ಶತ್ರುಗಳ ಕೋಟೆಗೆ ನುಗ್ಗಿ ಹೊಡೆಯುತ್ತೆ ಭಾರತೀಯ ಸೇನೆಯ 4 ಕಾಲಿನ ಮೂಕ ಸೈನಿಕ- ಏನಿದರ ವಿಶೇಷತೆ? ವಿಡಿಯೋ

By ETV Bharat Karnataka Team

Published : Sep 13, 2023, 9:45 AM IST

thumbnail

ಜಮ್ಮು ಮತ್ತು ಕಾಶ್ಮೀರ: 21ನೇ ಶತಮಾನದ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಯನ್ನು ಶತ್ರುಗಳಿಗಿಂತ ಹೆಚ್ಚು ಹೈಟೆಕ್ ಆಗಿರಿಸಲು, ದೂರದಿಂದಲೇ ಕಾರ್ಯನಿರ್ವಹಿಸುವ ಮತ್ತು ಶತ್ರು ಪ್ರದೇಶದ ಮೇಲೆ ನುಗ್ಗಿ ದಾಳಿ ಮಾಡುವ ಸಾಮರ್ಥ್ಯವಿರುವ ವಿಶೇಷ ಸಾಧನವನ್ನು ಸಿದ್ಧಪಡಿಸಲಾಗಿದೆ. ನಾರ್ತ್ ಟೆಕ್ ಸಿಂಪೋಸಿಯಮ್ 2023ರಲ್ಲಿ, ಭಾರತೀಯ ಸೇನೆಯಿಂದ ನಿರ್ಮಿಸಲಾದ ಇಂಥದ್ದೊಂದು ಮಲ್ಟಿ ಯುಟಿಲಿಟಿ ಲೆಗ್ಡ್ ಉಪಕರಣ ಗಮನ ಸೆಳೆಯಿತು. ಇದು ಭಾರತೀಯ ಸೇನೆಯ ನಾಲ್ಕು ಕಾಲಿನ ಧ್ವನಿರಹಿತ ಸೈನಿಕ. ಶತ್ರುಗಳ ಭೂಪ್ರದೇಶದ 10 ಕಿ.ಮೀ ದೂರದ ವರೆಗೂ ಮುನ್ನುಗ್ಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಭವಿಷ್ಯದ ಸವಾಲುಗಳು ಮತ್ತು ದಾಳಿಗಳನ್ನು ಹಿಮ್ಮೆಟ್ಟಿಸಲು ಸೇನೆ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿದೆ. ಈ ಅನುಕ್ರಮದಲ್ಲಿ, ಸೇನೆಯ ಸಂಶೋಧನಾ ವಿಭಾಗವು ಮುಂದಿನ ಪೀಳಿಗೆಗಾಗಿ ಅನೇಕ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುತ್ತಿದೆ. ಇಂಥ ಶಸ್ತ್ರಾಸ್ತ್ರಗಳ ಮೂಲಕ ಶತ್ರು ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬಹುದು. ಇವುಗಳೊಂದಿಗೆ ಶತ್ರುಗಳ ಗಡಿಗೆ ಸೈನಿಕರನ್ನು ಕಳುಹಿಸುವ ಅಗತ್ಯವೇ ಇರುವುದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಯೋಜಿಸಲಾಗಿದ್ದ ರಕ್ಷಣಾ ಪ್ರದರ್ಶನದಲ್ಲಿ ಸೇನೆಯು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಅವುಗಳ ಮಹತ್ವ ವಿವರಿಸಲಾಯಿತು. ಈ ಸಾಧನದ ಹೆಸರು ಎಂಯುಎಲ್​ಇ. ಖಾಸಗಿ ವಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ಸೇನೆ ಇದನ್ನು ತಯಾರಿಸಿದೆ.  

ವಿಶೇಷತೆ: ''ಇದರ ಒಟ್ಟು ಪೇಲೋಡ್ ಸಾಮರ್ಥ್ಯ 12 ಕೆಜಿ. ಈ ಉಪಕರಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಥರ್ಮಲ್ ಕ್ಯಾಮರಾಗಳನ್ನು ಅಳವಡಿಸಬಹುದು. ಇದು ಯಾವುದೇ ಭೂಪ್ರದೇಶದಲ್ಲಿ ಕೆಲಸ ಮಾಡಬಲ್ಲದು. ಮುಖ್ಯ ಉದ್ದೇಶವು, ಸೇನೆಗೆ ಸಂಪರ್ಕ ಸಾಧಿಸುವ ಮೂಲಕ ಮಾಹಿತಿ ಸಂಗ್ರಹಿಸುವುದು. ಯುದ್ಧ ಕಾರ್ಯಾಚರಣೆಗಳಲ್ಲಿ ಬಳಸುವುದು. ಇದು ಬೆಟ್ಟಗಳನ್ನು ಹತ್ತುತ್ತದೆ. ಮೆಟ್ಟಿಲುಗಳನ್ನೂ ಏರುತ್ತದೆ. ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಬಹುದು. ವೈ-ಫೈ ಮತ್ತು ಎಲ್​ಟಿಇ ಮೂಲಕವೂ ಬಳಸಬಹುದು" ಎಂದು ಇಂಜಿನಿಯರ್ ಆರ್ಯನ್​ ಸಿಂಗ್​ ವಿವರಿಸಿದರು.

ಇದನ್ನೂ ಓದಿ: ರಜೌರಿಯಲ್ಲಿ ಸೇನಾ ಕಾರ್ಯಾಚರಣೆ.. ಒಬ್ಬ ಉಗ್ರನ ಎನ್​​ಕೌಂಟರ್​

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.