3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್‌, 2 ಸಾವಿರ ಸ್ಯಾನಿಟೈಸರ್‌: ವಿಶೇಷ ಅಲಂಕಾರದ ಮೂಲಕ ಕೊರೊನಾ ಜಾಗೃತಿ

By

Published : Jul 24, 2021, 10:44 PM IST

thumbnail

ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್‌, 2 ಸಾವಿರ ಸ್ಯಾನಿಟೈಸರ್‌ ಬಳಸಿ ವಿಶೇಷ ಅಲಂಕಾರ ಮಾಡಿರುವುದನ್ನ ಕಂಡು ಭಕ್ತಾದಿಗಳು ಪುಳಕಿತರಾದರು. ಕೊರೊನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿ ಅಲಂಕಾರ ಮಾಡಲಾಗಿತ್ತು. ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವಿ ಸೂರ್ಯ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಅಲಂಕಾರದ ಸದುಯೋಗ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಮಾಜಿ ಉಪಮಹಾಪೌರರಾದ ರಾಮ ಮೋಹನ ರಾಜ್‌ ಅವರ ಕಾರ್ಯ ಶ್ಲಾಘನೀಯ ಎಂದು ತೇಜಸ್ವಿ ಸೂರ್ಯ ಪ್ರಶಂಸಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.