ETV Bharat / entertainment

ಶಿವಣ್ಣನ 'ಐವಿ ರಿಟರ್ನ್ಸ್'ಗೆ ಲಕ್ಕಿ ಗೋಪಾಲ್ ನಿರ್ದೇಶನ; ಸಿನಿಮಾದಲ್ಲಿ ಹೆಸರಾಂತ ತಾಂತ್ರಿಕ ವರ್ಗ

author img

By ETV Bharat Karnataka Team

Published : Feb 5, 2024, 10:42 PM IST

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಐವಿ ರಿಟರ್ನ್ಸ್ ಚಿತ್ರ ಹೆಸರಾಂತ ತಾಂತ್ರಿಕ ಬಳಗದ ಕಾರಣದಿಂದ ಸುದ್ದಿಯಲ್ಲಿದೆ.

ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಕನ್ನಡ ಹಾಗೂ ಪರಭಾಷೆಯಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ನಟ. ಇದೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೊಸ ಚಿತ್ರದ ಹೊಸ ಅಪ್ಡೇಟ್ ಹೊರಬಿದ್ದಿದೆ.

ಕೆಲವು ಸಿನಿಮಾಗಳು ಸೆಟ್ಟೇರುವುದಕ್ಕೂ ಮುನ್ನವೇ ಭರ್ಜರಿ ಸೌಂಡು ಮಾಡುತ್ತವೆ. ಮೇಕಿಂಗ್‌, ಬಜೆಟ್‌, ಬೃಹತ್‌ ತಾರಾಗಣ, ನೂರಾರು ದಿನಗಳ ಚಿತ್ರೀಕರಣ, ಸ್ಟಾರ್‌ ಮಟ್ಟದ ತಾಂತ್ರಿಕ ಬಳಗ. ಹೀಗೆ ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಈಗ 'ಐವಿ ರಿಟರ್ನ್ಸ್' ಸಿನಿಮಾ ಹೆಸರಾಂತ ತಾಂತ್ರಿಕ ಬಳಗದ ಕಾರಣದಿಂದಲೇ ಸುದ್ದಿಯಲ್ಲಿದೆ.

ದೊಡ್ಮನೆ ಕುಡಿ ಲಕ್ಕಿ ಗೋಪಾಲ್ ಚೊಚ್ಚಲ ಪ್ರಯತ್ನದ 'ಐವಿ ರಿರ್ಟನ್ಸ್'ನಲ್ಲಿ ಹೆಸರಾಂತ ಟೆಕ್ನಿಷಿಯನ್‌ ಕೆಲಸ ಮಾಡಲಿದ್ದಾರೆ. ಹೀಗಾಗಿ ಸಿನಿಮಾ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರಲಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅಮ್ರಿಷ್ ಹಾಡುಗಳನ್ನು ಕಂಪೋಸ್‌ ಮಾಡಿದ್ದು, ರುಸ್ತುಂ, ಘೋಸ್ಟ್ ಚಿತ್ರದ ಖ್ಯಾತಿಯ ಮಹೇನ್ ಸಿಂಹ ಸಿನಿಮಾಟೋಗ್ರಫಿಯಲ್ಲಿ ಐವಿ ರಿರ್ಟನ್ಸ್ ಮೂಡಿಬರಲಿದೆ.

ಐವಿ ರಿಟರ್ನ್ಸ್
ಐವಿ ರಿಟರ್ನ್ಸ್

ಸೂರಿ ಅವರ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡಿರುವ ದೀಪು ಎಸ್.ಕುಮಾರ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ವಿದ್ಯಾಧರಣ್ ಕಥೆ, ಮಾಸ್ತಿ ಪಂಚಿಂಗ್ ಮಾತು, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ರಂಗು ತುಂಬಲಿದೆ. ವೇಣುಗೋಪಾಲ್ ಅಸೋಸಿಯೇಟ್ ಡೈರೆಕ್ಟರ್ ಆಗಿ, ರೇಣುಕಾ ಪ್ರಸಾದ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ, ಮೈಸೂರು ರಮೇಶ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

1989ರಲ್ಲಿ ಬಿಡುಗಡೆ ಆಗಿದ್ದ 'ಇನ್ಸ್‌ಪೆಕ್ಟರ್‌ ವಿಕ್ರಂ' ಶಿವರಾಜ್‌ಕುಮಾರ್‌ ಕರಿಯರ್‌ನಲ್ಲಿ ಅತ್ಯಂತ ವಿಶೇಷವಾಗಿತ್ತು. ಅವರು ತರಲೆ ಪೊಲೀಸ್‌ ಆಗಿ ನಟಿಸಿದ್ದ ಈ ಸಿನಿಮಾ ಆ ಕಾಲಕ್ಕೆ ಸೂಪರ್‌ ಡ್ಯೂಪರ್‌ ಹಿಟ್‌ ಆಗಿತ್ತು. ಈಗ ಮತ್ತೆ ಅಂತಹದ್ದೇ ಕಥೆಯೊಂದಿಗೆ 'ಐವಿ ರಿಟರ್ನ್ಸ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

34 ವರ್ಷಗಳ ಹಿಂದೆ ದಿನೇಶ್‌ ಬಾಬು 'ಇನ್ಸ್‌ಪೆಕ್ಟರ್‌ ವಿಕ್ರಂ' ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ‘ಐವಿ ರಿಟರ್ನ್ಸ್’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಸೋದರ ಸಂಬಂಧಿ ಲಕ್ಕಿ ಗೋಪಾಲ್‌ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಖಾಕಿ ಖದರ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈಲಾರಿ ಎಂ. ಹಣ ಹಾಕುತ್ತಿದ್ದಾರೆ. ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಶೀಘ್ರದಲ್ಲೇ ಇನ್ಸ್​ಪೆಕ್ಟರ್ ವಿಕ್ರಂ ರಿಪೋರ್ಟಿಂಗ್ ಶುರು ಮಾಡಲಿದ್ದಾರೆ. ಅಂದರೆ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಸಿನಿಮಾ ಪ್ರೇಮಿಗಳಿಗೆ ಬಂಪರ್ ಆಫರ್ ಕೊಟ್ಟ ರವಿಕೆ ಪ್ರಸಂಗ ಸಿನಿಮಾ ತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.