ETV Bharat / business

ಭಾರತದ ಜವಳಿ ರಫ್ತು ಶೇ 9.6ರಷ್ಟು ಏರಿಕೆ: ಸಿದ್ಧ ಉಡುಪು ರಫ್ತು 9.84ರಷ್ಟು ಹೆಚ್ಚಳ - India Textile Exports

ಭಾರತದ ಜವಳಿ ರಫ್ತು ಈ ವರ್ಷದ ಮೇ ತಿಂಗಳಲ್ಲಿ ಶೇ 9.59ರಷ್ಟು ಏರಿಕೆಯಾಗಿದೆ ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಟೆಕ್ಸ್​ಟೈಲ್ ಇಂಡಸ್ಟ್ರಿ (ಸಿಐಟಿಐ) ವರದಿ ತಿಳಿಸಿದೆ.

ಭಾರತದ ಜವಳಿ ರಫ್ತು ಏರಿಕೆ
ಸಂಗ್ರಹ ಚಿತ್ರ (IANS)
author img

By ETV Bharat Karnataka Team

Published : Jun 16, 2024, 1:59 PM IST

ನವದೆಹಲಿ: ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಭಾರತದ ಜವಳಿ ರಫ್ತು ಈ ವರ್ಷದ ಮೇ ತಿಂಗಳಲ್ಲಿ ಶೇ 9.6ರಷ್ಟು ಏರಿಕೆಯಾಗಿದೆ ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಟೆಕ್ಸ್​ಟೈಲ್ ಇಂಡಸ್ಟ್ರಿ (ಸಿಐಟಿಐ) ವರದಿ ತಿಳಿಸಿದೆ. ಯುರೋಪಿಯನ್ ಒಕ್ಕೂಟ (ಇಯು), ಅಮೆರಿಕ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿಕೂಲ ಆರ್ಥಿಕ ಪರಿಸ್ಥಿತಿಗಳ ಹೊರತಾಗಿಯೂ ಭಾರತದ ಜವಳಿ ರಫ್ತು ಹೆಚ್ಚಾಗಿರುವುದು ಗಮನಾರ್ಹ. ಇದಲ್ಲದೆ, ದೇಶದಿಂದ ಸಿದ್ಧ ಉಡುಪುಗಳ ರಫ್ತು ಇದೇ ಅವಧಿಯಲ್ಲಿ ಶೇಕಡಾ 9.84ರಷ್ಟು ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಮೇ 2024 ರಲ್ಲಿ ಜವಳಿ ಮತ್ತು ಉಡುಪುಗಳ ಸಂಯೋಜಿತ ರಫ್ತು ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಶೇಕಡಾ 9.70ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಸಿಟಿಐ ವರದಿಯು ಎತ್ತಿ ತೋರಿಸಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮೇ 2024ರಲ್ಲಿ ಭಾರತದ ಒಟ್ಟಾರೆ ರಫ್ತು 68.29 ಬಿಲಿಯನ್ ಡಾಲರ್​ಗೆ ಏರಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 10.2ರಷ್ಟು ಗಣನೀಯ ಹೆಚ್ಚಳವಾಗಿದೆ.

2024ರ ಏಪ್ರಿಲ್-ಮೇ ಅವಧಿಯಲ್ಲಿ, ಭಾರತೀಯ ಜವಳಿ ರಫ್ತು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 6.04ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಉಡುಪು ರಫ್ತು ಶೇಕಡಾ 4.46ರಷ್ಟು ಹೆಚ್ಚಾಗಿದೆ. 2024ರ ಏಪ್ರಿಲ್-ಮೇ ಅವಧಿಯಲ್ಲಿ ಜವಳಿ ಮತ್ತು ಉಡುಪುಗಳ ಸಂಚಿತ ರಫ್ತು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 5.34ರಷ್ಟು ಏರಿಕೆ ಕಂಡಿದೆ.

ಎಲೆಕ್ಟ್ರಾನಿಕ್ ಸರಕುಗಳು, ಔಷಧಿಗಳು, ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಲ್ಲಿಯೂ ಉತ್ತಮ ಬೆಳವಣಿಗೆಯಾಗಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ರಫ್ತು ದತ್ತಾಂಶ ತೋರಿಸಿದೆ. ಎಲೆಕ್ಟ್ರಾನಿಕ್ ಸರಕುಗಳ ರಫ್ತು ಶೇಕಡಾ 22.97ರಷ್ಟು ಏರಿಕೆಯಾಗಿದ್ದರೆ, ಪೆಟ್ರೋಲಿಯಂ ಉತ್ಪನ್ನಗಳ ರಫ್ತು ವರ್ಷದಿಂದ ವರ್ಷಕ್ಕೆ ಶೇಕಡಾ 15.75 ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತು ಶೇಕಡಾ 7.39ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.

"ಉತ್ತಮವಾದ ಆರ್ಡ್​ರ್​ ಬುಕಿಂಗ್​ಗಳ ಕಾರಣದಿಂದ ಮೇ 2024ರಲ್ಲಿ ರಫ್ತು ಉದ್ಯಮ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ. ಯುಎಸ್, ಯುಎಇ, ನೆದರ್​ಲ್ಯಾಂಡ್ಸ್, ಯುಕೆ, ಚೀನಾ, ಸಿಂಗಾಪುರ್, ಸೌದಿ ಅರೇಬಿಯಾ, ಬಾಂಗ್ಲಾದೇಶ, ಜರ್ಮನಿ ಮತ್ತು ಫ್ರಾನ್ಸ್ ಇವು ಭಾರತದ ಅಗ್ರ 10 ರಫ್ತು ಮಾರುಕಟ್ಟೆ ದೇಶಗಳಾಗಿವೆ" ಎಂದು ಫೆಡರೇಶನ್ ಆಫ್ ಇಂಡಿಯನ್ ಎಕ್ಸ್​ಪೋರ್ಟ್​ ಆರ್ಗನೈಸೇಷನ್ಸ್ (ಎಫ್ಐಇಒ) ಅಧ್ಯಕ್ಷ ಅಶ್ವನಿ ಕುಮಾರ್ ಹೇಳಿದರು.

ಭಾರತದ ಒಟ್ಟಾರೆ ಸರಕು ರಫ್ತು ಶೇಕಡಾ 9.1ರಷ್ಟು ಏರಿಕೆಯಾಗಿ 38.13 ಬಿಲಿಯನ್ ಡಾಲರ್​ಗೆ ತಲುಪಿದ್ದರೆ, ಸೇವಾ ರಫ್ತು ಶೇಕಡಾ 11.7ರಷ್ಟು ಏರಿಕೆಯಾಗಿ 30.16 ಬಿಲಿಯನ್ ಡಾಲರ್​ಗೆ ತಲುಪಿದೆ.

ಇದನ್ನೂ ಓದಿ: 82,000ಕ್ಕೆ ತಲುಪಲಿದೆಯಾ ಸೆನ್ಸೆಕ್ಸ್​? ರೇಟಿಂಗ್ ಏಜೆನ್ಸಿಗಳ ಮುನ್ಸೂಚನೆ ಏನು? - Stock Market

ETV Bharat Logo

Copyright © 2024 Ushodaya Enterprises Pvt. Ltd., All Rights Reserved.