶೇ 23ರಷ್ಟಿದೆ. ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್​ ಪರೀಕ್ಷೆಗೆ ಒಳಗಾಗುವಿಕೆ ಪ್ರಮಾಣ ಕೇವಲ 0.9ರಷ್ಟಿದೆ. ಇದು ಅಮೆರಿಕದಲ್ಲಿ 73ರಷ್ಟು, ಯುಕೆಯಲ್ಲಿ 70ರಷ್ಟು ಮತ್ತು ಚೀನಾದಲ್ಲಿ ಶೇ 43ರಷ್ಟಿದೆ.

2016ರಲ್ಲಿ ದೇಶದಲ್ಲಿ ಸ್ಥೂಲಕಾಯತೆ ಸಮಸ್ಯೆ ಶೇ 9ರಷ್ಟಿತ್ತು. 2023ರಲ್ಲಿ ಶೇ 20ರಷ್ಟು ಹೆಚ್ಚಳ ಕಂಡಿದೆ. 2016ರಲ್ಲಿ ದೇಶದಲ್ಲಿ ಅಧಿಕ ರಕ್ತದೊತ್ತಡ ಶೇ 9ರಷ್ಟಿದ್ದು, 2023ರಲ್ಲಿ ಇದು ಶೇ 13ರಷ್ಟಾಗಿದೆ. ಪೂರ್ವ ಅಧಿಕ ರಕ್ತದೊತ್ತಡ ಅಪಾಯ ಶೇ 66ರಷ್ಟು ಮಂದಿ ಹೊಂದಿದ್ದಾರೆ.

ಅಪೋಲೋ ದತ್ತಾಂಶ ಅನುಸಾರ, ಭಾರತದಲ್ಲಿ 10ರಲ್ಲಿ ಒಂದು ಮಂದಿ ಅನಿಯಂತ್ರಿತ ಮಧುಮೇಹ ಹೊಂದಿದ್ದಾರೆ. ಮೂರರಲ್ಲಿ ಒಬ್ಬರು ಪ್ರಿ ಡಯಾಬಿಟಿಸ್​ ಹೊಂದಿದ್ದಾರೆ. ಇನ್ನು 45 ವರ್ಷದೊಳಗೆ ಐದರಲ್ಲಿ ಒಂದು ಮಂದಿ ಶೇ 45ರಷ್ಟು ಪೂರ್ವ ಮಧುಮೇಹದ ಅಪಾಯವನ್ನು ಹೊಂದಿದ್ದಾರೆ. ಅನೇಕ ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾಲ್ಕರಲ್ಲಿ ಒಂದು ಮಂದಿ ತೀವ್ರತರದ ಗೊರಕೆ ಸಮಸ್ಯೆ ಹೊಂದಿದ್ದಾರೆ. ಇದರಲ್ಲಿ ಮಹಿಳೆಯರಿಗಿಂತ ಪುರುಷರಲ್ಲಿ ಈ ಸಮಸ್ಯೆಯ ದುಪ್ಪಟ್ಟು ಪ್ರಮಾಣ ಹೊಂದಿದ್ದಾರೆ.

ಇದನ್ನೂ ಓದಿ: 2040ರ ವೇಳೆಗೆ ಪ್ರಾಸ್ಟೇಟ್​ ಕ್ಯಾನ್ಸರ್​ ಹೊರೆ ದುಪ್ಪಟ್ಟು: ಲ್ಯಾನ್ಸೆಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.