ETV Bharat / sukhibhava

ಗರ್ಭ ಕಂಠ ಕ್ಯಾನ್ಸರ್​ ತಡೆಗೆ ಸೆರಂನಿಂದ ಸರ್ವವಾಕ್​ ಲಸಿಕೆ

author img

By

Published : Jan 31, 2023, 5:18 PM IST

ಗರ್ಭ ಕಂಠ ಕ್ಯಾನ್ಸರ್​ ತಡೆಗೆ ಸೆರಾಂನಿಂದ cervavac ಲಸಿಕೆ
cervavac-vaccine-from-serum-for-prevention-of-cervical-cancer

ಮಹಿಳೆಯರಲ್ಲಿ ಹೆಚ್ಚುತ್ತಿರು ಗರ್ಭಕಂಠ ಕ್ಯಾನ್ಸರ್​- ಕ್ಯಾನ್ಸರ್​ ತಡೆಗೆ ಸೆರಂನಿಂದ ಲಸಿಕೆ ತಯಾರಿ - ಸ್ವದೇಶಿ ನಿರ್ಮಿತ ಲಸಿಕೆ ಶೇ 100ರಷ್ಟು ಪರಿಣಾಮಕಾರಿ

ಹೈದರಾಬಾದ್​: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಸೆರಂ ಇನ್ಸಿಟಿಟ್ಯೂಟ್​ ಆಫ್​ ಇಂಡಿಯಾ ಪ್ರೈವೇಟ್​ ಲಿಮಿಡೆಟ್​​ (ಎಸ್​ಐಐ) ಗರ್ಭಕಂಠದ ಕ್ಯಾನ್ಸರ್​ ವಿರುದ್ಧ ಮೊದಲ ಸ್ವದೇಶಿ ಲಸಿಕೆ ಸೆರ್ವವಾಕ್ (Cervavac)​ ಅನ್ನು ಬಿಡುಗಡೆ ಮಾಡಿದೆ. Cervavacನ ಈ ಹಿಂದಿನ ಅಧ್ಯಯನ ಫಲಿತಾಂಶದಲ್ಲಿ, ಗರ್ಭಕಂಠ ಕ್ಯಾನ್ಸರ್​ ತಡೆಯುವಲ್ಲಿ ಇದು ಇದು ಶೇ 100ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಮಹಿಳೆಯರಲ್ಲಿ ಕಾಡುವ ಮಾರಾಣಾಂತಿಕ ಕ್ಯಾನ್ಸರ್​ಗಳಲ್ಲಿ ಗರ್ಭಕಂಠದ ಕ್ಯಾನ್ಸರ್​ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಭಾರತದಲ್ಲಿ ಸರಿಸುಮಾರು ಒಂದು ಲಕ್ಷ ಮಹಿಳೆಯರು ಈ ಗರ್ಭಕಂಠದ ಕ್ಯಾನ್ಸರ್​ಗೆ ತುತ್ತಾಗುತ್ತಿದ್ದು, 67 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಈ ಗರ್ಭಕಂಠದ ಕ್ಯಾನ್ಸರ್​ ತಡೆಗೆ ಈಗಾಗಲೇ ಹಲವು ಲಸಿಕೆಗಳು ಇವೆ. ಈ ಎಲ್ಲವುಗಳಿಗಿಂತ ಈ ಲಸಿಕೆ ಹೆಚ್ಚು ಪರಿಣಾಮ ಕಾರಿಯಾಗಿದೆ ಎಂದು ನಂಬಲಾಗಿದೆ. ಇನ್ನು ಈ ಗರ್ಭಕಂಠದ ಕ್ಯಾನ್ಸರ್​ ಯಾಕೆ ಬರುತ್ತದೆ ಎಂಬುದರ ಕುರಿತು ತಜ್ಞರು ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, ಈ ಕ್ಯಾನ್ಸರ್​ ತಡೆಗೆ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಏನಿದು ಗರ್ಭ ಕಂಠದ ಕ್ಯಾನ್ಸರ್​​: ಮಹಿಳೆಯರಲ್ಲಿ ಕಂಡು ಬರುವ ಮಾರಣಾಂತಿಕ ಕ್ಯಾನ್ಸರ್​ಗಳಲ್ಲಿ ಒಂದಾಗಿರುವ ಈ ಗರ್ಭ ಕಂಠದ ಕ್ಯಾನ್ಸರ್​ ಜಗತ್ತಿನಲ್ಲಿ ತಡೆಗಟ್ಟಬಹುದಾದ ನಾಲ್ಕನೇ ಕ್ಯಾನ್ಸರ್​ ಆಗಿದೆ. ಭಾರತದಲ್ಲಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಎರಡನೇ ಕ್ಯಾನ್ಸರ್​ ಇದಾಗಿದೆ. 30 ವರ್ಷದ ಬಳಿಕ ಮಹಿಳೆಯರಲ್ಲಿ ಇದು ಕಂಡು ಬರುತ್ತದೆ. ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ಇದಕ್ಕೆ ಪ್ರಮುಖ ಕಾರಣವಾಗಿದೆ. ಎಲ್ಲ ರೀತಿಯ ಎಚ್​ಪಿವಿ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗುವುದಿಲ್ಲ.

ಎಚ್​ಪಿವಿ ಲೈಂಗಿಕವಾಗಿ ವರ್ಗಾಂತರವಾಗುವ ವೈರಸ್​ ಆಗಿದ್ದು, ಸೋಂಕಿನಿಂದ ಉಂಟಾಗುವ ಸಾಧ್ಯತೆ ಒದೆ. ಇದರ ಸ್ಪಷ್ಟ ಲಕ್ಷಣಗಳ ಬಗ್ಗೆ ಸರಿಯಾಗಿ ಗೋಚರ ಆಗುವುದಿಲ್ಲ. ಇದರ ಲಕ್ಷಣ ಆರಂಭವಾದಾಗ ಸೋಂಕು ಹೆಚ್ಚುತ್ತದೆ. ರೋಗ ನಿರೋಧಕ ವ್ಯವಸ್ಥೆ ದುರ್ಬಲ ಆಗಿರುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗುತ್ತದೆ. ಗರ್ಭಕೋಶದ ಕೆಳಭಾಗದಲ್ಲಿ ಇದು ಜೀವಕೋಶಗಳನ್ನು ಅಭಿವೃದ್ಧಿ ಪಡಿಸುತ್ತದೆ. ಈ ಗರ್ಭ ಕೋಶ ಯೋನಿಯೊಂದಿಗೆ ಸಂಬಂಧ ಹೊಂದಿದೆ. ಸೋಂಕಿನ ರೂಪದಲ್ಲಿ ಆರಂಭವಾಗಿ ಬಳಿಕ ಕ್ಯಾನ್ಸರ್​​ಗೆ ಇದು ಕಾರಣವಾಗುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ ನಿಧಿ ಕೊಟಾರಿ.

ಗರ್ಭಕಂಠದ ಕ್ಯಾನ್ಸರ್​ ಬಗ್ಗೆ ವೈದ್ಯರ ಅಭಿಪ್ರಾಯ: ಒಬ್ಬರಿಗಿಂತ ಹೆಚ್ಚು ಜನರೊಂದಿಗಿನ ಲೈಂಗಿಕ ಸಂಬಂದ ಎಚ್​ಐವಿ ಮತ್ತು ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಗರ್ಭಕಂಠದ ಕ್ಯಾನ್ಸರ್​ ಅನ್ನು ಲಸಿಕೆ ಮೂಲಕ ತಡೆಗಟ್ಟಬಹುದು. ಎಚ್​​ಪಿವಿ ಲಸಿಕೆ ಈ ರೋಗವನ್ನು ತಡೆಗಟ್ಟುತ್ತದೆ. ಇದರಲ್ಲಿ 2, 4, 5 ರೂಪಾಂತರಗಳಿವೆ. ಲಸಿಕೆ ಯುವತಿಯರನ್ನು ಗರ್ಭಕಂಠದ ಕ್ಯಾನ್ಸರ್​ಗೆ ಒಳಗಾಗದಂತೆ ತಡೆಯುತ್ತದೆ ಎನ್ನುತ್ತಾರೆ ಡಾ ನೆಹಾ ಶರ್ಮಾ

ಗರ್ಭಕಂಠ ಕ್ಯಾನ್ಸರ್​ ಅಂಶ: ಹ್ಯೂಮನ್​ ಪಪಿಲೊಮವೈರಸ್​​ ನೂರಾರು ವಿಧದ ವೈರಸ್​ಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇದರಲ್ಲಿ ಎಚ್​ಪಿವಿ 16 ಮತ್ತು ಎಚ್​ಪಿವಿ 18 ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗಿದೆ. ಶೇ 83ರಷ್ಟಯ ಗರ್ಭಕಂಠದ ಕ್ಯಾನ್ಸರ್​ಗೆ ಎಚ್​ಪಿವಿ 16 ಮತ್ತು ಎಚ್​ಪಿವಿ 18 ಕಾರಣವಾಗಿದೆ. ಇದರ ಹೊರತಾಗಿ ಇತರ ಕಾರಣಗಳಿಂದ ಕೂಡ ಕ್ಯಾನ್ಸರ್​ ಬೆಳವಣಿಗೆ ಮತ್ತು ಹರಡುತ್ತದೆ.

ಏನಿದು ಎಚ್​ಪಿವಿ ಲಸಿಕೆ: ಅನೇಕ ಎಚ್​ಪಿವಿಗಳಲ್ಲಿ ಕೆಲವು ಕಡಿಮೆ ಅಪಾಯವನ್ನು ಹೊಂದಿದ್ದರೆ, ಮತ್ತೆ ಕೆಲವು ಅಧಿಕ ಅಪಾಯವನ್ನು ಹೊಂದಿರುತ್ತದೆ. ಅಧಿಕ ಅಪಾಯ ಕ್ಯಾನ್ಸರ್​ಗೆ ಕಾರಣವಾಗಿದೆ. ಈ ಎಚ್​ಪಿವಿ ಲಸಿಕೆ ರಕ್ಷಣಾತ್ಮಕ ಶೀಲ್ಡ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಇದು ಗರ್ಭಕಂಠದ ಕ್ಯಾನ್ಸರ್​ ತಡೆಯುವಲ್ಲಿ ಪ್ರಯೋಜನಕಾರಿಯಾಗಿದೆ. ಇದುವರೆಗೆ Gardasil 9 ಮತ್ತು Cervarix ಲಸಿಕೆ ಪ್ರಪಂಚದಲ್ಲಿ ಲೈಸೆನ್ಸ್​ ಪಡೆದಿದೆ. ಇದರ ಯಶಸ್ಸಿನ ದರ ಶೇ 70ರಷ್ಟಿದೆ.

ಸ್ವದೇಶಿ ಲಸಿಕೆ ವಿಶೇಷ ಯಾಕೆ: ಸರ್ವವಾಕ್​ ಲಸಿಕೆ ಗರ್ಭಕಂಠ ಕ್ಯಾನ್ಸರ್​ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಇದು ಶೇ 100ರಷ್ಟು ಪರಿಣಾಮಕಾರಿಯಾಗಿದ್ದು, ಈ ಹಿಂದಿನ ಅಧ್ಯಯನದಲ್ಲೂ ಉತ್ತಮ ಫಲಿತಾಂಶ ವ್ಯಕ್ತವಾಗಿದೆ. ಎಚ್​ಪಿವಿ ನಾಲ್ಕು ರೂಪಾಂತರಗಳಾದ ಟೈಪ್​ 6, ಟೈಪ್​ 11, ಟೈಪ್​ 16 ಮತ್ತು ಟೈಪ್​ 18 ವಿರುದ್ಧ ಈ ಲಸಿಕೆಯ ಪರಿಣಾಮಕಾರಿತ್ವ ಪರೀಕ್ಷೆ ನಡೆಸಲಾಗಿದೆ.

ಲೈಂಗಿಕ ಸಂಬಂಧಕ್ಕೆ ಒಳಗಾಗುವ ಮೊದಲೇ 9ರಿಂದ 14 ವರ್ಷದ ಬಾಲಕಿಯರಿಗೆ ಈ ಲಸಿಕೆ ನೀಡಲಾಗಿದೆ. ಇದರಲ್ಲಿ ಶೇ 99ರಷ್ಟರ ಮಟ್ಟಿಗೆ ಈ ಗರ್ಭಕಂಠದ ಕ್ಯಾನ್ಸರ್​ ಹರಡುವುದನ್ನು ತಡೆಯುವಲ್ಲಿ ಲಸಿಕೆ ಯಶಸ್ವಿಯಾಗಿದೆ. ಈ ಲಸಿಕೆ ಸೆಪ್ಟೆಂಬರ್​ನಲ್ಲಿ 200 ರಿಂದ 400 ರೂಗೆ ಈ ಲಸಿಕೆ ಸಿಗಲಿದೆ ಎಂದು ಸೆರಾಂ ಮುಖ್ಯಸ್ತ ಅದಾರ್​ ಪೂನಾವಾಲಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.