ETV Bharat / education-and-career

ಭಾರತದಲ್ಲಿ ಫ್ರಿಲಾನ್ಸಿಂಗ್​ ಉದ್ಯೋಗ ಆಯ್ಕೆಯಲ್ಲಿ ಮಹಿಳೆಯರ ಸಂಖ್ಯೆ ದುಪ್ಪಟ್ಟು

author img

By ETV Bharat Karnataka Team

Published : Mar 12, 2024, 12:22 PM IST

women opting for freelancing jobs in India doubled
women opting for freelancing jobs in India doubled

ಫ್ರಿಲಾನ್ಸಿಂಗ್​​ ಉದ್ಯೋಗ ಅನೇಕ ಪ್ರಯೋಜನವನ್ನು ಹೊಂದಿದ್ದು, ಮಹಿಳೆಯರು ತಮಗೆ ಇಚ್ಛೆಗೆ ಅನುಗುಣವಾದ ಕ್ಷೇತ್ರದಲ್ಲಿ ಅರೆಕಾಲಿಕವಾಗಿ ದುಡಿಯುವ ಸೌಲಭ್ಯವನ್ನು ಹೊಂದುತ್ತಾರೆ.

ನವದೆಹಲಿ: ಭಾರತದಲ್ಲಿ ಫ್ರಿಲಾನ್ಸಿಂಗ್​ ಆಯ್ಕೆ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಕೆಲವು ವರ್ಷಗಳಿಂದ ದುಪ್ಪಟ್ಟುಗೊಂಡಿದೆ. 2023ರಲ್ಲಿ ಶೇ.4ರಷ್ಟಿದ್ದ ಈ ಪ್ರಮಾಣ 2024ರಲ್ಲಿ ಶೇ.8ರಷ್ಟಾಗಿದೆ ಎಂದು ಹೊಸ ವರದಿ ತಿಳಿಸಿದೆ.

ಈ ಕುರಿತು ತಿಳಿಸಿರುವ ಪ್ರತಿಭೆಗಳ ನಿರ್ವಹಣಾ ಫ್ಲಾಟ್​ಫಾರಂ ಫಂಡ್​​ಇಟ್​​, ಈ ಬೆಳವಣಿಗೆಗೆ ಕಾರಣ ಗಿಗ್​ ಆರ್ಥಿಕತೆ ಅಥವಾ ಫ್ರಿಲ್ಯಾನ್ಸಿಂಗ್​​ ಉದ್ಯಮದಲ್ಲಿ ಭಾಗಿದಾರರಿಗೆ ನೀಡುತ್ತಿರುವ ಅನುಕೂಲವಾಗಿದೆ. ಫ್ರಿಲಾನ್ಸಿಂಗ್​​ ಮಹಿಳೆಯರಿಗೆ ಅನೇಕ ಪ್ರಯೋಜನ ಮತ್ತು ಸ್ವಾತಂತ್ರ್ಯವನ್ನು ನೀಡಿದೆ. ಇದರಿಂದ ಮಹಿಳೆಯರು ತಮ್ಮ ಜೀವನದ ಯಾವುದೇ ಹಂತದಲ್ಲಿ ತಮ್ಮ ಆಸಕ್ತಿಗೆ ಅನುಗುಣವಾದ ವೃತ್ತಿಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿ ಮುಂದುವರೆಯಬಹುದಾಗಿದೆ. ಇದರಿಂದ ಆರ್ಥಿಕವಾಗಿಯೂ ಸಬಲರಾಗಬಹುದು. ಅಷ್ಟೇ ಅಲ್ಲದೇ, ಕಳೆದ ವರ್ಷದ ಫೆಬ್ರವರಿಗೆ ಹೋಲಿಕೆ ಮಾಡಿದಾಗ ಈ ವರ್ಷದ ಫೆಬ್ರವರಿಯಲ್ಲಿ ಉದ್ಯೋಗದಲ್ಲಿ ಮಹಿಳಾ ಅಭ್ಯರ್ಥಿಗಳು ಶೇ 56ರಷ್ಟು ಹೆಚ್ಚಳಗೊಂಡಿದ್ದಾರೆ.

ಸಂಸ್ಥೆಯ ಯಶಸ್ಸಿನಲ್ಲಿ ಮಹಿಳಾ ಉದ್ಯೋಗಿಗಳು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತಾರೆ. ಅವರು ಕಠಿಣ ಶ್ರಮಜೀವಿಗಳು ಮತ್ತು ಕ್ರಿಯಾತ್ಮಕತೆ ಹೊಂದಿರುವವರು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಫಂಡ್​ಇಟ್​​ನ ಶೇಖರ್​​ ಗರಿಸ ತಿಳಿಸಿದ್ದಾರೆ.

ಮಹಿಳಾ ನಾಯಕರು ರೂಪಾಂತರದ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಾರೆ. ತಂಡದಲ್ಲಿ ಹೆಚ್ಚಿನ ಮಹಿಳೆಯರನ್ನು ಹೊಂದುವುದರಿಂದ ಕೆಲಸದ ಸ್ಥಳದಲ್ಲಿ ವೈವಿಧ್ಯತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.

ಐಟಿ/ ಕಂಪ್ಯೂಟರ್​ ಸಾಫ್ಟ್​ವೇರ್​​ ವಲಯಗಳು ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ನೀಡುತ್ತಿದ್ದು, ಇಲ್ಲಿ ಮಹಿಳೆ ಶೇ.36ರಷ್ಟು ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಮಹಿಳೆಯರಿಗೆ ಅವಕಾಶ ನೀಡುವಲ್ಲಿ ನೇಮಕಾತಿ, ಸಿಬ್ಬಂದಿ, ಆರ್​ಪಿಒ ವಲಯಗಳು ಎರಡನೇ ಸ್ಥಾನದಲ್ಲಿದ್ದು, ಇಲ್ಲಿನ ಕೆಲಸದ ಸ್ಥಳದಲ್ಲಿ ಮಹಿಳೆಯರು ಶೇ.24ರಷ್ಟು ಪ್ರಮಾಣದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಬ್ಯಾಂಕಿಂಗ್​​, ಹಣಕಾಸು, ಸೇವೆ ಮತ್ತು ವಿಮೆ ವಲಯವಿದ್ದು, ಇಲ್ಲಿ ಶೇ.23ರಷ್ಟು ಪ್ರಮಾಣದಲ್ಲಿದ್ದಾರೆ.

ದೆಹಲಿ-ಎನ್​ಸಿಆರ್​, ಮುಂಬೈ, ಬೆಂಗಳೂರು, ಹೈದರಾಬಾದ್​​, ಚೆನ್ನೈ, ಪುಣೆಯಂತಹ ಮೆಟ್ರೋ ನಗರದಲ್ಲಿ ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಕಾರಾತ್ಮಕ ಮತ್ತು ಸ್ಥಿರವಾಗಿದೆ.

ಜೊತೆಗೆ ಮಹಿಳೆಯರಿಗೆ ನಾಯಕತ್ವದ ಅವಕಾಶಗಳಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. ಈ ವರ್ಷ ಫೆಬ್ರವರಿಯಲ್ಲಿ ಮಹಿಳಾ ನಾಯಕತ್ವದ ಹುದ್ದೆಗಳಲ್ಲಿ ಶೇ.9ರಷ್ಟು ಗುರಿಯನ್ನು ಕಾಣಬಹುದಾಗಿದೆ ಎಂದು ವರದಿ ತಿಳಿಸಿದೆ. (ಐಎಎನ್​​ಎಸ್​)

ಇದನ್ನೂ ಓದಿ: 2030ರ ವೇಳೆಗೆ ವಿಶ್ವದಾದ್ಯಂತ 5 ಮಿಲಿಯನ್​ ಮಹಿಳೆಯರು, ಯುವತಿಯರ ಸಬಲೀಕರಣದ ಗುರಿ: ವುಮೆನ್​ ಇನ್​ ಟೆಕ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.