ETV Bharat / sukhibhava

ಸಸ್ಯಾಹಾರ ಪದಾರ್ಥ: ಕೇಂದ್ರದಿಂದ ಪ್ರತ್ಯೇಕ ನೀತಿ- ನಿಯಮಗಳ ರಚನೆ, ಅಧಿಸೂಚನೆ!

author img

By

Published : Jun 16, 2022, 7:00 AM IST

ಫುಡ್ ಸ್ಟ್ಯಾಂಡರ್ಡ್ಸ್ ಸೇಫ್ಟಿ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ಹೊರಡಿಸಿದ ಅಧಿಸೂಚನೆ ಪ್ರಕಾರ ಸಸ್ಯಾಹಾರಿ ಆಹಾರವನ್ನು ಆಹಾರ ಅಥವಾ ಆಹಾರ ಪದಾರ್ಥ ಎಂದು ವ್ಯಾಖ್ಯಾನಿಸಿದೆ. ಸುವಾಸನೆಗಳು, ಕಿಣ್ವಗಳು ಮತ್ತು ವಾಹಕಗಳು ಅಥವಾ ಸಂಸ್ಕರಣಾ ಸಾಧನಗಳು ಪ್ರಾಣಿ ಮೂಲದ ಉತ್ಪನ್ನಗಳಲ್ಲ ಎಂಬುದನ್ನು ನಮೂದಿಸಬೇಕಾಗುತ್ತದೆ.
Centre notifies final regulations for vegan food
Centre notifies final regulations for vegan food

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ವೆಗನ್ ಫುಡ್ಸ್) ನಿಯಮಾವಳಿಗಳು- 2022 ಗಾಗಿ ಕೇಂದ್ರ ಸರ್ಕಾರವು ಬುಧವಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಆ ಮೂಲಕ ಸಸ್ಯಾಹಾರಿ ಆಹಾರ ಯಾವುದು, ಅದಕ್ಕೆ ಯಾವ ರೀತಿಯ ಲೇಬಲಿಂಗ್/ಪ್ಯಾಕೇಜಿಂಗ್ ಅಗತ್ಯ ಇರುತ್ತದೆ ಎಂಬುದನ್ನು ಪೂರೈಕೆದಾರರು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಈ ಸಂಬಂಧ ಜೂನ್ 10 ರಂದು ಅಧಿಸೂಚನೆಯನ್ನು ಬುಧವಾರ ಪ್ರಕಟಿಸಲಾಗಿದ್ದು, ಇದು ತಕ್ಷಣವೇ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ.

ಫುಡ್ ಸ್ಟ್ಯಾಂಡರ್ಡ್ಸ್ ಸೇಫ್ಟಿ ಅಸೋಸಿಯೇಷನ್ ​​ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) ಹೊರಡಿಸಿದ ಅಧಿಸೂಚನೆ ಪ್ರಕಾರ ಸಸ್ಯಾಹಾರಿ ಆಹಾರವನ್ನು ಆಹಾರ ಅಥವಾ ಆಹಾರ ಪದಾರ್ಥ ಎಂದು ವ್ಯಾಖ್ಯಾನಿಸಿದೆ. ಸುವಾಸನೆಗಳು, ಕಿಣ್ವಗಳು ಮತ್ತು ವಾಹಕಗಳು ಅಥವಾ ಸಂಸ್ಕರಣಾ ಸಾಧನಗಳು ಪ್ರಾಣಿ ಮೂಲದ ಉತ್ಪನ್ನಗಳಲ್ಲ ಎಂಬುದನ್ನು ನಮೂದಿಸಬೇಕಾಗುತ್ತದೆ.

ಯಾವುದೇ ವ್ಯಕ್ತಿಯು ಈ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ಅವಶ್ಯಕತೆಗಳನ್ನು ಅನುಸರಿಸದ ಹೊರತು ಯಾವುದೇ ವ್ಯಕ್ತಿಯು ಸಸ್ಯಾಹಾರಿ ಆಹಾರವನ್ನು ತಯಾರಿಸುವಂತಿಲ್ಲ. ಇಲ್ಲವೇ ಪ್ಯಾಕ್ ಮಾಡುವಂತಿಲ್ಲ ಹಾಗೂ ಅಂತಹ ವಸ್ತುವನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ಹೇಳಿದೆ. ಸಸ್ಯಾಹಾರಿ ಎಂದು ಕರೆಯಲ್ಪಡುವ ಯಾವುದೇ ಪದಾರ್ಥವನ್ನು ಸುರಕ್ಷತಾ ಮೌಲ್ಯಮಾಪನ ಸೇರಿದಂತೆ ಯಾವುದೇ ಉದ್ದೇಶಕ್ಕಾಗಿ ಪ್ರಾಣಿಗಳ ಪರೀಕ್ಷೆ ಒಳಗೊಂಡಿರಬಾರದು ಎಂಬ ಷರತ್ತು ವಿಧಿಸಲಾಗಿದೆ. ಸಂಬಂಧಪಟ್ಟ ಪ್ರಾಧಿಕಾರದ

ಸಸ್ಯಾಹಾರಿ ಆಹಾರಕ್ಕಾಗಿ ಬಳಸಲಾಗುವ ಪ್ರತಿಯೊಂದು ಪ್ಯಾಕೇಜಿಂಗ್ ವಸ್ತುವು ಪ್ಯಾಕೇಜಿಂಗ್ ನಿಯಮಗಳ ನಿಬಂಧನೆಗಳನ್ನು ಅನುಸರಿಸಬೇಕಾಗುತ್ತದೆ. ಆಹಾರ ವ್ಯಾಪಾರ ಆಪರೇಟರ್ (FBO) ಉತ್ಪಾದನೆ, ಸಂಸ್ಕರಣೆ ಮತ್ತು ವಿತರಣೆಯ ಎಲ್ಲಾ ಹಂತಗಳನ್ನು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಮಾಂಸಾಹಾರಿ ಪದಾರ್ಥಗಳ ಅನಪೇಕ್ಷಿತ ಉಪಸ್ಥಿತಿಯನ್ನು ತಪ್ಪಿಸುವ ರೀತಿಯಲ್ಲಿ ಉತ್ತಮ ಉತ್ಪಾದನಾ ಅಭ್ಯಾಸಗಳೊಂದಿಗೆ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ:ಹಲೋ ಎಕ್ಸ್​ಕ್ಯೂಸ್ ಮಿ.. ನೀವು ವಯಾಗ್ರ ತೆಗೆದುಕೊಳ್ಳುತ್ತಿದ್ರೆ ಈ ಸುದ್ದಿ ನಿಮಗಾಗಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.