ETV Bharat / bharat

ಬಾಲ್ಕನಿಯಿಂದ ಬೀಳುತ್ತಿದ್ದ ಮಗು ಕಾಪಾಡಿದ ಬಳಿಕ ಟ್ರೋಲ್​ ಆದ ತಾಯಿ, ಆತ್ಮಹತ್ಯೆಗೆ ಶರಣು! - Child Mother Suicide

author img

By ETV Bharat Karnataka Team

Published : May 20, 2024, 5:16 PM IST

Updated : May 20, 2024, 7:50 PM IST

ಕೆಲ ದಿನಗಳ ಹಿಂದೆ ತಮಿಳುನಾಡಿನ ಚೆನ್ನೈ ಅಪಾರ್ಟ್‌ಮೆಂಟ್ ಬಾಲ್ಕನಿಯಿಂದ ಮಗುವೊಂದು ಟೆರಸ್​ ಮೇಲೆ ಬಿದ್ದಿತ್ತು. ಆಗ ಕೆಲವರು ಆ ಮಗುವನ್ನು ಸ್ಥಳೀಯರು ಕಾಪಾಡಿದ್ದರು. ಈಗ ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

MOTHER OF CHILD  CHENNAI APARTMENT  WOMAN SUICIDE IN COIMBATORE
ಬಾಲ್ಕನಿಯಿಂದ ಬೀಳುತ್ತಿರುವಾ ರಕ್ಷಿಸಿದ ಮಗುವಿನ ತಾಯಿ ಆತ್ಮಹತ್ಯೆ (ಕೃಪೆ: ETV Bharat Tamilnadu)

ಕೊಯಮತ್ತೂರು (ತಮಿಳುನಾಡು): ಕೆಲ ದಿನಗಳ ಹಿಂದೆ ಚೆನ್ನೈನ ತಿರುಮುಲ್ಲೈವಾಯಲ್‌ನ ಅಪಾರ್ಟ್‌ಮೆಂಟ್‌ನಲ್ಲಿ ಕೆಳಗೆ ಬೀಳುತ್ತಿದ್ದ ಮಗುವನ್ನು ಜೀವಂತವಾಗಿ ರಕ್ಷಿಸಲಾಗಿತ್ತು. ಈಗ ಆ ಮಗುವಿನ ತಾಯಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರು ಜಿಲ್ಲೆ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೊಯಮತ್ತೂರಿನ ಕರಮಡೈ ಬೆಳ್ಳತ್ತಿಯ ವಾಸುದೇವನ್ ಅವರ ಎರಡನೇ ಮಗಳು ರಮ್ಯಾ ಅವರು ತಮ್ಮ ಪತಿ ವೆಂಕಟೇಶ್ ಮತ್ತು ಇಬ್ಬರು ಮಕ್ಕಳೊಂದಿಗೆ ಚೆನ್ನೈನ ತಿರುಮುಲ್ಲೈವಾಯಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಏಪ್ರಿಲ್ 28 ರಂದು, ಅವರ 7 ತಿಂಗಳ ಮಗು ಫ್ಲಾಟ್‌ನ ಬಾಲ್ಕನಿಯಿಂದ ಕೆಳಗೆ ಬೀಳುತ್ತಿತ್ತು. ಸ್ಥಳದ ನಿವಾಸಿಗಳು ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಬಳಿಕ ಮಾಳಿಗೆಯಿಂದ ಬೀಳುತ್ತಿದ್ದ ಮಗುವನ್ನು ಸ್ಥಳೀಯರು ತಮ್ಮ ಪ್ರಾಣವನ್ನು ಲೆಕ್ಕಿಸದೇ ರಕ್ಷಿಸಿದರು. ಇದರ ಸನ್ನಿವೇಶಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿತ್ತು.

ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಗುವನ್ನು ಸರಿಯಾಗಿ ನೋಡಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂಬಂತೆ ತಾಯಿ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇಂತಂಹ ಟ್ರೋಲ್​ಗಳಿಂದಾಗಿ ಮಗುವಿನ ತಾಯಿ ರಮ್ಯಾ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಕೆಲ ವಾರಗಳ ಹಿಂದೆ ರಮ್ಯಾ ಪತಿ ಹಾಗೂ ಮಗುವಿನೊಂದಿಗೆ ಕೊಯಮತ್ತೂರಿನ ತವರು ಕಾರಾಮಡೈಗೆ ಬಂದಿದ್ದರು. ನಿನ್ನೆ ರಮ್ಯಾ ಅವರ ತಾಯಿ, ತಂದೆ ಮತ್ತು ಕುಟುಂಬದವರು ಕಾರ್ಯಕ್ರಮಕ್ಕೆಂದು ಹೊರಗೆ ಹೋದಾಗ ಮನೆಯಲ್ಲಿ ಒಬ್ಬಳೇ ಇದ್ದ ರಮ್ಯಾ ಹಠಾತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಂತರ ಹೊರಗೆ ಹೋಗಿದ್ದ ಪೋಷಕರು ಮನೆಗೆ ಹಿಂತಿರುಗಿದಾಗ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಆದರೆ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದಾಗ ಆಕೆಯನ್ನು ಪರೀಕ್ಷಿಸಿದ ವೈದ್ಯರು ರಮ್ಯಾ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಬಗ್ಗೆ ಮಾಹಿತಿ ಪಡೆದ ಕರಮಡೈ ಪೊಲೀಸ್ ಠಾಣೆಯ ಪೊಲೀಸರು ರಮ್ಯಾ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಚೆನ್ನೈನಲ್ಲಿ ಮಗು ಬಿದ್ದ ನಂತರ ಮಗುವಿನ ತಾಯಿ ರಮ್ಯಾ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲ್ಲರಲ್ಲೂ ಆತಂಕಕ್ಕೀಡುಮಾಡಿದೆ.

ಓದಿ: ಕವರ್ಧಾದಲ್ಲಿ ಭೀಕರ ರಸ್ತೆ ಅಪಘಾತ; 17ಕ್ಕೂ ಹೆಚ್ಚು ಆದಿವಾಸಿಗಳು ಸಾವು - Accident In Kawardha

Last Updated : May 20, 2024, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.