ETV Bharat / health

ಎಚ್​ಐವಿ ಸೋಂಕಿತ ತಾಯಂದಿರು ಮಗುವಿಗೆ ನೀಡಬಹುದು ಸ್ತನ್ಯಪಾನ; ಅಮೆರಿಕ ಮಕ್ಕಳ ತಜ್ಞರ ಗುಂಪಿನ ಶಿಫಾರಸು - breastfeeding for those with HIV

author img

By PTI

Published : May 20, 2024, 5:02 PM IST

ಸ್ತನ್ಯ ಪಾನವನ್ನು ತಪ್ಪಿಸುವ ಏಕೈಕ ಮಾರ್ಗವೂ ವೈರಸ್​ ಹರಡುವುದನ್ನು ತಪ್ಪಿಸುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ. ಅಮೆರಿಕದಲ್ಲಿ ಪ್ರತಿವರ್ಷ 5 ಸಾವಿರ ಎಚ್​ಐವಿ ಸೋಂಕಿತರು ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎಂಬ ಅಂಶವೂ ವರದಿಯಲ್ಲಿ ಬಹಿರಂಗವಾಗಿದೆ.

us-pediatricians-group-reverses-decades-old-ban-on-breastfeeding-for-those-with-hiv
us-pediatricians-group-reverses-decades-old-ban-on-breastfeeding-for-those-with-hiv (Getty Images)

ವಾಷಿಂಗ್ಟನ್​: ಐಎಚ್​ಐವಿ ಪೀಡಿತ ತಾಯಂದಿರು ಏಡ್ಸ್​ಗೆ ಕಾರಣವಾಗುವ ವೈರಸ್​ ಹತ್ತಿಕ್ಕುವ ಪರಿಣಾಮಕಾರಿ ಔಷಧಗಳನ್ನು ಪಡೆಯುತ್ತಿರುವ ಕಾಲ ಮಗುವಿಗೆ ಹಾಲೂಣಿಸಬಹುದು ಎಂದು ಅಮೆರಿಕದ ಮಕ್ಕಳ ತಜ್ಞರ ಪ್ರಮುಖ ಗುಂಪು ಹೊಸ ನಿಯಮ ಬದಲಾವಣೆ ಮೂಲಕ ಜಾರಿಗೆ ತಂದಿದೆ.

ಈ ಹಿಂದೆ 1980ರಲ್ಲಿ ಎಚ್​ಐವಿ ಸೋಂಕು ಆರಂಭವಾದ ಸಮಯದಲ್ಲಿ ಸೋಂಕಿತ ತಾಯಂದಿರು ಹಾಲೂಣಿಸದಂತೆ ಅಮೆರಿಕನ್​ ಅಕಾಡೆಮಿ ಆಫ್​ ಪಿಡಿಯಾಡ್ರಿಕ್ಸ್​​ ಶಿಫಾರಸು ಮಾಡಿತ್ತು. ಇದೀಗ ಈ ಶಿಫಾರಸು ಹಿಂಪಡೆಯಲಾಗಿದೆ. ಸೋಂಕಿಗೆ ಸೂಚಿಸಲಾದ ಔಷಧ ಸೇವನೆಯಿಂದ ಸೋಂಕು ಸ್ತನ್ಯಪಾನದ ಮೂಲಕ ಪ್ರಸರಣವಾಗುವ ಸಾಧ್ಯತೆ ಶೇ 1ರಷ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದ, ಪಿಡಿಯಾಟ್ರಿಕ್​ ಎಚ್​ಐವಿ ತಜ್ಞರಾದ ಡಾ ಲಿಸಾ ಅಭೌಗಿ ತಿಳಿಸಿದ್ದಾರೆ. ಔಷಧಗಳು ಇದೀಗ ಉತ್ತಮವಾಗಿವೆ. ಇದು ತಾಯಂದಿರು ಮತ್ತು ಮಗುವಿಗೆ ಪ್ರಯೋಜನಕಾರಿಯಾಗಿದೆ.

ಆ್ಯಂಟಿರೆಟ್ರೊವೈರಲ್​ ಥೆರಪಿ ಔಷಧವೂ ಸ್ತನ್ಯಪಾನದ ಮೂಲಕ ಎಚ್​ಐವಿ ಪ್ರಸರಣದ ಎಲ್ಲ ಅಪಾಯವನ್ನು ತೆಗೆದು ಹಾಕುವುದಿಲ್ಲ. ಸ್ತನ್ಯ ಪಾನವನ್ನು ತಪ್ಪಿಸುವ ಏಕೈಕ ಮಾರ್ಗವೂ ವೈರಸ್​ ಹರಡುವುದನ್ನು ತಪ್ಪಿಸುವುದಿಲ್ಲ. ಜೊತೆಗೆ ಪೋಷಕರು ಮಗು ಜನಿಸಿದ ಮೊದಲ ಆರು ತಿಂಗಳು ಸ್ತನ್ಯಪಾನ ನಡೆಸಬೇಕು. ಸ್ತನ್ಯಪಾನ ಅಥವಾ ಫಾರ್ಮೂಲಾಗೆ ಎರಡನ್ನು ಆಗ್ಗಾಗ್ಗೆ ಬಳಕೆ ಮಾಡುವುದರಿಂದ ಇದು ಎಚ್​ಐವಿ ಸೋಂಕಿನ ಅಪಾಯ ಹೆಚ್ಚಿಸುತ್ತದೆ.

ಅಮೆರಿಕದಲ್ಲಿ ಪ್ರತಿವರ್ಷ 5 ಸಾವಿರ ಎಚ್​ಐವಿ ಸೋಂಕಿತರು ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಅವರೆಲ್ಲರೂ ಕಡಿಮೆ ಮಟ್ಟದಲ್ಲಿ ಸೋಂಕು ಹತ್ತಿಕ್ಕುವ ಔಷಧಗಳನ್ನು ಅತಿ ಕಡಿಮೆ ಮಟ್ಟದಲ್ಲಿ ಸೇವಿಸುತ್ತಿದ್ದಾರೆ ಎಂದರು. ಔಷಧಗಳ ದಶಕಗಳ ಹಿಂದೆ ವ್ಯಾಪಾಕವಾಗಿ ಲಭ್ಯವಾಗುವ ಮುನ್ನ ಶೇ 30ರಷ್ಟು ಎಚ್​ಐವಿ ಸೋಂಕು ಸ್ತನಪಾನದ ಮೂಲಕ ಮಕ್ಕಳಿಗೆ ಪ್ರಸರಣವಾಗುತ್ತಿತ್ತು ಎಂದು ಎಲಿಜಬೆತ್​ ಗ್ರಾಸೆರ್​ ಪಿಡಿಯಾಟ್ರಿಕ್ಸ್​ ಏಡ್ಸ್​ ಫೌಂಡೇಷನ್​ನ ಸಲಹೆಗಾರ್ತಿ ಡಾ ಲೈನ್ನೆ ಮೊಫೆನ್ಸೊನ್​ ತಿಳಿಸಿದ್ದಾರೆ.

1990ಕ್ಕೆ ಮುಂಚಿತ ಅವಧಿಯಲ್ಲಿ ಅಮೆರಿಕದಲ್ಲಿ ಪ್ರತಿ ವರ್ಷ 2000 ಶಿಶುಗಳು ಎಚ್​ಐವಿ ಸೋಂಕಿಗೆ ಒಳಗಾಗುತ್ತಿದ್ದವು. ಇದೀಗ ಈ ಸಂಖ್ಯೆ 30ಕ್ಕೆ ಇಳಿದಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದವೂ ಎಚ್​ಐವು ಸೊಂಕಿತ ತಾಯಂದಿರ ಸ್ತನ್ಯಪಾನದ ವಿರುದ್ಧದ ಶಿಫಾರಸಿನ ವಿರುದ್ಧದ ನಿಲುವಿನ ವರ್ಷದ ಬಳಿಕ ಎಎಪಿ ನಿಯಮ ಜಾರಿಗೆ ಬಂದಿದೆ. ಈ ಮಾರ್ಗಸೂಚಿಯಲ್ಲಿ ಸೋಂಕಿತರ ಆಯ್ಕೆಯಲ್ಲಿ ನಿರಂತರವಾಗಿ ವೈರಲ್​ ಹತ್ತಿಕ್ಕುವ ಸಮಾಲೋಚನೆ ನಡೆಸಲಾಗುವುದು. ಇದರಲ್ಲಿ ಒಂದು ವೇಳೆ ಎಚ್​ಐವಿ ಸೋಂಕಿತ ತಾಯಿ ಸ್ತನ್ಯಪಾನಕ್ಕೆ ಕೋರಿದಲ್ಲಿ ಮಗುವಿನ ರಕ್ಷಣೆ ಸೇವಾ ಏಜೆನ್ಸಿಗಳಿಗೆ ಆರೋಗ್ಯ ಕಾರ್ಯಕರ್ತರು ಕೂಡ ಎಚ್ಚರಿಕೆ ನೀಡುವಂತಿಲ್ಲ ಎಂದು ಒತ್ತಿ ಹೇಳಿದೆ.

ಇದರ ಮುಖ್ಯ ಗುರಿ ಸೋಂಕಿತ ರೋಗಿಗಳ ಆಲಿಸುವುದಾಗಿದೆ. ಹೊರತು ಅವರನ್ನು ದೂಷಿಸುವ ಅಥವಾ ಅವಮಾನಿಸುವುದಾಗಿಲ್ಲ ಎಂದು ಡಾ ಲೈನ್ನೆ ಯೆ ತಿಳಿಸಿದ್ದಾರೆ.

ಯಾವುದೇ ಅನಾರೋಗ್ಯದ ವಿರುದ್ದ ಮತ್ತು ಸ್ಥೂಲಕಾಯ, ಟೈಪ್​ 2 ಮಧುಮೇಹದಂತಹ ವಿರುದ್ಧ ಮಗುವನ್ನು ರಕ್ಷಣೆ ಮಾಡುವಲ್ಲಿ ಮತ್ತು ಮಗುವಿಗೆ ಬೇಕಾದ ಅಗತ್ಯ ಪೋಷಕಾಂಶಗಳು ಸ್ತನ್ಯಪಾನದಲ್ಲಿ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ 2010ರಿಂದ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಎಚ್​ಐವಿ ಸೋಂಕಿತ ಸ್ತನ್ಯಪಾನ ನಡೆಸುವ ತಾಯಂದಿರಿಗೆ ಆ್ಯಂಟಿವೈರಲ್​ ಥೆರಪಿ ಲಭ್ಯತೆ ನೀಡಿದೆ.

ಇದನ್ನೂ ಓದಿ: ಕೋವಾಕ್ಸಿನ್​ ಕುರಿತು ತಪ್ಪು ದಾರಿಗೆ ಎಳೆಯುವ ಮಾಹಿತಿ; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಐಸಿಎಂಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.