ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರಿಂದ ತನಿಖೆ - Pavitra Gowda

author img

By ETV Bharat Karnataka Team

Published : Jun 16, 2024, 1:20 PM IST

Updated : Jun 16, 2024, 2:01 PM IST

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಪಂಚನಾಮೆ ನಡೆಸಿದ್ದಾರೆ. ​​

ನಟಿ ಪವಿತ್ರಗೌಡ ಮನೆಯಲ್ಲಿ ಪಂಚನಾಮೆ
ನಟಿ ಪವಿತ್ರಗೌಡ ಮನೆಯಲ್ಲಿ ಪಂಚನಾಮೆ (ETV Bharat)
ಪವಿತ್ರಗೌಡ ಮನೆ ಮಹಜರು (ETV Bharat)

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಮನೆಯಲ್ಲಿ ಇಂದು ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ ನಂತರ ಪವಿತ್ರಾ ಗೌಡ ನೇರವಾಗಿ ತಮ್ಮ ಮನೆಗೆ ಹೋಗಿದ್ದರು. ಅಲ್ಲದೇ ರೇಣುಕಾಸ್ವಾಮಿಯ ಮೇಲೆ ಮೊದಲು ಹಲ್ಲೆ ಮಾಡಿದ್ದೇ ಪವಿತ್ರಾ ಗೌಡ ಎಂಬ ಮಾಹಿತಿಯೂ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ.

ಆರ್.ಆರ್.ನಗರದಲ್ಲಿರುವ ಪವಿತ್ರಾ ಗೌಡ ಮನೆಗೆ ಆಕೆ ಮತ್ತು ಅವರ ಆಪ್ತ ಪವನ್​ ಎಂಬವರನ್ನು ಕರೆದೊಯ್ಯಲಾಗಿದ್ದು, ಕೃತ್ಯದ ದಿನ ಪವಿತ್ರಾ ಧರಿಸಿದ್ದ ಬಟ್ಟೆ ಹಾಗೂ ಪವಿತ್ರಾ ಗೌಡ ಹಲ್ಲೆ ಮಾಡಲು ಬಳಸಿದ್ದರು ಎನ್ನಲಾಗಿರುವ ಚಪ್ಪಲಿಯನ್ನು ಜಪ್ತಿ ಮಾಡಲಾಗಿದೆ.

ಮತ್ತೊಂದೆಡೆ, ಹತ್ಯೆಯಾದ ಸ್ಥಳದಲ್ಲಿದ್ದ ಪವಿತ್ರಾ ಗೌಡ ಅವರ ಮ್ಯಾನೇಜರ್ ದೇವರಾಜ್‌ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮೂಲಗಳಿಂದ ಲಭ್ಯವಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ತನಿಖಾ ತಂಡಕ್ಕೆ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಮರು ಸೇರ್ಪಡೆ - Renukaswamy Murder Case Probe

Last Updated : Jun 16, 2024, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.