ಅಪಘಾತದಲ್ಲಿ ಗಾಯಗೊಂಡು ರಸ್ತೆಬದಿ ನರಳುತ್ತಿದ್ದ ವ್ಯಕ್ತಿಗೆ ಕೊರಟಗೆರೆ ತಹಶೀಲ್ದಾರ್ ನೆರವು: ವಿಡಿಯೋ

By

Published : Jun 18, 2023, 10:22 AM IST

thumbnail

ತುಮಕೂರು: ಅಪಘಾತದಲ್ಲಿ ಗಾಯಗೊಂಡು ನರಳುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಆಸ್ಪತ್ರೆಗೆ ದಾಖಲಿಸಿ ಕೊರಟಗೆರೆ ತಹಶೀಲ್ದಾರ್ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ಜಿ.ನಾಗೇನಹಳ್ಳಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಸತ್ಯನಾರಾಯಣ ಎಂಬವರು ಬೈಕ್​ನಿಂದ ಬಿದ್ದು ಒದ್ದಾಡುತ್ತಿದ್ದರು. ಇವರ ತಲೆಗೆ ಗಂಭೀರ ಸ್ವರೂಪದ ಪೆಟ್ಟಾಗಿದ್ದು ತೀವ್ರ ರಕ್ತಸ್ರಾವವಾಗಿತ್ತು. ರಸ್ತೆ ಬದಿಯಲ್ಲಿ 15 ನಿಮಿಷಗಳ ಕಾಲ ನರಳುತ್ತಿದ್ದರೂ ಸತ್ಯನಾರಾಯಣ ಅವರ ಸಹಾಯಕ್ಕೆ ಯಾರೂ ಬಂದಿರಲಿಲ್ಲ.

ಇದೇ ವೇಳೆ ಕಾರ್ಯನಿಮಿತ್ತ ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸಂಚರಿಸುತ್ತಿದ್ದರು. ಬೈಕ್ ಸವಾರನ ಗೋಳಾಟ ನೋಡಿ ಕೂಡಲೇ ತಮ್ಮದೇ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದಾರೆ. ಅಧಿಕಾರಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಏರ್ಪೋರ್ಟ್​ನಲ್ಲಿ ಬಸ್​ ಅಪಘಾತ: ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿತು. ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಪ್ರಯಾಣಿಕರನ್ನು ಶಿಫ್ಟ್​ ಮಾಡುವಾಗ ಶೆಟಲ್ ಬಸ್ ಟಿ2 ಪಿಲ್ಲರ್​ಗೆ ಡಿಕ್ಕಿ ಹೊಡೆಯಿತು. ಬಸ್​​ನಲ್ಲಿದ್ದ 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಏರ್ಪೋರ್ಟ್​ನಲ್ಲಿ ಬಸ್​ ಅಪಘಾತ: 15 ಮಂದಿ ಪ್ರಯಾಣಿಕರಿಗೆ ಗಾಯ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.