ETV Bharat / snippets

ಕಾರವಾರ: ಹುಡುಗಿಯ ಹಾಲಿ ಪ್ರಿಯಕರನ ಮೇಲೆ ಮಾಜಿ ಪ್ರಿಯಕರನಿಂದ ಹಲ್ಲೆ

author img

By ETV Bharat Karnataka Team

Published : May 23, 2024, 9:02 AM IST

ಯುವತಿಗಾಗಿ ಯುವಕನ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ (ETV Bharat)

ಕಾರವಾರ: ತಾನು ಪ್ರೀತಿಸಿದ ಹುಡುಗಿಯನ್ನೇ ಪ್ರೀತಿಸಿ ಮದುವೆ ಮಾಡಿಕೊಳ್ಳಲು ಮುಂದಾದ ಹಾಲಿ ಪ್ರಿಯಕರನ ಕಣ್ಣಿಗೆ ಖಾರದ ಪುಡಿ ಎರಚಿದ ಮಾಜಿ ಪ್ರಿಯಕರ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಕುಮಟಾದ ಮಣಕಿ ಮೈದಾನದ ಸಮೀಪ ಬುಧವಾರ ಘಟನೆ ನಡೆದಿದೆ. ರಾಜೇಶ ರಮೇಶ ಅಂಬಿಗ ಪ್ರಕರಣದ ಆರೋಪಿಯಾಗಿದ್ದಾನೆ.

ಕುಮಟಾದ ಸಂತೋಷ ಅಂಬಿಗ ಎಂಬಾತ ಗಾಯಾಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ ಅಂಬಿಗ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ. ಇದಕ್ಕೆ ಆಕೆಯ ಮಾಜಿ ಪ್ರಿಯಕರ ರಾಜೇಶ ರಮೇಶ ಅಂಬಿಗ ವಿರೋಧ ವ್ಯಕ್ತಪಡಿಸಿದ್ದ. ಅಲ್ಲದೇ ಇದಕ್ಕಾಗಿ ಹಲವು ಬಾರಿ ಜಗಳವೂ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಸಿಡಿಲು ಬಡಿದು ಯುವಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.