ಬಾಗಲಕೋಟೆ: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಹಾನಿ, ರೈತರು ಕಂಗಾಲು

By

Published : Sep 6, 2022, 3:07 PM IST

Updated : Feb 3, 2023, 8:27 PM IST

thumbnail

ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲಾದ್ಯಂತ ವ್ಯಾಪಕ ಹಾನಿ ಆಗಿದ್ದು, ಮನೆಗಳಿಗೆ ಹಾಗೂ ಜಮೀನುಗಳಿಗೆ ನೀರು ನುಗ್ಗಿ ಸಂಕಷ್ಟ ಅನುಭವಿಸುವಂತಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತಗೊಂಡು ಜನತೆ ಹಾಗೂ ರೈತರು ಪರದಾಡುವಂತಾಗಿದೆ. ಮುಧೋಳ, ಬಾದಾಮಿ ಹಾಗೂ ಹುನಗುಂದ ಇಲಕಲ್ಲ ತಾಲೂಕಿನಲ್ಲಿ ಸಾಕಷ್ಟು ಹಾನಿ ಆಗಿದೆ. ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದ ಬಳಿಯ ಹಳ್ಳಕ್ಕೆ ನೀರು ಬಂದು, ಸೇತುವೆ ಕೊಚ್ಚಿಹೋಗಿ ರಸ್ತೆ ಸಂಚಾರ ಬಂದ್ ಆಗಿದೆ. ನಿರ್ಮಾಣ ಹಂತದ ಸೇತುವೆ ಕೊಚ್ಚಿ ಹೋಗಿದೆ. ಇದರಿಂದ ಮುಧೋಳ ನಗರದಿಂದ ಅನಗವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೊಂದರೆ ಉಂಟಾಗಿದ್ದು, ರಸ್ತೆ ಬಂದ್ ಆಗಿ ವಾಹನ ಸವಾರರ ಪರದಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದೆ. ರಾತ್ರಿ ಮಳೆ ಸುರಿದ ಪರಿಣಾಮ ಗುಡ್ಡದಲ್ಲಿದ್ದ ನೀರು ಗ್ರಾಮಕ್ಕೆ ನುಗ್ಗಿ ಅವಾಂತರ ಸೃಷ್ಠಿಯಾಗಿದ್ದು,ಮನೆ ಜೊತೆಗೆ ಬೆಳೆ ಹಾನಿಯಾಗಿದೆ. ಇದರ ಜೊತೆಗೆ ಬಾದಾಮಿಯಲ್ಲಿ ಚಾಲುಕ್ಯರ ಆಳಿದ ಸ್ಮಾರಕಗಳ ಮುಂದೆಯೂ ನೀರಿನ ಹೊಳೆ ಹರಿಯುತ್ತಿರುವುದು ಗಮನ ಸೆಳೆಯುವಂತಾಗಿದೆ. ಐತಿಹಾಸಿಕ ಅಗಸ್ತ್ಯ ತೀರ್ಥ ಹೊಂಡಕ್ಕೂ ಸಹ ಹೆಚ್ಚಿನ ನೀರು ಬಂದು ಗಲ್ಲಿ ಗಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಕಳೆದ ರಾತ್ರಿ ಸುರಿದ ರಣಭೀಕರ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕಟಾವು ಮಾಡಿ ಸಂಗ್ರಹಿಸಿದ್ದ ಫಸಲು ಸಂಪೂರ್ಣ ಜಲಾವೃತವಾಗಿದೆ. ನೀರಲ್ಲಿ ನಿಂತ ಫಸಲು ಕಂಡು ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ರೈತರು ಕಣ್ಣೀರಿಟ್ಟಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಮೊನ್ನೆ ಹೆಸರು ಬೆಳೆ ಹಾಳಾಗಿತ್ತು. ಇಂದು ಸಜ್ಜೆ ಬೆಳೆ ಹಾಳಾಗಿದೆ ಎಂದು ರೈತರು ಕಣ್ಣೀರು ಇಟ್ಟಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ತಮ್ಮ ನೋವು ತೊರ್ಪಡಿಸಿಕೊಂಡಿದ್ದಾರೆ.

Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.