ಮರ ಹತ್ತಿ ಕುಳಿತ ಕಾಳಿಂಗ ನೋಡಿ .. ಸುರಕ್ಷಿತವಾಗಿ ಹಿಡಿದು ಕಾಡಿಗೆ ಕಳುಹಿಸಿದ ಸ್ನೇಕ್ ಕಿರಣ್​!

By

Published : Mar 23, 2022, 1:46 PM IST

Updated : Feb 3, 2023, 8:20 PM IST

thumbnail

ಶಿವಮೊಗ್ಗ: ಮರದ ಮೇಲೆ ಕುಳಿತ ಬೃಹದಾಕಾರದ ಕಾಳಿಂಗ ಸರ್ಪವನ್ನು ನೋಡಿದ ಜಮೀನಿನ ಮಾಲಿಕ ಹೌಹಾರಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ ಹಾದಿಗಲ್ಲು ಗ್ರಾಮದಲ್ಲಿ ನಡೆದಿದೆ. ಹೌದು, ವೆಂಕಟೇಶ್ ಎಂಬುವರ ಜಮೀನಿನಲ್ಲಿ ಸರ್ಪ ಕಾಣಿಸಿಕೊಂಡಿತ್ತು. ಮರದ ಮೇಲೆ ಕಾಳಿಂಗ ಕುಳಿತಿರುವುದ ಕಂಡು ಬೆಚ್ಚಿಬಿದ್ದರು. ಕೂಡಲೇ ಅರಣ್ಯ ಇಲಾಖೆ ಹಾಗೂ ಸ್ನೇಕ್ ಕಿರಣ್​ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕಿರಣ್, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಮರದ ಮೇಲಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸುಮಾರು 12 ಅಡಿ ಉದ್ದವಿದ್ದು, 9 ಕೆ.ಜಿ. ತೂಕವಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಸರ್ಪವನ್ನು ಸಮೀಪದ ಅರಣ್ಯಕ್ಕೆ ಬಿಡಲಾಯಿತು ಎಂದು ಕಿರಣ್ ಮಾಹಿತಿ ನೀಡಿದರು.

Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.