ETV Bharat / sukhibhava

ಹಲೋ ಎಕ್ಸ್​ಕ್ಯೂಸ್ ಮಿ.. ನೀವು ವಯಾಗ್ರ ತೆಗೆದುಕೊಳ್ಳುತ್ತಿದ್ರೆ ಈ ಸುದ್ದಿ ನಿಮಗಾಗಿ!

author img

By

Published : Jun 10, 2022, 7:06 AM IST

ನೀವು Viagra ತೆಗೆದುಕೊಳ್ಳುತ್ತಿದ್ದೀರಾ.. ಹೌದು ಎಂದಾದರೆ ಈ ಸುದ್ದಿ ನಿಮಗಾಗಿ ಮಾತ್ರ. ಸಾಮಾನ್ಯವಾಗಿ ಜನರು ಲೈಂಗಿಕ ಕ್ರಿಯೆ ಹೆಚ್ಚಿಸಲು ಗೊತ್ತಿಲ್ಲದೇ 'ವಯಾಗ್ರ'ದಂತಹ ಔಷಧಗಳನ್ನು ಬಳಸುತ್ತಾರೆ. ಇದರ ಸೇವನೆಯಿಂದ ಅನೇಕ ಬಾರಿ ಪ್ರಾಣಾಪಾಯವೂ ಉಂಟಾಗುತ್ತದೆ. ಹೀಗಾಗಿ ವಯಾಗ್ರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

dangers of viagra  Prayagraj latest news  what are the dangers of viagra  how safe is viagra  ವಯಾಗ್ರ ಎಂದರೇನು  ವಯಾಗ್ರ ಯಾರು ತೆಗೆದುಕೊಳ್ಳಬಹುದು  ವಯಾಗ್ರದಿಂದ ಆಗುವ ಪರಿಣಾಮಗಳೇನು  ವಯಾಗ್ರದಿಂದ ಸುರಕ್ಷತೆ ಹೇಗೆ  ವಯಾಗ್ರ ಬಳಕೆ ಸುದ್ದಿ
ನೀವು ವಯಾಗ್ರ ತೆಗೆದುಕೊಳ್ಳುತ್ತಿದ್ರೆ ಈ ಸುದ್ದಿ ನಿಮಗಾಗಿ

ಪ್ರಯಾಗರಾಜ್: ಲೈಂಗಿಕ ಕ್ರಿಯೆ ಹೆಚ್ಚಿಸುವ ಔಷಧಗಳ ಬಳಕೆ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಾಮಾನ್ಯವಾಗಿದೆ. ಅಧ್ಯಯನದ ಪ್ರಕಾರ, ಪ್ರಪಂಚದಾದ್ಯಂತ 40 - 60 ವರ್ಷ ವಯಸ್ಸಿನ ಸುಮಾರು ಶೇ 52 ಜನರು ಲೈಂಗಿಕ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಶಕ್ತಿ ಮತ್ತು ತಮ್ಮ ಲೈಂಗಿಕ ಕ್ರಿಯೆಯನ್ನು ಅನಿಯಂತ್ರಿತವಾಗಿ ಹೆಚ್ಚಿಸಲು ಔಷಧಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಜನರು ಯಾವುದೇ ತಜ್ಞರ ಸಲಹೆಯಿಲ್ಲದೇ ಇಂತಹ ಔಷಧಗಳನ್ನು ಬಳಸುವುದರಿಂದ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಾರೆ.

ವಯಾಗ್ರ ಎಂದರೇನು?: ಆಡುಮಾತಿನಲ್ಲಿ ಪೊಟೆನ್ಸಿ ಡ್ರಗ್ಸ್ ಎಂದು ಕರೆಯಲ್ಪಡುವ ಪುರುಷ ವರ್ಧನೆಯ ಔಷಧಗಳನ್ನು ಲೈಂಗಿಕ ಸಂಭೋಗದ ಮೊದಲು ಬಳಸಲಾಗುತ್ತದೆ. ಇಂತಹ ಅನೇಕ ಇಂಗ್ಲಿಷ್ ಮತ್ತು ದೇಶೀಯ ಔಷಧಗಳು ವಿವಿಧ ಬ್ರಾಂಡ್‌ಗಳಲ್ಲಿ ಮತ್ತು ಹೆಸರುಗಳಲ್ಲಿ ಸುಲಭವಾಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಸಿಗುತ್ತವೆ. ಸಾಮಾನ್ಯ ಭಾಷೆಯಲ್ಲಿ ಅಂತಹ ಎಲ್ಲ ಔಷಧಗಳನ್ನು ವಯಾಗ್ರ ಎಂದು ಕರೆಯಲಾಗುತ್ತದೆ.

ಈ ಔಷಧವನ್ನು ಯಾರು ತೆಗೆದುಕೊಳ್ಳಬಹುದು?: ಸಾಮಾನ್ಯವಾಗಿ 40 ವರ್ಷಗಳ ನಂತರ ಜನರಿಗೆ ಈ ಔಷಧಗಳ ಅಗತ್ಯವಿರುತ್ತದೆ. ಆದರೆ ಕೆಲವೊಮ್ಮೆ ಯುವಜನರಿಗೆ ಕೆಲವು ಸಮಸ್ಯೆಗಳಿಂದಾಗಿ ಈ ಔಷಧಗಳ ಅಗತ್ಯವಿರುತ್ತದೆ. ಆದರೆ ಇದು ಔಷಧ, ಆದ್ದರಿಂದ ವೈದ್ಯರ ಸಲಹೆಯಿಲ್ಲದೇ ಇದನ್ನು ಸೇವಿಸುವುದು ಅಪಾಯಕಾರಿ.

dangers of viagra  Prayagraj latest news  what are the dangers of viagra  how safe is viagra  ವಯಾಗ್ರ ಎಂದರೇನು  ವಯಾಗ್ರ ಯಾರು ತೆಗೆದುಕೊಳ್ಳಬಹುದು  ವಯಾಗ್ರದಿಂದ ಆಗುವ ಪರಿಣಾಮಗಳೇನು  ವಯಾಗ್ರದಿಂದ ಸುರಕ್ಷತೆ ಹೇಗೆ  ವಯಾಗ್ರ ಬಳಕೆ ಸುದ್ದಿ
ಡಾ. ಅಮಿತ್​ ತ್ರೀಪಾಠಿ, ಯೂರೋ ಲಾಜಿಸ್ಟಿಕ್​

ಇದರಿಂದ ಆಗುವ ಹಾನಿ ಏನು?: ವೈದ್ಯರ ಪ್ರಕಾರ, ಒತ್ತಡದಿಂದಾಗಿ ಯುವಜನರಲ್ಲಿ ಲೈಂಗಿಕ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಸಾಮಾನ್ಯವಾಗಿ ಯುವಕರು ತಮ್ಮ ಸಂಗಾತಿಯ ಮುಂದೆ ಪುರುಷತ್ವವನ್ನು ಹೋಗಲಾಡಿಸಲು ಯೋಚಿಸದೇ ಪುರುಷತ್ವವನ್ನು ಹೆಚ್ಚಿಸುವ ಔಷಧಗಳನ್ನು ಬಳಸುತ್ತಾರೆ. ಆದರೆ ಇದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ವೈದ್ಯಕೀಯ ಸಲಹೆಯಿಲ್ಲದೇ ವಯಾಗ್ರದಂತಹ ಔಷಧಗಳನ್ನು ಸೇವಿಸುವುದರಿಂದ ಹೃದಯಾಘಾತ, ಕಿಡ್ನಿ ವೈಫಲ್ಯ, ದುರ್ಬಲತೆ, ಜನನಾಂಗದ ಹಾನಿಗೆ ಕಾರಣವಾಗಬಹುದು ಎಂದು ಪ್ರಯಾಗರಾಜ್‌ನ ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿರೀಶ್ ಮಿಶ್ರಾ ಈಟಿವಿ ಇಂಡಿಯಾದೊಂದಿಗೆ ವಿಶೇಷ ಸಂವಾದದಲ್ಲಿ ತಿಳಿಸಿದರು.

ಓದಿ: ಲೈಂಗಿಕ ಶಕ್ತಿವರ್ಧಕ ಬಳಸುತ್ತಿದ್ದೀರಾ..ಹಾಗಾದ್ರೆ ಇರಲಿ ಎಚ್ಚರ..!

ಡಾ.ಶಿರೀಶ್ ಮಿಶ್ರಾ ಅವರ ಸಲಹೆಗಳು...

  • ವೈದ್ಯರ ಸಲಹೆಯಿಲ್ಲದೇ ವಯಗ್ರಾದಂತಹ ಔಷಧಗಳನ್ನು ತೆಗೆದುಕೊಳ್ಳಬೇಡಿ
  • ಈ ಔಷಧಿಗಳ ಸೇವನೆಯ ಬಗ್ಗೆ ಯುವಕರು ವಿಶೇಷ ಮುಂಜಾಗ್ರತೆ ವಹಿಸಬೇಕು
  • ಅನೇಕ ಸಂದರ್ಭಗಳಲ್ಲಿ ಅಂತಹ ಔಷಧಗಳ ಅಗತ್ಯವಿಲ್ಲ. ಕೇವಲ ಸಮಾಲೋಚನೆಯು ಸಮಸ್ಯೆಯನ್ನು ಪರಿಹರಿಸುತ್ತದೆ
  • ನಿಗದಿತ ವಯಸ್ಸಿನ ನಂತರ ಒಬ್ಬ ವ್ಯಕ್ತಿಗೆ ಔಷಧ ಬೇಕಾಗಬಹುದು. ಎಷ್ಟು ಔಷಧವನ್ನು ತೆಗೆದುಕೊಳ್ಳಬೇಕು ಎಂಬುದನ್ನು ವೈದ್ಯರೊಂದಿಗೆ ನಿರ್ಧರಿಸಿ
  • ಶಿಶ್ನ ಸಾಮರ್ಥ್ಯದ ಔಷಧಗಳನ್ನು ಬಳಸಬೇಡಿ. ಅವು ಹಾನಿಯನ್ನುಂಟುಮಾಡುತ್ತವೆ
    dangers of viagra  Prayagraj latest news  what are the dangers of viagra  how safe is viagra  ವಯಾಗ್ರ ಎಂದರೇನು  ವಯಾಗ್ರ ಯಾರು ತೆಗೆದುಕೊಳ್ಳಬಹುದು  ವಯಾಗ್ರದಿಂದ ಆಗುವ ಪರಿಣಾಮಗಳೇನು  ವಯಾಗ್ರದಿಂದ ಸುರಕ್ಷತೆ ಹೇಗೆ  ವಯಾಗ್ರ ಬಳಕೆ ಸುದ್ದಿ
    ಶಿರೀಶ್ ಮಿಶ್ರಾ, ಪ್ರಯಾಗರಾಜ್‌ನ ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ

ಎಚ್ಚರಿಕೆ ಅಗತ್ಯ..

  • ಪೋರ್ನ್ ವಿಡಿಯೋಗಳಿಂದ ದೂರವಿರಿ. ಅವು ನಿಮ್ಮನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತವೆ
  • ವೈದ್ಯರ ಸಲಹೆಯಿಲ್ಲದೆ ಅಂತಹ ಔಷಧಗಳನ್ನು ತೆಗೆದುಕೊಳ್ಳಬೇಡಿ
  • ಅನೇಕ ಶಕ್ತಿಶಾಲಿ ಔಷಧಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲ್ಪಡುತ್ತವೆ. ಅವುಗಳಿಂದ ದಾರಿತಪ್ಪಬೇಡಿ
  • ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ
  • ನೀವು ಕೀಳರಿಮೆಯನ್ನು ಅನುಭವಿಸಿದರೆ ಸಲಹೆಗಾರರ ​​ಬಳಿಗೆ ಹೋಗಿ

ಇತ್ತೀಚೆಗೆ ಪ್ರಯಾಗರಾಜ್‌ನ ನವವಿವಾಹಿತರೊಬ್ಬರು ಸ್ನೇಹಿತರ ಒತ್ತಾಯದ ಮೇರೆಗೆ ವಯಾಗ್ರವನ್ನು ತೆಗೆದುಕೊಂಡಿದ್ದರು. ಇದರಿಂದ ಕೆಟ್ಟ ಪರಿಣಾಮಕ್ಕೆ ಒಳಗಾದ ಅವರು, ಆಸ್ಪತ್ರೆಗೆ ದಾಖಲಾಗಿದ್ದರು. ವಾಸ್ತವವಾಗಿ ಅವರು ದೊಡ್ಡ ಪ್ರಮಾಣದಲ್ಲಿ ವಯಾಗ್ರವನ್ನು ತೆಗೆದುಕೊಂಡಿದ್ದರು. ಹೀಗಾಗಿ ಅದು ಅವರ ಜೀವಕ್ಕೆ ಅಪಾಯ ತಂದೊಡ್ಡಿತ್ತು. ವೈದ್ಯರು ಎರಡು ದೊಡ್ಡ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಆ ವ್ಯಕ್ತಿಯನ್ನ ಕಾಪಾಡಿದ್ದಾರೆ. ಹೀಗಾಗಿ ವಯಗ್ರಾ ಬಳಸುವುದಕ್ಕಿಂತ ಮೊದಲು ಈ ಮೇಲಿನ ವಿಷಯವನ್ನೊಮ್ಮೆ ಓದಿ ಮನನ ಮಾಡಿಕೊಳ್ಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.