ಚಲಿಸುತ್ತಿದ್ದ ಲಾರಿಯಲ್ಲಿ ಬೆಂಕಿ: ಸಂಪೂರ್ಣ ಸುಟ್ಟು ಕರಕಲಾದ ಟ್ರಕ್

By

Published : Mar 17, 2023, 4:42 PM IST

thumbnail

ತುಮಕೂರು :ಚಲಿಸುತ್ತಿದ್ದ ಟ್ರಕ್​ನಲ್ಲಿ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಾರಿ ಸಂಪೂರ್ಣ ಹೊತ್ತಿ ಊರಿದಿರೋ ಘಟನೆ ತುಮಕೂರು ಜಿಲ್ಲೆಯ ಶಿರಾ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಶಿರಾ ತಾಲೂಕಿನ ಕಡವಿಗೆರೆ ಮೇಲು ಸೇತುವೆಯ ಬಳಿ ಅವಘಡ ಸಂಭವಿಸಿದ್ದು, ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಟ್ರಕ್​ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕ್ಷಣಾರ್ಧದಲ್ಲೇ ಟ್ರಕ್​ ತುಂಬೆಲ್ಲ ಆವರಿಸಿದೆ.  

ಇದರಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ನಂತರ ಸ್ಥಳಕ್ಕೆ ಬಂದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಈ ಅಪಘಾತದಲ್ಲಿ ಅದೃಷ್ಟ​ವಶಾತ್​ ಚಾಲಕನ ಸಮಯ ಪ್ರಜ್ಞೆಯಿಂದ ಕ್ಲೀನರ್ ಹಾಗೂ ಆತನ ಪ್ರಾಣ ಉಳಿದಿದೆ. ಇನ್ನು ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ದೂರದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಟ್ರಕ್​ನ ಇಂಜಿನ್​ನಲ್ಲಿ ಉಷ್ಣಾಂಶ ಹೆಚ್ಚಾಗಿದ್ದ ಕಾರಣ ಈ ರೀತಿ ಬೆಂಕಿ ಹೊತ್ತು ಕೊಂಡಿದೆ ಎಂದು ಪ್ರಾಥಮಿಕ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೇ ಬೆಂಕಿ ಒತ್ತಿಕೊಂಡ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದರೆ ಟ್ರಕ್​ನಲ್ಲಿದ್ದ ಸಾಮಗ್ರಿಗಳನ್ನು ಉಳಿಸಬಹುದಾಗಿತ್ತು. ಆದರೆ, ಹೆದ್ದಾರಿಯ ಸಮೀಪ ಅಗ್ನಿಶಾಮಕ ದಳ ಇಲ್ಲದೇ ಇರುವುದು ಕೂಡ ಈ ರೀತಿ ಅವಘಡದಲ್ಲಿ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಹೆಚ್ಚು ನಷ್ಟ ಸಂಭವಿಸುತ್ತಿರುವುದು ಕಾರಣವಾಗಿದೆ ಎನ್ನುವುದು ಸ್ಥಳೀಯರ ಮಾತಾಗಿದೆ. ಈ ಹೆದ್ದಾರಿಯಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ವೇಳೆ, ತಕ್ಷಣ ವೈದ್ಯಕೀಯ ತುರ್ತು ಚಿಕಿತ್ಸಾ ವ್ಯವಸ್ಥೆ ಕೂಡ ಇಲ್ಲದಿರುವುದು ಇಲ್ಲಿನ ವ್ಯವಸ್ಥೆಗೆ ಸಾಕ್ಷಿಯಾಗಿದೆ.   

ಇದನ್ನೂ ಓದಿ :ಮದ್ಯದ ಅಮಲಿನಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ರಾ ಸರ್ಕಾರಿ ವೈದ್ಯ? ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.