ಮುಸ್ಲಿಂ ಮೀಸಲಾತಿ ಕುರಿತು ಸುಪ್ರೀಂಕೋರ್ಟ್​ ವಿಚಾರಣೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ..

By

Published : Apr 25, 2023, 4:07 PM IST

thumbnail

ಧಾರವಾಡ: ಮುಸ್ಲಿಂ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂಕೋರ್ಟ್​ ಮೇ 9ಕ್ಕೆ ವಿಚಾರಣೆ ಮುಂದೂಡಿದೆ. ವಿಚಾರಣೆ ಮುಗಿಯುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್​ಗೆ ಮೊದಲೇ ಹೇಳಿದ್ದೇವೆ ಅದು ಮುಂದುವರೆಯುತ್ತದೆ ಎಂದು ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಚಾರಣೆ ಮುಗಿಯುವವರೆಗೂ ಯಾವುದೇ ನಿರ್ಧಾರ ತೆಗದುಕೊಳ್ಳುವುದಿಲ್ಲ ಎಂದು ನಾವೇ ಕೋರ್ಟ್‌ಗೆ ಹೇಳಿದ್ದೇವೆ. ಕೋರ್ಟ್​ನಿಂದ ಯಾವುದೇ ತಡೆಯಾಜ್ಞೆ ಸಿಕ್ಕಿಲ್ಲ, ಮುಸ್ಲಿಂ ವಿರುದ್ಧವಾಗಿ ಈ ಮೀಸಲಾತಿ ಹಂಚಿಕೆ ಇಲ್ಲ. ಮೀಸಲಾತಿ ವಿಚಾರವಾಗಿ ಕಾಂಗ್ರೆಸ್​ನವರು ಸುಳ್ಳು ಹೇಳುತ್ತಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಸುಮಾರು 17 ಉಪ ಜಾತಿಗಳಿದ್ದು, ಎಲ್ಲವೂ ಹಿಂದುಳಿದ ವರ್ಗದಲ್ಲೇ ಇವೆ. ಕಡಿಮೆ ಆದಾಯಕ್ಕೆ ಮೀಸಲಾತಿ ಸಿಗುತ್ತಿತ್ತು. ನಾವು ಈಗ ಮಾಡಿದ ಮೀಸಲಾತಿಯಲ್ಲಿ ಅದೇ ಮೀಸಲಾತಿ ಸಿಗುತ್ತದೆ. ಹೀಗಾಗಿ ಅನ್ಯಾಯ ಆಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಮುಸ್ಲಿಮರಿಗೆ ಶೇ.4 ಮೀಸಲಾತಿ ರದ್ದುಗೊಳಿಸಿರುವ ನಿರ್ಧಾರ ಮೇ 9ರವರೆಗೆ ಜಾರಿ ಇಲ್ಲ: ಸುಪ್ರೀಂಕೋರ್ಟ್​ಗೆ ಸ್ಪಷ್ಟಪಡಿಸಿದ ರಾಜ್ಯ ಸರ್ಕಾರ!​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.