ETV Bharat / health

ಇಂದು 'ಪ್ರಸೂತಿ ಫಿಸ್ತುಲಾ' ನಿರ್ಮೂಲನಾ ದಿನ: ಈ ಆರೋಗ್ಯ ಸಮಸ್ಯೆಯ ಬಗ್ಗೆ ಗೊತ್ತೇ? - Obstetric Fistula

author img

By ETV Bharat Karnataka Team

Published : May 23, 2024, 7:06 AM IST

ಪ್ರತೀ ವರ್ಷ ಮೇ 23 ಅನ್ನು 'ಪ್ರಸೂತಿ ಫಿಸ್ತುಲಾ ನಿರ್ಮೂಲನಾ ಅಂತಾರಾಷ್ಟ್ರೀಯ ದಿನ' ಎಂದು ಆಚರಿಸಲಾಗುತ್ತದೆ.

International Day to End Obstetric Fistula
ಪ್ರಸೂತಿ ಫಿಸ್ತುಲಾ ನಿರ್ಮೂಲನಾ ಅಂತಾರಾಷ್ಟ್ರೀಯ ದಿನ (ETV Bharat)

ಹೈದರಾಬಾದ್​: ವಿಶ್ವದಾದ್ಯಂತ ಪ್ರಸೂತಿ ಫಿಸ್ತುಲಾ ಎಂಬ ಅನಾರೋಗ್ಯ ಸಮಸ್ಯೆಯನ್ನು ಕೊನೆಗೊಳಿಸಲು ಪ್ರತೀ ವರ್ಷ ಮೇ 23ರಂದು 'ಪ್ರಸೂತಿ ಫಿಸ್ತುಲಾ ನಿರ್ಮೂಲನಾ ಅಂತಾರಾಷ್ಟ್ರೀಯ ದಿನ'ವನ್ನಾಗಿ ಆಚರಿಸಿ ಈ ಕುರಿತು ವಿಶೇಷ ಅರಿವು ಮೂಡಿಸಲಾಗುತ್ತದೆ.

ಪ್ರಸೂತಿ ಫಿಸ್ತುಲಾ ಎಂದರೇನು?: ಪ್ರಸೂತಿ ಫಿಸ್ತುಲಾ ಎಂಬುದು ಜನನೇಂದ್ರಿಯ ಮತ್ತು ಮೂತ್ರಕೋಶ ಅಥವಾ ಗುದನಾಳದ ನಡುವಿನ ರಂಧ್ರ. ಇದು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಇಲ್ಲದೇ ದೀರ್ಘಕಾಲದ ಅಥವಾ ಅಡೆತಡೆಯ ಹೆರಿಗೆಯಿಂದ ಉಂಟಾಗುತ್ತದೆ. ಮಹಿಳೆಯರು, ಹುಡುಗಿಯರಿಗೆ ಮೂತ್ರ, ಮಲ ಅಥವಾ ಎರಡನ್ನೂ ಇದು ಸೋರಿಕೆ ಮಾಡುತ್ತದೆ. ಪರಿಣಾಮವಾಗಿ ಮಾನಸಿಕ ಖಿನ್ನತೆ, ಸಾಮಾಜಿಕ ಪ್ರತ್ಯೇಕತೆಗೆ ಕಾರಣವಾಗುತ್ತದೆ. ಫಿಸ್ತುಲಾ ಒಳಗೊಂಡ ಶೇ.90ರಷ್ಟು ಗರ್ಭಧಾರಣೆಗಳು ಹೆರಿಗೆಯಲ್ಲಿ ಕೊನೆಗೊಳ್ಳುತ್ತವೆ.

ಇಂಟರ್ನ್ಯಾಷನಲ್ ಡೇ ಟು ಎಂಡ್ ಒಬ್​​ಸ್ಟೇಟ್ರಿಕ್​ ಫಿಸ್ತುಲಾ (ಐಡಿಇಒಎಫ್) ಎಂಬುದು ಪ್ರಸವದ ಸಮಯದಲ್ಲಿ ಉಂಟಾದ ಅಸಹನೀಯ ಗಾಯದ ಬಗ್ಗೆ ಗಮನ ಸೆಳೆಯುವ ದಿನವಾಗಿದೆ. ಈ ಗಾಯವು ಇಥಿಯೋಪಿಯಾದ ಸಾವಿರಾರು ಮಹಿಳೆಯರ ಜೀವನದ ಮೇಲೆ ಇಂದಿಗೂ ಪರಿಣಾಮ ಬೀರುತ್ತಲೇ ಇದೆ. ಈ ವರ್ಷ ಫಿಸ್ತುಲಾ ಕೊನೆಗೊಳಿಸುವ ಜಾಗತಿಕ ಅಭಿಯಾನದ 20ನೇ ವಾರ್ಷಿಕೋತ್ಸವ ಮತ್ತು ಪ್ರಸೂತಿ ಫಿಸ್ತುಲಾವನ್ನು ಕೊನೆಗೊಳಿಸುವ ಅಂತಾರಾಷ್ಟ್ರೀಯ ದಿನದ ಸ್ಮರಣಾರ್ಥ 10ನೇ ವರ್ಷಾಚರಣೆ ನಡೆಯುತ್ತಿದೆ.

ದಿನದ ಇತಿಹಾಸ: 2003ರಲ್ಲಿ U.N.F.P.A. ಫಿಸ್ತುಲಾ ಕೊನೆಗೊಳಿಸುವ ಅಭಿಯಾನ ಪ್ರಾರಂಭಿಸಿದಾಗಿನಿಂದ ಈ ದಿನದ ಇತಿಹಾಸವನ್ನು ಗುರುತಿಸಬಹುದು. 2013ರಲ್ಲಿ, ವಿಶ್ವಸಂಸ್ಥೆಯು ಪ್ರಸೂತಿ ಫಿಸ್ತುಲಾವನ್ನು ಕೊನೆಗೊಳಿಸಲು ಅಂತಾರಾಷ್ಟ್ರೀಯ ದಿನಾಚರಿಸಲು ಪ್ರಾರಂಭಿಸಿತು. ಇದು ವಾರ್ಷಿಕ ಅಭಿಯಾನವಾಗಿದೆ.

ಪ್ರಸೂತಿ ಫಿಸ್ತುಲಾ ಎಂಬುದು ಹೆರಿಗೆಗೆ ಸಂಬಂಧಿಸಿದ ಗಾಯವಾಗಿದೆ. ಹೆರಿಗೆ ಪ್ರಕ್ರಿಯೆಯಲ್ಲಿ ಶುಶ್ರೂಷಕಿಯರು ಸಹಾಯ ಮಾಡುವುದರೊಂದಿಗೆ ಹೆರಿಗೆಯು ಸಾಮಾನ್ಯವಾಗಿ ಮನೆಯಲ್ಲಿಯೇ ನಡೆಯುತ್ತಿತ್ತು. 1920ರ ದಶಕದವರೆಗೂ ಅಮೆರಿಕದ ಆಸ್ಪತ್ರೆಗಳಲ್ಲಿ ಹೆರಿಗೆಗಳ ಸಂಖ್ಯೆ ಸಾಮಾನ್ಯವಾಗಿತ್ತು. ಆದಾಗ್ಯೂ, ಈ ಪ್ರಕ್ರಿಯೆಯು ಫೋರ್ಸ್ಪ್ಸ್ ಮತ್ತು ಅರಿವಳಿಕೆಯನ್ನು ಬಳಸುವಂತಹ ವಿಧಾನಗಳನ್ನು ಒಳಗೊಂಡಿತ್ತು. 1942ರಲ್ಲಿ ಪ್ರಕಟವಾದ 'ಹೆಲ್ಡ್ಬರ್ತ್ ವಿಥೌಟ್ ಫಿಯರ್' ಎಂಬ ಪುಸ್ತಕದಲ್ಲಿ ಡಾ.ಗ್ರಾಂಟ್ಲಿ ಡಿಕ್-ರೀಡ್ ಎಂಬ ವೈದ್ಯರು ಅರಿವಳಿಕೆ ಇಲ್ಲದೇ ಮಗುವಿಗೆ ಜನ್ಮ ನೀಡುವುದರ ಪ್ರಯೋಜನಗಳನ್ನು ವಿವರಿಸಿದ್ದಾರೆ.

1970ರ ದಶಕದಲ್ಲಿ ಹೆರಿಗೆ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆಗಳಾದವು. ಎಪಿಡ್ಯೂರಲ್‌ಗಳಂತಹ ನೋವು ನಿವಾರಕಗಳು ಜನಪ್ರಿಯಗೊಂಡವು. 2000ರ ದಶಕದ ಆರಂಭದಲ್ಲಿ, ಸಿಸೇರಿಯನ್​ಗಳು ಯೋನಿ ಜನನಕ್ಕೆ ಪರ್ಯಾಯವಾಯಿತು. ಇಂದು, ಹೆರಿಗೆ ಕಡಿಮೆ ಮಾರಣಾಂತಿಕ ಮತ್ತು ಸುರಕ್ಷಿತವಾಗಿದೆ.

ಅದೇನೇ ಇದ್ದರೂ, ಪ್ರಸೂತಿ ಫಿಸ್ತುಲಾದಂತಹ ಸಮಸ್ಯೆಗಳನ್ನು ಇನ್ನೂ ಹೆಚ್ಚಿನ ಜಾಗೃತಿ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಮೂಲಕ ನಿಭಾಯಿಸಬೇಕಿದೆ. 2024ರ ಅಂತಾರಾಷ್ಟ್ರೀಯ ಪ್ರಸೂತಿ ಫಿಸ್ತುಲಾ ದಿನದ ಥೀಮ್: 'ಬ್ರೇಕಿಂಗ್ ದಿ ಸೈಕಲ್: ಪ್ರಿವೆಂಟಿಂಗ್ ಫಿಸ್ತುಲಾ ವರ್ಲ್ಡ್‌ವೈಡ್' ಎಂಬುದಾಗಿದೆ.

ಪ್ರಸೂತಿ ಫಿಸ್ತುಲಾ- ಕೆಲವು ಮಹತ್ವದ ಸಂಗತಿಗಳು:

  • ಪ್ರಪಂಚದಾದ್ಯಂತ ಸುಮಾರು ಅರ್ಧ ಮಿಲಿಯನ್ (5 ಲಕ್ಷ) ಮಹಿಳೆಯರು ಮತ್ತು ಹುಡುಗಿಯರು ಪ್ರಸೂತಿ ಫಿಸ್ತುಲಾ ಹೊಂದಿದ್ದಾರೆ. ವಾರ್ಷಿಕವಾಗಿ ಸಾವಿರಾರು ಹೊಸ ಪ್ರಕರಣಗಳು ವರದಿಯಾಗುತ್ತಿವೆ.
  • ಶೇ.20-30 ಹೆಚ್ಚುವರಿ ಮಹಿಳೆಯರು ಹೆರಿಗೆ ಗಾಯಗಳನ್ನು ಅನುಭವಿಸುತ್ತಾರೆ. ಅದು ಅವರ ಜೀವನದ ಗುಣಮಟ್ಟ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದೆ.
  • ಕಳೆದೆರಡು ದಶಕಗಳಲ್ಲಿ UNFPA 140,000 ಫಿಸ್ತುಲಾ ಶಸ್ತ್ರಚಿಕಿತ್ಸೆಗಳನ್ನು ಪ್ರೋತ್ಸಾಹಿಸಿದೆ. 2018 ಮತ್ತು 2023ರ ನಡುವೆ 12,000ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರು ಸಾಮಾಜಿಕ ಮರುಸಂಘಟನೆಯ ಬೆಂಬಲ ಪಡೆದಿದ್ದಾರೆ.
  • ಫಿಸ್ತುಲಾ ಮತ್ತಿತರೆ ಹೆರಿಗೆ ಗಾಯಗಳನ್ನು ತಡೆಗಟ್ಟುವಲ್ಲಿ ಶುಶ್ರೂಷಕರು ಪ್ರಮುಖ ಪಾತ್ರ ವಹಿಸುತ್ತಾರೆ.
  • 2021ರ ಅಂಕಿಅಂಶಗಳಂತೆ ಜಗತ್ತು ಅಂದಾಜು 9,00,000 ಶುಶ್ರೂಷಕಿಯರ ಕೊರತೆ ಎದುರಿಸುತ್ತಿದೆ. ಇದರಲ್ಲಿ 5,00,000 ಮಂದಿ ಶುಶ್ರೂಷಕಿಯರು ಆಫ್ರಿಕಾ ಖಂಡಕ್ಕೆ ಬೇಕಾಗಿದ್ದಾರೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಹಾಲಿನಲ್ಲಿ ಸಕ್ಕರೆ ಮಿಕ್ಸ್​ ಮಾಡಿ ಕುಡಿಯುತ್ತಿದ್ದೀರಾ?, ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? - Drinking Milk with Honey

ETV Bharat Logo

Copyright © 2024 Ushodaya Enterprises Pvt. Ltd., All Rights Reserved.