ETV Bharat / sports

ಹೈದರಾಬಾದ್-ಗುಜರಾತ್ IPL ಪಂದ್ಯ ಮಳೆಗೆ ಬಲಿ: ಪ್ಲೇ ಆಫ್‌ಗೇರಿದ 'ರನ್‌'ರೈಸರ್ಸ್‌ - Sunrisers Hyderabad

author img

By ANI

Published : May 17, 2024, 7:19 AM IST

IPL 2024: ಹೈದರಾಬಾದ್-ಗುಜರಾತ್ ನಡುವಿನ ಐಪಿಎಲ್ ಪಂದ್ಯ ನಿನ್ನೆ ಮಳೆಯಿಂದ ರದ್ದಾಯಿತು.

Sunrisers Hyderabad  Gujarat Titans  SRH Vs GT  IPL 2024
ಸನ್ ರೈಸರ್ಸ್ ಹೈದರಾಬಾದ್ (ETV Bharat)

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಬೇಕಿದ್ದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ IPL ಹಣಾಹಣಿ ಮಳೆಯಿಂದಾಗಿ ರದ್ದಾಗಿದೆ. ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಎಸ್‌ಆರ್‌ಎಚ್‌ ಪ್ಲೇಆಫ್‌ ಹಂತ ಪ್ರವೇಶಿಸಿತು. ಒಟ್ಟು 13 ಪಂದ್ಯಗಳನ್ನು ಆಡಿರುವ ಸನ್‌ರೈಸರ್ಸ್ 15 ಅಂಕಗಳನ್ನು ಗಳಿಸಿದ್ದು, 0.406 ರನ್ ರೇಟ್ ಹೊಂದಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದೀಗ ಪ್ಲೇಆಫ್‌ಗೆ ಅರ್ಹತೆ ಪಡೆದ ಮೂರನೇ ತಂಡವಾಗಿದೆ.

2016ರ ನಂತರ ಸನ್‌ರೈಸರ್ಸ್ ಮೊದಲ ಬಾರಿಗೆ ಪ್ಲೇಆಫ್‌ ಪ್ರವೇಶಿಸಿದೆ. 2016ರ ಸೀಸನ್​ನಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತ್ತು.

14 ಪಂದ್ಯಗಳನ್ನಾಡಿರುವ ಜಿಟಿ 10 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಂತರ ಈ ಬಾರಿ ಐಪಿಎಲ್​ನಿಂದ ಹೊರಹೋದ ಮೂರನೇ ತಂಡವಾಗಿದೆ. ಜಿಟಿ ಕೊನೆಯ ಎರಡು ಸೀಸನ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. 2022ರಲ್ಲಿ ಚಾಂಪಿಯನ್ ಹಾಗು 2023ರಲ್ಲಿ ರನ್ನರ್ ಅಪ್ ಆಗಿತ್ತು.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನು, ಪ್ರಸ್ತುತ 13 ಪಂದ್ಯಗಳನ್ನು ಆಡಿರುವ ಆರ್‌ಸಿಬಿ, 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. 14 ಅಂಕ ಗಳಿಸಿರುವ ಆರ್​ಸಿಬಿ ಮೂರನೇ ಶ್ರೇಯಾಂಕದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಪ್ಲೇಆಫ್‌ ಸ್ಪರ್ಧೆಯಲ್ಲಿ ಉಳಿಯಲು 0.387 ನೆಟ್​ ರನ್ ರೇಟ್ ಹೊಂದಿರುವ ಆರ್​ಸಿಬಿ, 0.528 ನೆಟ್​ ರನ್​ ರೇಟ್​ ಹೊಂದಿರುವ ಸಿಎಸ್​ಕೆ ವಿರುದ್ಧ ದೊಡ್ಡ ಗೆಲುವು ಸಾಧಿಸಬೇಕಿದೆ.

ಇದನ್ನೂ ಓದಿ: ಈರುಳ್ಳಿ, ಬೆಳ್ಳುಳ್ಳಿಯಲ್ಲಿ ಮೂಡಿಬಂದ ವಿರಾಟ್​ ಕೊಹ್ಲಿ: ಅಭಿಮಾನಿಯ ಸಾಹಸದ ವಿಡಿಯೋ ನೋಡಿ - Virat Kohli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.