2 ತಾಸು ಮೊಸಳೆಯೊಂದಿಗೆ ಯುವಕನ ಹೋರಾಟ.. ಕೊನೆಗೆ ಆಗಿದ್ದೇನು? ಭಯಾನಕ ವಿಡಿಯೋ

By

Published : Aug 7, 2022, 8:16 PM IST

thumbnail

ವಡೋದರಾ (ಗುಜರಾತ್​): ಇಲ್ಲಿನ ವಿಶ್ವಾಮಿತ್ರಿ ನದಿಯು ಮೊಸಳೆಗಳ ವಾಸಸ್ಥಾನ. ನಗರದಲ್ಲಿ ಹಲವು ಬಾರಿ ಮೊಸಳೆಗಳು ಜನರ ಮನೆಗಳಿಗೂ ದಾಳಿ ಇಟ್ಟಿವೆ. ವಡೋದರಾ ಬಳಿಯ ಪದ್ರಾ ಗ್ರಾಮದ ಯುವಕನೊಬ್ಬ ಧಧಾರ್ ನದಿಯ ದಡದಲ್ಲಿ ಕುಳಿತಿದ್ದನು. ನಂತರ ಮೊಸಳೆ ಈತನ ಮೇಲೆ ದಾಳಿ ಮಾಡಿ ನದಿಗೆ ಎಳೆದೊಯ್ದಿದೆ. ನಂತರ ಎರಡು ಗಂಟೆಗಳ ಕಾಲ ಯುವಕನ ದೇಹವನ್ನು ಕಚ್ಚಿ ಹಿಡಿದಿದೆ. ಇಷ್ಟೇ ಅಲ್ಲ, ಆ ಯುವಕನ ದೇಹವನ್ನು ತುಂಡು ತುಂಡು ಮಾಡಿದೆ. ಯುವಕ ಸಾಯುವ ಮುನ್ನ ಮೊಸಳೆಯಿಂದ ತಪ್ಪಿಸಿಕೊಳ್ಳಲು ಭಾರಿ ಪ್ರಯತ್ನಪಟ್ಟನಾದರೂ ಮೊಸಳೆ ಅಂತಿಮವಾಗಿ ಆತನನ್ನು ಕೊಂದುಹಾಕಿದೆ. ಈ ಘಟನೆ ತಿಳಿದ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ನದಿಯ ದಡಕ್ಕೆ ಆಗಮಿಸಿದ್ದಾರೆ. ಇದಾದ ನಂತರ ಪದ್ರಾ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.