ETV Bharat / bharat

ಪೈಲಟ್ ನಿರ್ಲಕ್ಷ್ಯ: ಪ್ಯಾರಾಗ್ಲೈಡಿಂಗ್ ವೇಳೆ ಮೇಲಿಂದ ಬಿದ್ದ ಹೈದರಾಬಾದ್​ ಮಹಿಳೆ ಸಾವು

author img

By ETV Bharat Karnataka Team

Published : Feb 12, 2024, 7:56 AM IST

Kullu Female tourist dies  Tourist dies during paragliding  Himachal Tourist died  ಪ್ಯಾರಾಗ್ಲೈಡರ್ ಪೈಲಟ್​ ಹೈದರಾಬಾದ್​ ಮಹಿಳೆ ಸಾವು
ಪೈಲಟ್ ನಿರ್ಲಕ್ಷ್ಯ: ಪ್ಯಾರಾಗ್ಲೈಡಿಂಗ್ ವೇಳೆ ಮೇಲಿಂದ ಬಿದ್ದ ಹೈದರಾಬಾದ್​ ಮಹಿಳೆ ಸಾವು

Paragliding In Kullu: ಹಿಮಾಚಲ ಪ್ರದೇಶದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಕುಲ್ಲುವಿನ ದೋಭಿಯಲ್ಲಿ ಪ್ಯಾರಾಗ್ಲೈಡರ್ ಪೈಲಟ್​ನ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಕುಲ್ಲು , ಹಿಮಾಚಲಪ್ರದೇಶ: ಹೈದರಾಬಾದ್‌ನ ಪ್ರವಾಸಿಗರೊಬ್ಬರು ಪ್ಯಾರಾಗ್ಲೈಡಿಂಗ್ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಜಿಲ್ಲೆಯ ದೋಭಿ ಎಂಬಲ್ಲಿ ಪ್ಯಾರಾಗ್ಲೈಡಿಂಗ್ ಸೈಟ್‌ನಲ್ಲಿ ಸಂಭವಿಸಿದೆ. ಪ್ಯಾರಾಗ್ಲೈಡರ್‌ನ ಪೈಲಟ್ ಪ್ರವಾಸಿ ಮಹಿಳೆಗೆ ಸರಿಯಾಗಿ ಬೆಲ್ಟ್ ಹಾಕಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕಾರಣಕ್ಕಾಗಿ ಮಹಿಳಾ ಪ್ರವಾಸಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಎತ್ತರದಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ದೋಭಿ ಪ್ಯಾರಾಗ್ಲೈಡಿಂಗ್ ಅಪಘಾತ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಮುಂದಿನ ಆದೇಶದವರೆಗೆ ಪ್ಯಾರಾಗ್ಲೈಡಿಂಗ್ ಅನ್ನು ನಿಷೇಧಿಸಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಸುನೈನಾ ಶರ್ಮಾ ಮಾತನಾಡಿ, ಪೈಲಟ್ ನೋಂದಣಿ ಮತ್ತು ಉಪಕರಣಗಳನ್ನು ಸಹ ಅನುಮೋದಿಸಲಾಗಿದೆ. ಮ್ಯಾಜಿಸ್ಟ್ರೇಟ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಮುಂದಿನ ಆದೇಶದವರೆಗೆ ದೋಭಿಯಲ್ಲಿ ಪ್ಯಾರಾಗ್ಲೈಡಿಂಗ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ಸುನೈನಾ ಶರ್ಮಾ ಹೇಳಿದ್ದಾರೆ. ಹೈದರಾಬಾದ್‌ನಿಂದ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ 26 ವರ್ಷದ ನವ್ಯಾ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಪೈಲಟ್ ವಿರುದ್ಧ ಐಪಿಸಿ ಸೆಕ್ಷನ್ 336 ಮತ್ತು 334 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಪೈಲಟ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ತಂಡವೂ ತನಿಖೆ ಆರಂಭಿಸಿದ್ದು, ಧಾಲ್ಪುರದಲ್ಲಿ ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಕುಲ್ಲು ಎಸ್ಪಿ ಡಾ.ಗೋಕುಲ್ ಚಂದ್ರನ್ ಕಾರ್ತಿಕೇಯ ತಿಳಿಸಿದ್ದಾರೆ.

ಈ ಮೊದಲು ಕೂಡ ದೋಭಿ ಪ್ಯಾರಾಗ್ಲೈಡಿಂಗ್ ಸೈಟ್‌ನಲ್ಲಿ ಅಪಘಾತಗಳು ಸಂಭವಿಸಿವೆ ಎಂಬುದನ್ನು ಗಮನಿಸಬೇಕು. ಇಲ್ಲಿ ನಿರಂತರ ಗಸ್ತು ನಡೆಸಬೇಕು ಎಂದು ಸ್ಥಳೀಯರು ಹಲವು ಬಾರಿ ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆಗೆ ಒತ್ತಾಯಿಸಿದ್ದಾರೆ. ಏಕೆಂದರೆ ಅನೇಕ ಬಾರಿ ಪ್ಯಾರಾಗ್ಲೈಡರ್‌ಗಳು ಪರವಾನಗಿ ಇಲ್ಲದೆ ಇಲ್ಲಿ ಹಾರಾಟ ನಡೆಸುತ್ತಿದ್ದು, ಇದರಿಂದ ಪ್ರವಾಸಿಗರ ಪ್ರಾಣಕ್ಕೆ ಆಪತ್ತು ಸಂಭವಿಸುವ ಅಪಾಯವಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಓದಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ: ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.