ಕಾಶ್ಮೀರ ಕಣಿವೆಯಲ್ಲಿ ಪ್ಯಾರಾಗ್ಲೈಡಿಂಗ್​: 5,330 ಅಡಿ ಎತ್ತರದಲ್ಲಿ ಸಾಹಸಮಯ ಹಾರಾಟ

By

Published : May 16, 2023, 6:01 PM IST

thumbnail

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದೇಶದಾದ್ಯಂತ ಬಿಸಿಲಿನ ತಾಪ ತಾರಕಕ್ಕೇರುತ್ತಿರುವ ನಡುವೆ ಕಾಶ್ಮೀರ ಕಣಿವೆಯ ಪ್ಯಾರಾಗ್ಲೈಡಿಂಗ್​ ಸ್ಥಳವಾದ ಅಸ್ತಾನ್​ಮಾರ್ಗ್​ ಟಾಪ್​ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಿಸಿಲಿನ ತಾಪದಿಂದ ಪಾರಾಗಲು ಪ್ರವಾಸಿಗರು ಕೂಲ್​ ಆಗಿರುವ ಹಿಮದ ಕಣಿವೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಪ್ಯಾರಾ ಗ್ಲೈಡಿಂಗ್​ ಈ ಬೇಸಿಗೆ ಕಾಲಕ್ಕೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. 12 ರಿಂದ 15 ನಿಮಿಷಗಳ ಈ ಸಾಹಸಮಯ ಸವಾರಿಯುದ್ದಕ್ಕೂ ಅಂತ್ಯವಿಲ್ಲದ ಪರ್ವತಗಳ ಸಾಲು, ದಾಲ್​ ಸರೋವರದ ಹೊಳೆಯುವ ನೀರಿನ ಸೌಂದರ್ಯ ನಿಮ್ಮನ್ನು ಇನ್ನಷ್ಟು ಮುದಗೊಳಿಸುತ್ತವೆ.

2014ರಲ್ಲಿ ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ, ಖಾಸಗಿ ಪ್ಯಾರಾಗ್ಲೈಡಿಂಗ್​ ಕಂಪೆನಿ ಕಾರಕೋರಂ ಎಕ್ಸ್​ಪ್ಲೋರರ್ಸ್​ ಸಹಯೋಗದೊಂದಿಗೆ ಪ್ಯಾರಾ ಗ್ಲೈಡಿಂಗ್​ ಕ್ರೀಡೆಯನ್ನು ನಡೆಸಿಕೊಂಡು ಬರುತ್ತಿದೆ. 2255 ಮೀ/7400 ಅಡಿ ಎತ್ತರದಲ್ಲಿರುವ ಹರ್ವಾನ್‌ನಿಂದ ಇಸ್ತಾನ್‌ಮಾರ್ಗ್‌ಗೆ 40 ನಿಮಿಷಗಳ ಚಾರಣ, ಪ್ರವಾಸಿಗರು ತಮ್ಮ ಸವಾರಿಯನ್ನು ಬುಕ್​ ಮಾಡಿ ಹರ್ವಾನ್​ ಗಾರ್ಡನ್​ ಬಳಿ ಹಾಜರಾದರೆ ಅಲ್ಲಿಂದ ಅವರನ್ನು ಇಸ್ತಾನ್ ಮಾರ್ಗ್​ನ ತುದಿಗೆ ಕರೆದೊಯ್ಯಲಾಗುತ್ತದೆ. 

ಈ ಸಾಯಸಮಯ ಸವಾರಿಯನ್ನು ಆನಂದಿಸಲು ಅದರಲ್ಲೂ ಈ ಬೇಸಿಗೆ ಕಾಲದಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಹುತೇಕ ಸಂಖ್ಯೆಯಲ್ಲಿ ಸ್ಥಳೀಯ ಹಾಗೂ ಹೊರಗಿನ ಪ್ರವಾಸಿಗರು ಆಗಮಿಸುತ್ತಾರೆ. ಮೇ ತಿಂಗಳಿನಿಂದ ಅಕ್ಟೋಬರ್​ ಅಂತ್ಯದವರೆಗೆ ಮಾತ್ರ ಲಭ್ಯವಿರುವ ಈ ಪ್ಯಾರಾ ಗ್ಲೈಡಿಂಗ್​ನಲ್ಲಿ ಕೈಗೆಟಕುವ ದರದಲ್ಲಿ 1,615 ಮೀಟರ್ (5,330 ಅಡಿ) ಎತ್ತರದಲ್ಲಿ, 12 ರಿಂದ 15 ನಿಮಿಷಗಳ ಸಾಹಸಮಯ ಸವಾರಿಯನ್ನು ಅನುಭವಿಸಬಹುದು. ಸವಾರಿಗೆ ಅಗತ್ಯವಿರುವ ಸುರಕ್ಷತಾ ಮುನ್ನೆಚ್ಚರಿಕೆ ಮತ್ತ ಅಗತ್ಯ ಉಪಕರಣಗಳ ಬಗ್ಗೆ ತಜ್ಞರು ಬ್ರೀಫಿಂಗ್​ ನೀಡಿದ ನಂತರ ಗ್ಲೈಡರ್​ನಲ್ಲಿ ಸವಾರಿ ನೀಡಲಾಗುತ್ತದೆ.

ಇದನ್ನೂ ನೋಡಿ: ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.