ETV Bharat / sports

ನಾಳೆ ಮಾಡು ಇಲ್ಲವೇ ಮಡಿ ಪಂದ್ಯ; ವಿರಾಟ್​ ಜೆರ್ಸಿ ನಂಬರ್​ 18, ಪಂದ್ಯ ಮೇ 18, ರನ್​ 18, ಓವರ್​ 18!: ಏನಿದರ ನಂಟು!? - Number 18 Special

author img

By ETV Bharat Karnataka Team

Published : May 17, 2024, 8:13 PM IST

ಐಪಿಎಲ್​ನ ಲೀಗ್​ ಹಂತ ಕೊನೆಯ ಘಟ್ಟಕ್ಕೆ ತಲುಪಿದ್ದು, ನಾಳೆ ನಡೆಯಲಿರುವ ಆರ್​ಸಿಬಿ ಮತ್ತು ಚೆನ್ನೈ ನಡುವಣ ಪಂದ್ಯ ಬಹಳ ಕೂತುಹಲ ಕೆರಳಿಸಿದೆ. ಇದರ ಮಧ್ಯೆ 18 ನಂಬರ್​ನ ವಿಶೇಷತೆ ಏನೆಂಬುದು ತಿಳಿಯೋಣ ಬನ್ನಿ..

INDIAN PREMIER LEAGUE  VIRAT KOHLI  IPL PLAYOFFS
ವಿರಾಟ್​ ಜೆರ್ಸಿ ನಂಬರ್​ಗೂ ಮೇ 18ಕ್ಕೂ ಇರುವ ಸಂಬಂಧವೇನು? (ಕೃಪೆ : Virat Kohli (AP File Photo))

ಹೈದರಾಬಾದ್​: ರನ್ ಮಷಿನ್​ ವಿರಾಟ್ ಕೊಹ್ಲಿಗೆ ಸಂಖ್ಯೆ​ '18' ರೊಂದಿಗೆ ವಿಶೇಷವಾದ ಬಾಂಧವ್ಯವಿದೆ. ಇದು ಅವರ ಜರ್ಸಿ ನಂಬರ್​. ವಿರಾಟ್ ಈಗಾಗಲೇ ಹಲವು ಬಾರಿ ಈ ಸಂಖ್ಯೆಯೊಂದಿಗೆ ತಮ್ಮ ಒಡನಾಟ ಹಂಚಿಕೊಂಡಿರುವುದು ಗೊತ್ತಿರುವ ಸಂಗತಿ. ಐಪಿಎಲ್ ಪ್ಲೇ ಆಫ್‌ನಲ್ಲಿ ಈ ಸಂಖ್ಯೆ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಇದರ ಹಿಂದಿರುವ ಸ್ವಾರಸ್ಯಕರ ಸಂಗತಿಗಳು ಹೀಗಿವೆ.

ಮೂರು ತಂಡಗಳು (ಕೋಲ್ಕತ್ತಾ, ರಾಜಸ್ಥಾನ, ಹೈದರಾಬಾದ್) ಈಗಾಗಲೇ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಅಗ್ರ 4ರಲ್ಲಿ ಸ್ಥಾನ ಪಡೆಯುವ ನಾಲ್ಕನೇ ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ.. ಆ ಅವಕಾಶ ಎರಡು ತಂಡಗಳಿಗೆ ಮಾತ್ರ ಇರುವುದು ಗಮನಾರ್ಹ. ಚೆನ್ನೈ ಮತ್ತು ಬೆಂಗಳೂರು ನಡುವಿನ ಅಂತಿಮ ಲೀಗ್ ಪಂದ್ಯ ನಾಲ್ಕನೇ ತಂಡವನ್ನು ನಿರ್ಧರಿಸಲಿದೆ. ಈ ಪಂದ್ಯ ಮೇ 18ರಂದು (ಶನಿವಾರ) ನಡೆಯಲಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೂ ಪ್ಲೇಆಫ್‌ ತಲುಪಲು ಹಲವು ಸಮೀಕರಣಗಳಿವೆ. ಆರ್‌ಸಿಬಿ ಮೊದಲು ಬ್ಯಾಟ್ ಮಾಡಿದರೆ 18 ರನ್, ಎರಡನೇ ಬ್ಯಾಟಿಂಗ್ ಮಾಡಿದರೆ 18 ಓವರ್​ಗಳಲ್ಲಿ ಟಾರ್ಗೆಟ್​ ರೀಚ್​ ಆಗಬೇಕು. ಆಗ ಮಾತ್ರ ಕೊಹ್ಲಿ ಪಡೆ ಅಗ್ರ 4ರೊಳಗೆ ಪ್ರವೇಶಿಸಲಿದೆ.

2013 ಮೇ 18ರಂದು ನಡೆದ ಐಪಿಎಲ್‌ನಲ್ಲಿ ಬೆಂಗಳೂರು ಒಂದೇ ಒಂದು ಪಂದ್ಯದಲ್ಲಿ ಸೋತಿರಲಿಲ್ಲ. ಮತ್ತು ಮೇ 18 ರಂದು ವಿರಾಟ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ದಿನಾಂಕದಂದೇ ಎರಡು ಶತಕಗಳು ಮತ್ತು ಅರ್ಧ ಶತಕ ಸಿಡಿಸಿದ್ದಾರೆ.

ಮೇ 18 ರಂದು RCB ಒಟ್ಟು ನಾಲ್ಕು ಪಂದ್ಯಗಳನ್ನಾಡಿದೆ. ಅದರಲ್ಲಿ ಅವರು ಎರಡು ಬಾರಿ ಚೆನ್ನೈ ತಂಡದ ವಿರುದ್ಧ ಆಡಿರುವುದು ಗಮನಾರ್ಹ. ಈ ಎರಡರಲ್ಲೂ ಬೆಂಗಳೂರು ಗೆದ್ದಿರುವುದು ವಿಶೇಷ. ಈ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಮಿಂಚಿದ್ದರು.

ಮತ್ತೊಮ್ಮೆ ಮೇ 18 ರಂದು ಹೈವೋಲ್ಟೇಜ್​ ಮ್ಯಾಚ್ ನಡೆಯುತ್ತಿದೆ. RCB ಮತ್ತು ಕೊಹ್ಲಿಗೆ ಈ ದಿನಾಂಕ ಕೂಡಿ ಬರುತ್ತಿರುವುದರಿಂದ.. ಈ ಬಾರಿಯೂ ಅವರು ತಮ್ಮ ಪ್ರಾಬಲ್ಯವನ್ನು ಮುಂದುವರೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ..

ಓದಿ: IPL 2024: ಮನಬಿಚ್ಚಿ ಮಾತನಾಡಿದ ವಿರಾಟ್​ ಕೊಹ್ಲಿ... ಮಗಳು ವಾಮಿಕಾ ಬಗ್ಗೆ ಅಚ್ಚರಿಯ ಸಂಗತಿ ಹೊರ ಹಾಕಿದ ಬ್ಯಾಟರ್​​​​! - Virat Kohli on daughter Vamika

ETV Bharat Logo

Copyright © 2024 Ushodaya Enterprises Pvt. Ltd., All Rights Reserved.