ಮಕ್ಕಳಂತೆ ಹಿಮದಲ್ಲಿ ಆಟವಾಡಿದ ರಾಹುಲ್ ಗಾಂಧಿ -​ ಸಹೋದರಿ ಪ್ರಿಯಾಂಕಾ

By

Published : Jan 31, 2023, 10:36 PM IST

Updated : Feb 3, 2023, 8:39 PM IST

thumbnail

ಶ್ರೀನಗರ: ಕೈ ನಾಯಕ ರಾಹುಲ್​ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಹಿಮದಲ್ಲಿ ಮಕ್ಕಳಂತೆ ಸ್ನೋಬಾಲ್​ ಆಟವಾಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಇನ್ನು ಸೋಮವಾರ ದಿನ ಇಲ್ಲಿಯ ಲಾಲ್​ ಚೌಕ್​ನಲ್ಲಿ ಧ್ವಜರೋಹಣ ಮಾಡುವ ಮೂಲಕ ಭಾರತ್​ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ​ ಮುಕ್ತಾಯಗೊಳಿಸಿದ್ದರು. ಸಮಾರೋಪ ಕಾರ್ಯಕ್ರಮ ಮುಕ್ತಾಯವಾದ ನಂತರ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನಗರ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ರಾಹುಲ್​ ಮತ್ತು ಪ್ರಿಯಾಂಕಾ ಹಿಮದಲ್ಲಿ ಮಕ್ಕಳಂತೆ ಆಟವಾಡುವ ಮೂಲಕ ಗಮನ ಸೆಳೆದಿದ್ದಾರೆ. ಬಳಿಕ ಸಂಜೆ ವೇಳೆಗ ಇಲ್ಲಿಯ ದಾಲ್​ ಸರೋವರಕ್ಕೆ ಭೇಟಿ ನೀಡಿದ್ದರು. 

ಈ ವೇಳೆ ರಾಹುಲ್​ ಅಭಿಮಾನಿಯೊಬ್ಬರು ಅವರನ್ನು ಅಪ್ಪಿಕೊಳ್ಳುವ ಬಯಕೆ ಇದೆ ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ರಾಹುಲ್​ ಒಪ್ಪಿಗೆ ಸೂಚಿಸಿ ಅಭಿಮಾನಿಯನ್ನು ತಬ್ಬಿಕೊಂಡಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ಅಲ್ಲದೇ ನಡು ರಸ್ತೆಯಲ್ಲಿ ನಿಂತಿದ್ದ ಕಾರನ್ನು ತಳ್ಳುವ ಮೂಲಕ ರಾಹುಲ್​ ಕಾರ್​ ಚಾಲಕನಿಗೆ ಸಹಾಯ ಮಾಡಿರುವ ದೃಶ್ಯವನ್ನು ಸಹ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋಗಳು ವೈರಲ್​ ಆಗಿವೆ. ಇನ್ನು, ಕನ್ಯಾಕುಮಾರಿಯಿಂದ ಆರಂಭವಾದ ಭಾರತ್​ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಕೊನೆಗೊಂಡಿದ್ದು, ಸುಮಾರು 4000 ಕಿ.ಮೀ ಯಾತ್ರೆ ಇದಾಗಿತ್ತು.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಖೀರ್ ಭವಾನಿ ದೇಗುಲಕ್ಕೆ ರಾಹುಲ್​, ಪ್ರಿಯಾಂಕಾ ಭೇಟಿ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.