ETV Bharat / state

ಪಾವಗಡ ಪಟ್ಟಣದಲ್ಲಿ ಹಾಡಹಗಲೇ ಮಟ್ಕಾ ದಂಧೆ!

author img

By

Published : Jun 28, 2022, 8:35 PM IST

Updated : Jun 28, 2022, 9:53 PM IST

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

King Pins are running the Matka dande in the daytime at Pavagada
ಹಾಡಹಗಲೇ ಮಟ್ಕಾ ದಂಧೆ ನಡೆಸುವ ಕಿಂಗ್​ಪಿನ್​ಗಳು

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಮಧ್ಯಭಾಗದಲ್ಲಿ ಮಟ್ಕಾ ಬರೆಯುತ್ತಿರುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಹಸನ್ ಸಾಬ್ ಎಂಬಾತ ಮಟ್ಕಾ ನಡೆಸುವ ವಿಡಿಯೋ ವೈರಲ್ ಆಗಿದ್ದು, ಯಾವುದೇ ಅಂಜಿಕೆ ಇಲ್ಲದೆ, ಮಟ್ಕಾ ಬರೆಯುತ್ತಿದ್ದ ಚೀಟಿ ಪ್ರದರ್ಶಿಸಿದ್ದಾನೆ.

ಪಾವಗಡ ಪಟ್ಟಣದಲ್ಲಿ ಹಾಡಹಗಲೇ ಮಟ್ಕಾ ದಂಧೆ

ಇನ್ನು ತಾನು ಅಶ್ವತಪ್ಪ ಎಂಬ ಮಟ್ಕಾ ಕಿಂಗ್ ಪಿನ್​ಗೆ ಕೆಲಸ ಮಾಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾನೆ. ಪಾವಗಡ ಪಟ್ಟಣದಲ್ಲಿ ದಂಧೆ ಯಾವುದೇ ರೀತಿಯ ಭಯವಿಲ್ಲದೆ ನಡೆಯುತ್ತಿರುವುದು ಈ ಮೂಲಕ ಸ್ಪಷ್ಟವಾಗಿದೆ.

ಇದನ್ನೂ ಓದಿ: ಕೊಡಗು: ವಲಸೆ ಕಾರ್ಮಿಕರಿಂದ ಹೆಚ್ಚುತ್ತಿವೆ ಅಪರಾಧ ಪ್ರಕರಣಗಳು.. ಎಚ್ಚೆತ್ತುಕೊಳ್ಳದಿದ್ದರೆ ಆಪತ್ತು

Last Updated :Jun 28, 2022, 9:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.