ETV Bharat / state

ಹ್ಯಾಂಡಲ್​ ಹೊಡೆಯದೆ ನೀರು ಕೊಡುವ ಬೋರ್​ವೆಲ್​: ಮಳೆಗಾಲದಲ್ಲಿ ಮಾತ್ರ ಈ ಆಫರ್​!

author img

By

Published : Aug 29, 2020, 1:01 PM IST

Updated : Aug 29, 2020, 5:03 PM IST

borewell
ಬೋರ್​ವೆಲ್

ಈ ಬೋರ್​ವೆಲ್​ ಇರುವುದು ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎದುರು. ಹ್ಯಾಂಡಲ್​ ಹೊಡೆಯದೆ ತನ್ನಷ್ಟಕ್ಕೆ ತಾನೇ ಸದಾ ಕಾಲ ನೀರು ಹರಿಸುವ ಕಾರಣ ಇದು ಆಕರ್ಷಣೆಯ ಕೇಂದ್ರವಾಗಿದೆ.

ಭಟ್ಕಳ(ಉತ್ತರ ಕನ್ನಡ): ಸಾಮಾನ್ಯವಾಗಿ ಒಂದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದಾಗ ಮಾತ್ರ ಫಲಿತಾಂಶ ಬರುವುದು ಸಹಜ. ಆದ್ರೆ ಯಾವುದೇ ಕ್ರಿಯೆ ಇಲ್ಲದೆ ಪ್ರತಿಕ್ರಿಯೆ ಬಂದರೆ ಅದು ವಿಚಿತ್ರ. ಈ ಪೀಠಿಕೆ ಯಾಕಂದ್ರೆ... ಬೋರ್​ ನೀರು ಬೇಕಂದ್ರೆ ಹ್ಯಾಂಡಲ್​ ಹೊಡಿಬೇಕು, ನೀರು ಪಡೀಬೇಕು. ಆದ್ರೆ ಇಲ್ಲೊಂದು ಬೋರ್​ವೆಲ್​ ಇದೆ. ಇದು ಹ್ಯಾಂಡಲ್ ಹೊಡೆಯದೇ ತನ್ನಷ್ಟೇ ತಾನೇ ನಿರಂತರವಾಗಿ ನೀರು ಹರಿಸುತ್ತದೆ.

ಅಂದಹಾಗೆ ಈ ಬೋರ್​ವೆಲ್​ ಇರುವುದು ಭಟ್ಕಳ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎದುರು. ಹ್ಯಾಂಡಲ್​ ಹೊಡೆಯದೆ ತನ್ನಷ್ಟಕ್ಕೆ ತಾನೇ ಸದಾ ಕಾಲ ನೀರು ಹರಿಸುವ ಕಾರಣ ಇದು ಆಕರ್ಷಣೆಯ ಕೇಂದ್ರವಾಗಿದೆ. ಅಲ್ಲದೆ ನೈಸರ್ಗಿಕವಾಗಿ ನೀರು ಉಕ್ಕಿ ಹರಿಯುವುದರಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಹ್ಯಾಂಡಲ್​ ಹೊಡೆಯದೆ ನೀರು ಕೊಡುವ ಬೋರ್​ವೆಲ್​: ಮಳೆಗಾಲದಲ್ಲಿ ಮಾತ್ರ ಈ ಆಫರ್​!

ಬೇಸಿಗೆಯಲ್ಲಿ ಈ ಬೋರ್​ನಿಂದ ಒಂದು ತೊಟ್ಟು ನೀರು ಸಹ ಜಿನುಗುವುದಿಲ್ಲ. ಆದ್ರೆ ಮಳೆಗಾಲ ಬಂತೆಂದರೆ ಸಾಕು ಒಂದೇ ಸಮನೆ ನೀರು ಸುರಿಯುತ್ತಿರುತ್ತದೆ. ಈ ಬೋರ್​ ಕೊರೆದು ಈಗಾಗಲೇ 15ರಿಂದ 20 ವರ್ಷವೇ ಕಳೆದಿದೆ. ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನೀರು ಪೂರೈಕೆಗೆ ಉಪಯೋಗವಾದ ಈ ಬೋರ್​​ವೆಲ್​ ಸಾಕಷ್ಟು ರಿಪೇರಿ ಸಹ ಕಂಡಿದೆ. ಸದ್ಯ ಈಗ ಈ ಬೋರ್​ವೆಲ್​ ಮತ್ತೆ ಕೆಟ್ಟು ನಿಂತಿದ್ದರೂ ಸಹ ನೀರು ಚಿಮ್ಮುವುದು ಮಾತ್ರ ನಿಂತಿಲ್ಲ ಎನ್ನುವುದೇ ವಿಶೇಷ. ಪ್ರತೀ ವರ್ಷದ ಮಳೆಗಾಲದಲ್ಲಿ ಈ ಬೋರ್​ವೆಲ್​ನಲ್ಲಿ ನೀರು ಹರಿದು ಬರುತ್ತಿದ್ದು ಹ್ಯಾಂಡಲ್ ಹೊಡೆಯವ ಅವಶ್ಯಕತೆಯೇ ಇಲ್ಲವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ಬಳಿಯ ಜನರು.

ಈ ಬಗ್ಗೆ ಇಲ್ಲಿನ ಆಸ್ಪತ್ರೆ ಬಳಿಯ ಆಟೋ ರಿಕ್ಷಾ ಚಾಲಕ ಶಂಕರ ನಾಯ್ಕ, ಈ ಬೋರ್​​ವೆಲ್​​ ಅನಿಸಿಕೆ ಹಂಚಿಕೊಂಡಿದ್ದು, ಮಳೆ ಬಂದರೆ ಮಾತ್ರ ಈ ಬೋರ್​ವೆಲ್​ನಲ್ಲಿ ನೀರು ಬರಲಿದೆ. ಈ ಬಗ್ಗೆ ತಕ್ಷಣಕ್ಕೆ ಸಂಬಂಧಪಟ್ಟ ಇಲಾಖೆಯೂ ಇದನ್ನು ಸರಿಪಡಿಸಿದ್ದಲ್ಲಿ ಸಾರ್ವಜನಿಕರಿಗೂ, ಇಲ್ಲಿನ ಆಟೋ ಚಾಲಕರಿಗೂ ನೀರಿನ ಅನೂಕೂಲವಾಗಲಿದೆ ಎಂದು ಹೇಳಿದ್ದಾರೆ.

Last Updated :Aug 29, 2020, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.