ಶಾಸಕ ಯತ್ನಾಳ್‌ಗೆ ತಾಕತ್ತಿದ್ದರೆ ಕೊಡಗಿಗೆ ಬರಲಿ: ವೆಂಕಟೇಶ್ ಪೂಜಾರಿ ಸವಾಲು..!

By

Published : Dec 5, 2020, 2:39 PM IST

thumbnail

ಕೊಡಗು: ಶಾಸಕ ಯತ್ನಾಳ್ ಅವರಿಗೆ ತಾಕತ್ತಿದ್ದರೆ ಕೊಡಗಿಗೆ ಬರಲಿ. ಸಂಬಾಜಿ ಪಾಟೀಲ್‌ಗೆ ಮಸಿ ಬಳಿದಂತೆ ಬಳಿಯುತ್ತೇವೆ ಎಂದು ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಸವಾಲು ಹಾಕಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುಧ್ಧ ಕುಶಾಲನಗರದಲ್ಲಿ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಅವರು ಮಾತನಾಡಿದರು. ಕನ್ನಡಪರ ಸಂಘಟನೆಗಳ ಬಗ್ಗೆ ಮಾತನಾಡುವ ಮೊದಲು ಅವರ ಯೋಗ್ಯತೆ ತಿಳಿದುಕೊಳ್ಳಲಿ. ಆನೆ ಹೋಗುತ್ತಿರುತ್ತದೆ, ನಾಯಿ ಬೊಗಳುತ್ತಿರುತ್ತದೆ.‌ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಕನ್ನಡಪರ ರಕ್ಷಣಾ ವೇದಿಕೆ ಇರುವುದರಿಂದ ರಾಜ್ಯದಲ್ಲಿ ಬೆಳಗಾವಿ ಉಳಿದಿದೆ ಎಂದು ಹಿಂದೆ ಸಿಎಂ ಆಗಿದ್ದಂತಹ ಡಿ.ವಿ.ಸದಾನಂದಗೌಡ ಅವರೇ ಹೇಳಿದ್ದಾರೆ. ಜೈಲಿಗೆ ಹೋಗಿ ಬಂದವರೆಲ್ಲ ಕನ್ನಡಪರ ಸಂಘಟನೆಗಳ ಬಗ್ಗೆ ಮಾತನಾಡುತ್ತಾರೆ. ಸರ್ಕಾರ ಎಂಇಎಸ್ ಮೆಚ್ಚಿಸಲು ಮರಾಠ ಪ್ರಾಧಿಕಾರ ರಚನೆ ಮಾಡುತ್ತಿದೆ ಎಂದು ಅವರು ದೂರಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.