ಬಿಹಾರದಲ್ಲಿ ನಡೆದ ವಿಶ್ವಪ್ರಸಿದ್ಧ ಸೋನ್​ಪುರ ಮೇಳ: ವಿಡಿಯೋ

By ETV Bharat Karnataka Team

Published : Nov 29, 2023, 8:35 PM IST

thumbnail

ಸೋನ್​ಪುರ (ಬಿಹಾರ): ವಿಶ್ವವಿಖ್ಯಾತ ಸೋನ್​ಪುರ ಮೇಳದಲ್ಲಿ ಈ ಬಾರಿ ವಿದೇಶಿ ಕಲಾವಿದರು ತಮ್ಮ ಪ್ರತಿಭೆ ಮೆರೆದಿದ್ದಾರೆ. ಮೇಳದ ಮುಖ್ಯ ವೇದಿಕೆಯಲ್ಲಿ ತಮ್ಮ ನೃತ್ಯ ಮತ್ತು ಸಂಗೀತದ ಮಾಂತ್ರಿಕತೆ ಉಣ ಬಡಿಸಲು ಆಗಮಿಸಿದ ರಷ್ಯಾದ ಕಲಾವಿದರು ಸೋನ್‌ಪುರ ಸೇರಿದಂತೆ ಇಡೀ ದೇಶದ ಜನರ ಮನ ಗೆದ್ದಿದ್ದಾರೆ.  

"ಇದು ತುಂಬಾ ಸುಂದರವಾಗಿತ್ತು. ತುಂಬಾ ಚೆನ್ನಾಗಿತ್ತು. ಇಲ್ಲಿನ ಜನರು ತುಂಬಾ ಸುಂದರ ಮತ್ತು ಸ್ನೇಹಪರರು. ಭಾರತವು ಪರಿಪೂರ್ಣ ದೇಶವಾಗಿದೆ." ಎಂದು ರಷ್ಯಾದ ಕಲಾವಿದೆ ಮಾರಿಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಎರಡು ದೇಶಗಳ ನಡುವಿನ ಸಾಂಸ್ಕೃತಿಕ ವಿನಿಮಯ : ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದ ಅಡಿ ಬರುವ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಭಾರತದ ವಿದೇಶಿ ಸಾಂಸ್ಕೃತಿಕ ಸಂಬಂಧಗಳಿಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಈ ಕಾರ್ಯಕ್ರಮದಲ್ಲಿ ಇತರ ದೇಶಗಳು ಮತ್ತು ಜನರೊಂದಿಗೆ ಸಾಂಸ್ಕೃತಿಕ ವಿನಿಮಯ ಹೊಂದುವುದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧ ಸ್ಥಾಪಿಸುವುದು ಮತ್ತು ಅವುಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯ ಉದ್ದೇಶವಾಗಿದೆ.

ರಷ್ಯಾದ ಜಾನಪದ ಸಂಸ್ಕೃತಿಯ ಝಲಕ್: ಸೋನ್​ಪುರ್​ ಮೇಳದ ವೇದಿಕೆಯಲ್ಲಿ ರಷ್ಯಾದ 15 ಕಲಾವಿದರು ತಮ್ಮ ಪ್ರದರ್ಶನವನ್ನು ನೀಡಿದರು. ಈ ಕಲಾವಿದರು ಸುಮಾರು ಹನ್ನೆರಡು ಹಾಡುಗಳನ್ನು ಪ್ರಸ್ತುತಪಡಿಸಿದರು. ಇದು ಪ್ರೇಕ್ಷಕರಿಗೆ ಬಹಳ ಇಷ್ಟವಾಯಿತು. ರಷ್ಯಾದ ಕಲಾವಿದರಲ್ಲಿ ಮುಖ್ಯವಾಗಿ ತಾನ್ಯಾ, ಮಾರಿಯಾ, ಕೆಶ್ನಿಯಾ, ಅಲೆಕ್ಸಾ, ಅನಸ್ತಾಸಿಯಾ ಮತ್ತು ಸಲೆವಾ ಭಾಗವಹಿಸಿದ್ದರು. ಸೋನ್‌ಪುರ ಮೇಳದ ಪ್ರವಾಸಿ ವೇದಿಕೆಯಲ್ಲಿ ಅವರ 1 ಗಂಟೆ ಕಾರ್ಯಕ್ರಮ ನಿಗದಿಯಾಗಿತ್ತು. ಕೇವಲ ಒಂದೇ ಗಂಟೆಯಲ್ಲಿ ಕಾರ್ಯಕ್ರಮಕ್ಕೆ ಈ ರಷ್ಯನ್​​ ಜೋಡಿ ರಂಗು ತುಂಬಿತು. ಸೋನ್‌ಪುರ ಮೇಳದ ವೇದಿಕೆಯಲ್ಲಿ ರಷ್ಯಾದ ಜಾನಪದ ಸಂಸ್ಕೃತಿಯ ಝಲಕ್ ಕಂಡುಬಂತು.

ಇದನ್ನೂ ಓದಿ : ಕೃಷಿ ಮೇಳ 2023: ಹೊಸ ಬಗೆಯ "ಆಲ್ ಮೇಲ್ ಟಿಲಾಪಿಯಾ" ಮೀನುಗಳನ್ನ ಮುನ್ನೆಲೆಗೆ ತರುತ್ತಿರುವ ಕೃಷಿ ವಿವಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.