ETV Bharat / bharat

ಎಟ್ನಾದ ಜ್ವಾಲಾಮುಖಿ ಪರ್ವತ ಏರಿ ತ್ರಿವರ್ಣ ಧ್ವಜ ಹಾರಿಸಿದ ರಾಜಸ್ಥಾನದ ಧೋಲಿ ಮೀನಾ

author img

By ETV Bharat Karnataka Team

Published : Feb 19, 2024, 11:26 AM IST

Updated : Feb 19, 2024, 12:38 PM IST

rajasthan-daughter-and-social-media-influencer-dholi-meena-climbed-mount-etna-in-europe
rajasthan-daughter-and-social-media-influencer-dholi-meena-climbed-mount-etna-in-europe

Dholi Meena Climbed Mount Etna, ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಯಾಗಿರುವ ಎಟ್ನಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಧೋಲಿ. ಈ ಮೂಲಕ ಮೀನಾ ವಿಶೇಷ ಸಾಧನೆ ಮಾಡಿದ್ದಾರೆ.

ಜಯಪುರ(ರಾಜಸ್ಥಾನ): ಯುರೋಪ್‌ನ ಅತ್ಯಂತ ಅಪಾಯಕಾರಿ ಮತ್ತು ಅತಿ ಎತ್ತರದ ಜ್ವಾಲಾಮುಖಿಯಾದ ಎಟ್ನಾ ಪರ್ವತದ ಮೇಲೆ ಧೋಲಿ ಮೀನಾ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ, ಜೊತೆಗಿದ್ದ ಅನೇಕ ವಿದೇಶಿಗರು ಕೂಡ ಜೈ ಶ್ರೀರಾಮ್​ ಘೋಷಣೆ ಕೂಗಿದ್ದಾರೆ. ರಾಜಸ್ಥಾನದ ಮೂಲಕ ಸೋಷಿಯಲ್​ ಮೀಡಿಯಾ ಇನ್ಸ್​ಫ್ಲುಯೆನ್ಸರ್​​​ ಧೋಲಿ ಮೀನಾ ವಿದೇಶದಲ್ಲಿ ತಮ್ಮ ಕೆಲಸದಿಂದ ಸದ್ದು ಮಾಡಿದ್ದಾರೆ. ಇನ್ನು ಪರ್ವತ ಏರಿದ್ದ ಅವರು ದೇಸಿ ಉಡುಗೆಯಲ್ಲಿ ಕಂಗೊಳಿಸಿದ್ದು, ದೇಸಿ ಹುಡುಗಿ ಎಂದೇ ಗುರುತಿಸಿಕೊಂಡಿದ್ದಾರೆ.

ಯುರೋಪ್​ ಮತ್ತು ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಯಾಗಿರುವ ಎಟ್ನಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಧೋಲಿ ಎಂದು ಅವರ ಮಾವ ದೌಸ್​ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ವಿದೇಶಿಗರ ಜೊತೆಗಿನ ಈ ಶೃಂಗಸಭೆಯಲ್ಲಿ ಧೋಲಿ ಭಾರತ್​​ ಮಾತಾ ಕೀ ಜೈ ಮತ್ತು ಶೈ ಶ್ರೀ ರಾಮ್​​ ಘೋಷಣೆ ಕೂಗಿದ್ದಾರೆ. ದೌಸಾ ಅವರ ಪ್ರಸಿದ್ಧ ಹಳದಿ ಲುಗ್ಡಿ ಮತ್ತು ಲೆಹೆಂಗಾ ಧರಿಸಿ ಪರ್ವತ ಏರಿರುವುದು ವಿಶೇಷ.

ವಿದೇಶಿಗರೊಂದಿಗೆ ಪರ್ವತ ಏರಿದ ಧೋಲಿ
ವಿದೇಶಿಗರೊಂದಿಗೆ ಪರ್ವತ ಏರಿದ ಧೋಲಿ

​ ಎಟ್ನಾ ಪರ್ವತ ಹತ್ತಿದ ಮೊದಲ ಬುಡಕಟ್ಟು ಭಾರತೀಯ ಮಹಿಳೆ: ಎಟ್ನಾ ಪರ್ವತವನ್ನು ತಲುಪಿದ ಮೊದಲ ಭಾರತೀಯ ಬುಡಕಟ್ಟು ಮಹಿಳೆ ತಾನಾಗಿರುವುದಾಗಿ ಧೋಲಿ ಮೀನಾ ಹೇಳಿಕೊಂಡಿದ್ದಾರೆ. ಈ ಪರ್ವತಾರೋಹಣಕ್ಕಾಗಿ ಹಲವು ತಿಂಗಳ ಕಾಲ ಫಿಟ್​ನೆಸ್​ ಕಾಪಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪರ್ವತಾರೋಹಣ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಮಹಿಳೆಯರು ತಮ್ಮನ್ನು ತಾವು ದುರ್ಬಲರು ಎಂದು ಪರಿಗಣಿಸಬಾರದು. ದೃಢ ಮನಸು ಹೊಂದಿದ್ದರೆ, ಏನು ಬೇಕಾದರೂ ಸಾಧಿಸಬಹುದು. ಈ ಸಂದರ್ಭದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳುತ್ತೇನೆ. ಇಟಲಿಯಂತಹ ದೇಶದಲ್ಲಿ ಭಾರತದ ಸಾಮಾನ್ಯ ಬುಡಕಟ್ಟು ಮಹಿಳೆ ಕೂಡ ತ್ರಿವರ್ಣ ಧ್ವಜ ಹಾರಿಸಿದ್ದಾಳೆ ಎಂಬುದು ಹೆಮ್ಮೆಯ ಸಂಗತಿ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದ್ರನ ಮೇಲ್ಮೈನಂತಹ ವಾತಾವರಣ: ಎಟ್ನಾ ಪರ್ವತ ಪ್ರದೇಶದಲ್ಲಿ ಚಂದ್ರನಲ್ಲಿರುವಂತಹ ಮೇಲ್ಮೈ ಹೋಲುವ ರಚನೆ ಇರುವ ಹಿನ್ನೆಲೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಇದು ಯುರೋಪ್​ನ ಇಟಲಿಯ ಸಿಸಿಪಿ ಪ್ರಾಂತ್ಯದ ಕೆಟಾನಿಯಾ ನಗರದಲ್ಲಿ ಮೆಡಿಟರೇನಿಯನ್ ಸಮುದ್ರಕ್ಕಿಂತ 11,000 ಅಡಿಗಿಂತ ಹೆಚ್ಚು ಎತ್ತರದಲ್ಲಿದೆ. ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದು ಎಂಬುದು ಕೂಡಾ ವಿಶೇಷ. ಜ್ವಾಲಾಮುಖಿ ಯಾವಾಗ ಬೇಕಾದರೂ ಸ್ಫೋಟಿಸಬಹುದಾಗಿದೆ. ಕಳೆದ ವರ್ಷ ಮೇ 2023 ರಲ್ಲಿ, ಬೃಹತ್ ಲಾವಾ ಸ್ಫೋಟ ಸಂಭವಿಸಿತ್ತು. ಇದರಿಂದಾಗಿ ವಿಮಾನಗಳನ್ನು ರದ್ದುಗೊಳಿಸಲಾಯಿತು ಮತ್ತು ಇಡೀ ನಗರವನ್ನು ಮುಚ್ಚಬೇಕಾಯಿತು. ಇತ್ತೀಚೆಗೆ ಅಂದರೆ ಎರಡು ತಿಂಗಳ ಹಿಂದೆ ಇಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು.

ಇದನ್ನೂ ಓದಿ: ಎರಡು ಸಾವಿರ ಕಂಬಗಳ ’ಓಂ‘ ಆಕಾರದ ಶಿವ ದೇವಾಲಯ ಇಂದು ಉದ್ಘಾಟನೆ; ಏನೆಲ್ಲ ವಿಶೇಷತೆ?

Last Updated :Feb 19, 2024, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.